ಸಾಸ್ತಾನ : ನಕಲಿ ಖಾತೆ ಸೃಷ್ಟಿಸಿ ಅಶ್ಲೀಲ ಸಂದೇಶ- ದೂರು ದಾಖಲು
ಉಡುಪಿ: ಫೇಸ್ಬುಕ್ ವ್ಯಾಟ್ಸಪ್ ಬಗ್ಗೆ ಜ್ಞಾನವೇ ಇಲ್ಲದ ಸಾಸ್ತಾನ ಪರಿಸರದ ಅಮಾಯಕ ವಾಹನ ಚಾಲಕ ಪ್ರಕಾಶ್ ಶೆಟ್ಟಿ ಎಂಬವರ ಹೆಸರಿನಲ್ಲಿ ಕಿಡಿಗೇಡಿಗಳು ಅಶ್ಲೀಲ ಸಂದೇಶ ಪೋಸ್ಟ್ ಮಾಡಲಾಗುತ್ತಿದ್ದು, ಹಲವರಿಗೆ ಫ್ರೆಂಡ್ ರಿಕ್ವಸ್ಟ್ ಕಳುಹಿಸಿದ್ದು ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಜಿಲ್ಲಾ ಸೈಬರ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.
ಪ್ರಕಾಶ್ ಶೆಟ್ಟಿಯವರು ಸಾಸ್ತಾನ ಪರಿಸರದಲ್ಲಿ ಟೆಂಪೊ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು ಪರಿಸರದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದು, ತನ್ನ ಅದ್ಬುತ ಹಾಸ್ಯ ನಟನೆಯಿಂದ ಸಾವಿರಾರು ಕುಂದಕನ್ನಡ ಪ್ರೇಮಿಗಳ ಮನ ಗೆದ್ದು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುತ್ತಾರೆ. ಇದುವರೆಗೂ ಕೂಡ ಸ್ಮಾರ್ಟ್ ಫೋನ್ ಕೂಡ ಹೊಂದಿರದ ಪ್ರಕಾಶ್ ಶೆಟ್ಟಿಯವರ ಹೆಸರಿನಲ್ಲಿ ಖಾತೆಯನ್ನು ತೆರೆದಿದ್ದಲಲ್ಲದೆ ಅದರಲ್ಲಿ ಅಶ್ಲೀಲ ಸಂದೇಶ ಪೋಸ್ಟ್ ಹಾಕುವುದರೊಂದಿಗೆ ತಮ್ಮ ತೇಜೋವಧೆ ಮಾಡುತ್ತಿದ್ದಾರೆ.
ನಕಲಿ ಖಾತೆ ಸೃಷ್ಟಿಸಿರುವವರ ಬಗ್ಗೆ ಮಾಹಿತಿ ಇಲ್ಲ. ನಕಲಿ ಖಾತೆ ಸೃಷ್ಟಿಸಿ, ದುಷ್ಕೃತ್ಯ ಎಸಗುತ್ತಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನುಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ.