ಸಾಹಿತ್ಯದ ಅರಿವು ಶ್ರೇಷ್ಠವಾದದ್ದು : ಮೇಯರ್ ವಿೂನಾಕ್ಷಿ ಪೂಜಾರಿ
ಮುಂಬಯಿ: ಸಾಹಿತ್ಯದ ಅರಿವು ಶ್ರೇಷ್ಠವಾದದ್ದು. ತುಳುಕನ್ನಡಿಗ ಬರಹಗಾರರು ಮತ್ತು ಸಾಹಿತಿಗಳ ಬರವಣಿಗೆ ಸಾಮಾಜಿಕ ಪರಿವರ್ತನೆಗೆ ಪ್ರೇರಕವಾಗಿದೆ. ಆದುದರಿಂದಲೇ ಅವರು ಜನಮಾನಸದಲ್ಲಿನ ನೆಲೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ದಕ್ಷಿಣ ಭಾರತೀಯರ ಅದ್ವೀತಿಯ ಸಾಧನೆ ಆಗಿದ್ದು ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಕ್ಕೆ ನಿಸ್ವಾರ್ಥದ ಸೇವೆ ನೀಡಿರುವುದು ಅಭಿನಂದನೀಯ ಎಂದು ಶಿವಸೇನಾ ಪಕ್ಷದ ಧುರೀಣೆ, ಥಾಣೆ ಮಹಾನಗರಪಾಲಿಕಾ ಮಹಾಪೌರೆ ವಿೂನಾಕ್ಷಿ (ರಾಜೇಂದ್ರ ಶಿಂಧೆ) ಪೂಜಾರಿ ನುಡಿದರು.
ಇಂದಿಲ್ಲಿ ಆದಿತ್ಯವಾರ ಸಂಜೆ ಗೋರೆಗಾಂವ್ ಪಶ್ಚಿಮದ ಕೇಶವ್ ಗೋರೆ ಸಭಾಗೃಹದಲ್ಲಿ ನಾಡಿನ ಹೆಸರಾಂತ ಸಾಹಿತಿ, ಅಂಕಣಕಾರ ರವಿ ರಾ.ಅಂಚನ್ ಅವರ ಅವಳಿ ಜವಳಿ ಎನ್ನಲಾದ `ಜನಸಿರಿ’ ಕನ್ನಡ ಕಾವ್ಯ ಕೃತಿ ಹಾಗೂ `ಮನಸಿರಿ’ ತುಳು ಕವನ ಸಂಕಲನಗಳನ್ನು ಏಕಕಾಲಕ್ಕೆ ಬಿಡುಗಡೆ ಗೊಳಿಸಿ ವಿೂನಾಕ್ಷಿ ಪೂಜಾರಿ ಮಾತನಾಡಿದರು.
ಶೈಲಜ ಅಂಚನ್ ಫೌಂಡೇಶನ್ ಮುಂಬಯಿ, ಸಿರಿವರ ಪ್ರಕಾಶನ ಬೆಂಗಳೂರು ಹಾಗೂ ವೀರ ಕೇಸರಿ ಕಲಾವೃಂದ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿüಗ ಳಾಗಿ ಮೊಗವೀರ ಮಾಸಿಕದ ಸಂಪಾದಕ ಜಿ.ಕೆ ರಮೇಶ್, ವೀರ ಕೇಸರಿ ಕಲಾವೃಂದದ ನಿಕಟಪೂರ್ವ ಅಧ್ಯಕ್ಷ ಪಯ್ಯಾರ್ ರಮೇಶ್ ಶೆಟ್ಟಿ, ಗೋರೆಗಾಂವ್ ಕರ್ಣಾಟಕ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ, ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ ರಂಗ ಕೆ.ಪಾಲನ್, ಮುಂಬಯಿ ರೇಲ್ವೆ ಪ್ರವಾಸಿ ಸಂಘದ ಅಧ್ಯಕ್ಷ ಮಧು ಕೋಟ್ಯಾನ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್, ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್‍ನ ಅಧ್ಯಕ್ಷ ಎ.ಕೆ ಹರೀಶ್, ಸಮಾಜ ಸೇವಕರುಗಳಾದ ಸುರೇಶ್‍ಕುಮಾರ್ ಮುಲುಂಡ್, ಶಂಕರ್ ಪೂಜಾರಿ ಭಾಂಡೂಪ್, ಸದಾನಂದ ಕೆ. ಅಂಚನ್ ಥಾಣೆ ವೇದಿಕೆಯಲ್ಲಿ ಉಪಸ್ಥಿತರಿದ್ದು ರಂಗಕರ್ಮಿ ಸಾ.ದಯಾ (ದಯಾನಂದ್ ಸಾಲ್ಯಾನ್) ಅವರು ಜನಸಿರಿ ಕೃತಿಯನ್ನು ಹಾಗೂ ಹಿರಿಯ ಲೇಖಕಿ ಲಲಿತ ಪ್ರಭು ಅಂಗಡಿ ಅವರು ಮನಸಿರಿ ಸಂಕಲನ ಪರಿಚಯಿಸಿದರು.
ಕೃತಿಕಾರ ರವಿ ರಾ.ಅಂಚನ್ ಮಾತನಾಡಿ ಶೀಘ್ರವೇ ನನ್ನ 25ನೇ ಕೃತಿ ಲೋಕಾರ್ಪಣೆಗೊಳ್ಳಲಿದೆ. ನನ್ನ ರಚನೆಯ ಭವಿಷ್ಯತ್ತಿನ ಎಲ್ಲ ಕೃತಿಗಳಿಗೂ ತಮ್ಮೆಲ್ಲರ ಸಹಕಾರವಿರಲಿ ಎನ್ನುತ್ತಾ ಈ ವರೇಗಿನ ಸಂಕಲನಗಳ ಬಿಡುಗಡೆಗೆ ಸಹಯೋಗವಿತ್ತ ಸರ್ವರನ್ನೂ ಸ್ಮರಿಸಿದರು.
ವೀರ ಕೇಸರಿ ಕಲಾವೃಂದ ಅಧ್ಯಕ್ಷೆ ಶಕುಂತಲಾ ಆರ್.ಪ್ರಭು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಪ್ರವೀಣ ನಾರಾಯಣ ಅಂಚನ್ ಬಳಗವು ಪ್ರಾರ್ಥನೆಯನ್ನಾಡಿದರು. ಗುಣೋದಯ ಐಕಳ, ಸುಗಂಧಿ ಶ್ಯಾಮ ಹಳೆಯಂಗಡಿ, ರಮಾ ಆರ್.ನಾಯಕ್, ಸುಗುಣಾ ಎಸ್.ಬಂಗೇರಾ, ಬೇಬಿ ರಂಗ ಪೂಜಾರಿ, ಮೋಹಿನಿ ಪೂಜಾರಿ, ಶಿವಾನಂದ ಶೆಟ್ಟಿ, ರಜನಿ ವಿ.ಪೈ, ಯಶೋಧ ಸತೀಶ್ ಪೂಜಾರಿ, ಜಯಕರ ಡಿ.ಪೂಜಾರಿ ಅತಿಥಿüಗಳನ್ನು ಪರಿಚಯಿಸಿದರು.
ರಕ್ಷಿತಾ ಹೆಗ್ಡೆ, ಲೀಲಾ ಗಣೇಶ್, ಕೆ.ವಿ.ಆರ್ ಐತಾಳ್, ರಕ್ಷಿತಾ ನಾಯಕ್, ಸುಜಲತಾ ಪೂಜಾರಿ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಸಿರಿವರ ಪ್ರಕಾಶನದ ಪ್ರಕಾಶಕ ರವಿ ಸಿರಿವರ ಅವರ ಸಂದೇಶವನ್ನು ಹೇಮಾ ಎಸ್.ಅವಿೂನ್ ವಾಚಿಸಿದರು. ಶೈಲಜ ಅಂಚನ್ ಫೌಂಡೇಶನ್‍ನ ಸಂಚಾಲಕಿ ಡಾ| ಅಕ್ಷರಿ ಆರ್.ಅಂಚನ್ ಕಾರ್ಯಕ್ರಮ ನಿರೂಪಿಸಿದರು. ವೀರ ಕೇಸರಿ ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ನಗರದಲ್ಲಿನ ನೂರಾರು ತುಳು ಕನ್ನಡ ಸಾಹಿತ್ಯಾಭಿಗಳು ಉಪಸ್ಥಿತರಿದ್ದರು.