ಮಂಗಳೂರು ಸಿಸಿಬಿ ಕಾರ್ಯಾಚರಣೆ| ಅಕ್ರಮ ಜೂಜಾಟದ ಅಡ್ಡೆಗೆ ದಾಳಿ: 20 ಮಂದಿಯ ಸೆರೆ
ಮಂಗಳೂರು: ನಗರ ಕಮೀಷನರೇಟ್ ವ್ಯಾಪ್ತಿಯ ಕಂಕನಾಡಿ ನಗರ ಹಾಗೂ ಬಂದರ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಜೂಜಾಟದ ಅಡ್ಡೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 20 ಮಂದಿಯನ್ನು ಬಂಧಿಸಿ 75,920 ರೂ. ನಗದು, ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಆಡಂಕುದ್ರುನಿಂದ ಸತ್ತಾರ್ ಸಾಬ್, ಸಂಜಯ ಸಾಹಿ, ಜಿತೇಂದ್ರ ಚೌಧರಿ, ರಾಮ್ ಪುಕಾರ್, ಅಭಿರಾಮ್ ರಾಯ್, ಕಬುತ್ ರಾಯ್, ಸಮರ್ಜೀತ್, ಮುರುಳಿ ಮಾತೋ ಎಂಬವರನ್ನು ಬಂಧಿಸಿ 42,800 ರೂ., ಇಸ್ಪೀಟ್ ಕಾರ್ಡ್ ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂದರ್ ಠಾಣಾ ವ್ಯಾಪ್ತಿಯ ಕಾರ್‌ಸ್ಟ್ರೀಟ್ ಬಳಿಯ ಮನೆಯೊಂದರಿಂದ ನಾಗರಾಜ್, ಮನೋಜ್ ಕುಮಾರ್, ಸಮೀರ್ ಅಹ್ಮದ್, ಸಂತೋಷ್, ಮಂಜುನಾಥ, ಶರತ್ ಕುಮಾರ್, ಉಮ್ಮರ್ ಫಾರೂಕ್, ಅಶೋಕ್ ಡಿಸೋಜ, ನವೀನ್ ಅಂಗಡಿ, ಕಿಶನ್, ನೀಲಪ್ಪ ಮಿಟಿ, ಅಪ್ಸರ್ ಎಂಬವರನ್ನು ಬಂಧಿಸಿದ 33,120 ರೂ., ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.