Home Mangalorean News Kannada News ಸಾಸ್ತಾನ ಸಂತ ಅಂತೋನಿ ಚರ್ಚಿನ ಶತಮಾನೋತ್ಸವ ವರ್ಷಕ್ಕೆ ಚಾಲನೆ

ಸಾಸ್ತಾನ ಸಂತ ಅಂತೋನಿ ಚರ್ಚಿನ ಶತಮಾನೋತ್ಸವ ವರ್ಷಕ್ಕೆ ಚಾಲನೆ

Spread the love

ಸಾಸ್ತಾನ ಸಂತ ಅಂತೋನಿ ಚರ್ಚಿನ ಶತಮಾನೋತ್ಸವ ವರ್ಷಕ್ಕೆ ಚಾಲನೆ

ಕೋಟ: ಸಾಸ್ತಾನ ಸಂತ ಅಂತೋನಿ ಚರ್ಚಿನ ಶತಮಾನೋತ್ಸವ ವರ್ಷದ ಸಮಾರಂಭಕ್ಕೆ ಬುಧವಾರ ಅದ್ದೂರಿ ಚಾಲನೆ ದೊರಕಿತು.

ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಡಾ|ಬ್ಯಾಪ್ಟಿಸ್ಟ್ ಮಿನೇಜಸ್ ಅವರು ಭತ್ತದ ಕಳಸಿಗೆಗೆ ಭತ್ತ ತುಂಬಿಸಿ ತೆಂಗಿನ ಮರದ ಪಿಂಗಾರ ಅರಳಿಸುವುದರ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮೊನ್ಸಿಂಜ್ಞೊರ್ ಡಾ|ಬ್ಯಾಪ್ಟಿಸ್ಟ್ ಮಿನೇಜಸ್ ಕಳೆದ 99 ವರ್ಷಗಳಲ್ಲಿ ಚರ್ಚಿನಲ್ಲಿ ಕ್ರೈಸ್ತ ಸಮುದಾಯದ ವಿಶ್ವಾಸ ವೃದ್ಧಿಸುವ ಕೆಲಸ ನಡೆದಿದೆ. ಈ ಮೂಲಕ ಈ ಭಾಗದಲ್ಲಿ ಕ್ರೈಸ್ತ ಸಮುದಾಯದ ಅಸ್ತಿತ್ವ ಬೆಳೆಸುವುದರ ಮೂಲಕ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಸಾಸ್ತಾನ ಧರ್ಮಕೇಂದ್ರ ಸಾಕ್ಷಿಯಾಗಿದೆ. ಈ ಶತಮಾನೋತ್ಸವದ ಆಚರಣೆ ಕೇವಲ ಸಂಭ್ರಮಕ್ಕೆ ಸೀಮಿತವಾಗದೆ ಈ ಮೂಲಕ ಸಮಾಜದಲ್ಲಿ ಕ್ರೈಸ್ತರ ವಿಶ್ವಾಸ ವೃದ್ಧಿಸುವ ಕೆಲಸ ನೇರವೇರಲಿ ಎಂದು ಶುಭ ಹಾರೈಸಿದರು.

ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಹಾಗೂ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಪ್ರಧಾನ ಧರ್ಮಗುರು ವಂ| ಸ್ಟ್ಯಾನಿ ಬಿ ಲೋಬೊ ಪ್ರಮುಖ ಧರ್ಮಗುರುಗಳಾಗಿ ಪವಿತ್ರ ಬಲಿಪೂಜೆ ನೆರವೇರಿಸಿದರು.

ಪವಿತ್ರ ಬಲಿಪೂಜೆಯ ಬಳಿಕ ಶತಮಾನೋತ್ಸವ ಸಂಭ್ರಮ ಉದ್ಘಾಟನೆಯ ಪ್ರಯುಕ್ತ ಚರ್ಚು ತನ್ನ 99 ವರ್ಷಗಳನ್ನು ಪೊರೈಸಿದ ಪ್ರಯುಕ್ತ 99 ಬಲೂನುಗಳನ್ನು ಗಾಳಿಯಲ್ಲಿ ಹಾರಿಬಿಡಲಾಯಿತು.

ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಂ|ಡಾ|ಲೊರೇನ್ಸ್ ಡಿಸೋಜಾ, ಚರ್ಚಿನ ಆಡಳಿತ ಸಮಿತಿಯ ಕಾರ್ಯದರ್ಶಿ ಲೂಯಿಸ್ ಮ್ಯಾಕ್ಷಿಮ್ ಡಿ’ಸೋಜಾ, ಪೆರಂಪಳ್ಳಿ ಚರ್ಚಿನ ವಂ|ಅನಿಲ್ ಡಿಸೋಜಾ, ಕುಂದಾಪುರ ಸೈಂಟ್ ಮೇರಿಸ್ ಕಾಲೇಜಿನ ಪ್ರಾಂಶುಪಾಲ ವಂ|ಪ್ರವೀಣ್ ಅಮೃತ್ ಮಾರ್ಟಿಸ್, ಬ್ರಹ್ಮಾವರ ಚರ್ಚಿನ ವಂ|ವಿಕ್ಟರ್, ತೊಟ್ಟಾಂ ಚರ್ಚಿನ ವಂ|ಫ್ರಾನ್ಸಿಸ್ ಕರ್ನೆಲಿಯೋ ಹಾಗೂ ಇತರ ಧರ್ಮಗುರುಗಳು ಉಪಸ್ಥಿತರಿದ್ದರು.

ಸಾಸ್ತಾನ ಚರ್ಚಿನ ಧರ್ಮಗುರುಗಳಾದ ವಂ|ಜಾನ್ ವಾಲ್ಟರ್ ಮೆಂಡೊನ್ಸಾ ಸ್ವಾಗತಿಸಿ ವಂದಿಸಿದರು. ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೊಂಕಣಿ ಹಾಸ್ಯಮಯ ನಾಟಕ ಬಜೀ ನಂಜ್ಯಾಳೊ ಪ್ರದರ್ಶಿಲಾಯಿತು.


Spread the love

Exit mobile version