ಸಿಸಿಬಿ ಕಾರ್ಯಾಚರಣೆ: ದರೋಡೆ ಹಾಗೂ ಕೊಲೆಗೆ ಸಂಚು  ರೂಫಿಸುತ್ತಿದ್ದವರ ಸೆರೆ

Spread the love

ಸಿಸಿಬಿ ಕಾರ್ಯಾಚರಣೆ: ದರೋಡೆ ಹಾಗೂ ಕೊಲೆಗೆ ಸಂಚು  ರೂಫಿಸುತ್ತಿದ್ದವರ ಸೆರೆ

ಮಂಗಳೂರು : ಮಂಗಳೂರು ನಗರದ ಫಳ್ನೀರ್ ಬಳಿಯಲ್ಲಿ  ದರೋಡೆ  ಹಾಗೂ ಕೊಲೆಗೆ ಸಂಚು ರೂಫಿಸುತ್ತಿದ್ದ 4 ಮಂದಿಯನ್ನು ವಶಕ್ಕೆ ಪಡೆದುಕೊಂಡು  3 ಹತ್ಯಾರುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಫಳ್ನೀರ್ ಎಂಬಲ್ಲಿ ಟಾಟಾ ಸುಮೋ ವಾಹನವೊಂದರಲ್ಲಿ ಬಂದ 9-10 ಮಂದಿ ಯುವಕರು ದರೋಡೆ ಹಾಗೂ ಕೊಲೆಗೆ ಸಂಚು ರೂಫಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಮಾರಾಕಾಯುಧಗಳೊಂದಿಗೆ ದರೋಡೆ ಹಾಗೂ ಕೊಲೆಗೆ ಸಂಚು ರೂಫಿಸುತ್ತಿದ್ದ  ಉಳ್ಳಾಲ ತೊಕ್ಕೊಟ್ಟುವಿನ ಮನೋಜ್ ಕುಮಾರ್ (33), ಪ್ರಸಾದ್ ಯಾನೆ ಪಚ್ಚು (28), ಶ್ರವಣ್ (22), ಸುಜಿತ್ (27) ಎಂಬವರನ್ನು ಮುಲ್ಕಿ ಚಿತ್ರಾಪು ಎಂಬಲ್ಲಿ ವಶಕ್ಕೆ ಪಡೆದುಕೊಂಡು ಅವರ ವಶದಿಂದ ತಲವಾರು, ಮಚ್ಚು, ಚೂರಿಗಳನ್ನು , 40 ಗ್ರಾಂ ಗಾಂಜಾ ಮತ್ತು 3 ಮೊಬೈಲ್ ಫೋನ್ ಗಳು, ಟಾಟಾ ಸುಮೋ ಕಾರು,  ಒಟ್ಟು ರೂ. 1,19,000/-   ಮೌಲ್ಯದ ಸೊತ್ತುಗನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಆರೋಪಿಗಳ ಪೈಕಿ ಪ್ರಸಾದ್ @ ಪಚ್ಚು ಎಂಬಾತನ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ 2 ಹಲ್ಲೆ ಪ್ರಕರಣ, 3 ಕೊಲೆ ಯತ್ನ ಪ್ರಕರಣ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವೊಂದು ದಾಖಲಾಗಿರುತ್ತದೆ. ಈತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಇರುತ್ತದೆ.

ಆರೋಪಿ ಶ್ರವಣ್ ಎಂಬಾತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣವೊಂದು ದಾಖಲಾಗಿರುತ್ತದೆ.

ಆರೋಪಿ ಮನೋಜ್ ಎಂಬಾತನ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣವೊಂದು ದಾಖಲಾಗಿರುತ್ತದೆ.

ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶಾಂತಾರಾಮ್ ಮತ್ತು ಸಿಬ್ಬಂದಿಯವರು ಈ ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿ ದರೋಡೆ ಹಾಗೂ ಸಂಚು ರೂಫಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿಗಳ ಈ ಕೃತ್ಯದಲ್ಲಿ ಇತರರು ಭಾಗಿಯಾಗಿದ್ದು, ಇವರ ಪತ್ತೆ ಕಾರ್ಯ ಮುಂದುವರಿದಿದೆ.


Spread the love