ಸಿಪಿಐ ರಾಜ್ಯ ಕಚೇರಿ ಮೇಲೆ ದಾಳಿ – ದ ಕ ಮತ್ತು ಉಡುಪಿ ಜಿಲಾ ಸಮಿತಿಯಿಂದ ಖಂಡನೆ

Spread the love

ಸಿಪಿಐ ರಾಜ್ಯ ಕಚೇರಿ ಮೇಲೆ ದಾಳಿ – ದ ಕ ಮತ್ತು ಉಡುಪಿ ಜಿಲಾ ಸಮಿತಿಯಿಂದ ಖಂಡನೆ

ಮಂಗಳೂರು: ಬೆಂಗಳೂರಿನ ವೈಯಾಲಿಕಾವಲ್ನಲ್ಲಿರುವ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಮಂಡಲಿ ಕಛೇರಿಗೆ ನಿನ್ನೆ ರಾತ್ರಿ ಕೆಲವು ದುಷ್ಕರ್ಮಿಗಳು ನುಗ್ಗಿ ಹೊರಗಿದ್ದ ಕೆಲವು ವಾಹನಗಳಿಗೆ ಬೆಂಕಿಹಚ್ಚಿ ಕಛೇರಿಗೂ ಬೆಂಕಿ ಹಚ್ಚಲು ಪ್ರಯತ್ನಿಸಿರುವರು. ಬೆಂಗಳೂರಲ್ಲಿ ಪಕ್ಷದ ಬೆಳವಣಿಗೆ ಮತ್ತು ಕೇಂದ್ರ ಸರಕಾರದ ಧೋರಣೆಗಳನ್ನು ಪಕ್ಷ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುಕೃತ್ಯಗಳ ಹಿಂದೆ ಬಲಪಂಥೀಯ ಶಕ್ತಿಗಳ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಭಾರತ ಕಮ್ಯುನಿಸ್ಟ್ ಪಕ್ಷದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಬಲಪಂಥೀಯರ ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತದೆ. ರಾಜ್ಯ ಸರಕಾರ ಈ ಬಗ್ಗೆ ಕೂಡಲೇ ಕ್ರಮ ವಹಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಸಂಘಟನೆ ಆಗ್ರಹಿಸಿದೆ


Spread the love