Home Mangalorean News Kannada News ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಹಚ್ಚಲಾದ ಮೊಬೈಲ್ ಹಸ್ತಾಂತರ

ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಹಚ್ಚಲಾದ ಮೊಬೈಲ್ ಹಸ್ತಾಂತರ

Spread the love

ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಹಚ್ಚಲಾದ ಮೊಬೈಲ್ ಹಸ್ತಾಂತರ

  • 1.2 ಲಕ್ಷ ಮೌಲ್ಯದ 12 ಮೊಬೈಲ್ ಹಸ್ತಾಂತರ 

ಕುಂದಾಪುರ: ಎ.1 ರಿಂದ ಜೂ.10 ರವರೆಗೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿರುವ ಒಟ್ಟು 12 ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ಮರಳಿ ಮಾಲಿಕರಿಗೆ ಹಸ್ತಾಂತರಿಸಲಾಯಿತು.

ಗುರುವಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಾಲಿಕರಿಗೆ ಮೊಬೈಲ್ ಮರಳಿ ನೀಡುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಅಧಿಕಾರಿಗಳು, ಮೊಬೈಲ್ ಖರೀದಿ ಮಾಡುವ ಗ್ರಾಹಕರು ಸಿಇಐಆರ್ (ಸೆಂಟ್ರಲ್ ಇಕ್ಯೂಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ) ಪೋರ್ಟಲ್ ನಲ್ಲಿ
ನೊಂದಾಯಿಸುವುದರಿಂದ, ಕಳವಾದ ಹಾಗೂ ನಾಪತ್ತೆಯಾದ ಮೊಬೈಲ್ಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಅನುಕೂಲವಾಗುತ್ತದೆ ಹಾಗೂ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದರು.

ಮೊಬೈಲ್ ದುರ್ಬಳಕೆ ತಡೆಯಲು ಹಾಗೂ ಕಳೆದುಕೊಂಡಿರುವ ಮೊಬೈಲ್ ಪತ್ತೆಗಾಗಿ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್‌ಗಳ ವಿವರಗಳನ್ನು ಸಿಇಐಆರ್ ಪೋರ್ಟಲ್ ನಲ್ಲಿ ದಾಖಲಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್.ಕೆ ತಿಳಿಸಿದ್ದಾರೆ.

ಕುಂದಾಪುರ ಪೋಲೀಸ್ ಠಾಣೆಯಲ್ಲಿ ಈವರೆಗೆ ಒಟ್ಟು 65 ಮೊಬೈಲ್‌ಗಳನ್ನು ಸಿಇಐಆರ್ ತಂತ್ರಾಂಶದ ಮೂಲಕ ಪತ್ತೆಹಚ್ಚಿ ಅದರ ಮಾಲೀಕರಿಗೆ ನೀಡಲಾಗಿದೆ. ಉಡುಪಿ ಜಿಲ್ಲಾ ಎಸ್.ಪಿ. ಡಾ.ಅರುಣ್.ಕೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ. ಸಿದ್ಧಲಿಂಗಪ್ಪ, ಹಾಗೂ ಪರಮೇಶ್ವರ ಹೆಗಡೆ, ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಯು.ಬೆಳ್ಳಿಯಪ್ಪ ಅವರ ನಿರ್ದೇಶನದಂತೆ, ಕುಂದಾಪುರ ಪೊಲೀಸ್ ನಿರೀಕ್ಷಕ ಯು.ಬಿ.ನಂದಕುಮಾರ್‌ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣೆಯ ಉಪನಿರೀಕ್ಷಕರಾದ ವಿನಯ್.ಎಂ. ಕೊರ್ಲಹಳ್ಳಿ, ಪ್ರಸಾದ್ ಕುಮಾರ್ ಕೆ. ಹಾಗೂ ಸಿಬ್ಬಂದಿಯವರಾದ ಸಿದ್ದಪ್ಪ ಸಕನಳ್ಳಿ, ಮಾರುತಿ ನಾಯ್ಕ ತಾಂತ್ರಿಕ ಸಿಬ್ಬಂದಿ ಅಶ್ವಿನ್ ಕುಮಾರ್‌ ಭಾಗವಹಿಸಿದ್ದರು.

ಮಾಲಿಕರಿಗೆ ಮರಳಿ ನೀಡಲಾದ ಮೊಬೈಲ್ ಗಳನ್ನು ಹಾವೇರಿ, ಗದಗ, ಮಂಗಳೂರು, ದಾವಣಗೆರೆ, ಕಾರವಾರ ಮುಂತಾದ ಕಡೆಗಳಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.


Spread the love

Exit mobile version