ಸಿಸಿಬಿ ಪೊಲೀಸರ ಕಾರ್ಯಚರಣೆ :ಬೃಹತ್ ಪ್ರಮಾಣದ ಗಾಂಜಾ ಪತ್ತೆ
ಮಂಗಳೂರು: ಮಂಗಳೂರು ನಗರಕ್ಕೆ ಹಾಗೂ ಕಾಸರಗೋಡು ಜಿಲ್ಲೆಗೆ ಬೃಹತ್ ಪ್ರಮಾಣದಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಟೊಯೊಟಾ ಇನ್ನೋವಾ ಕಾರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತನನ್ನು ಕಾಸರಗೋಡು ಜಿಲ್ಲೆ ಉಪ್ಪಳ ನಿವಾಸಿ ಮೊಯಿದ್ದೀನ್ ನವಾಸ್ (29) ಎಂದು ಗುರುತಿಸಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನಿಡಿದ ಪೋಲಿಸ್ ಆಯುಕ್ತ ಚಂದ್ರಶೇಖರ್ ಅವರು ಆಂಧ್ರಪ್ರದೇಶದ ವಿಶಾಖಪಟ್ಣ ಬಳಿಯಿಂದ ಬೃಹತ್ ಪ್ರಮಾಣದಲ್ಲಿ ಮಂಗಳೂರು ನಗರಕ್ಕೆ ಹಾಗೂ ಕಾಸರಗೋಡು ಜಿಲ್ಲೆಗೆ ಇನ್ನೋವಾ ಕಾರಿನಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬೃಹತ್ ಜಾಲದ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಕ್ರಾಸ್ ಬಳಿ ಇನ್ನೋವಾ ಗಾಂಜಾ ಸಾಗಾಟ ಮಾಡುತ್ತಿದ್ದ KL.14.R.7339 ಕಾರನ್ನು ವಶಪಡಿಸಿಕೊಂಡು ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೊಯಿದ್ದೀನ್ ನವಾಸ್ನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಸುಮಾರು 51 ಕೆಜಿ 700 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ರೂ. 10,50,000/- ಆಗಬಹುದು. ಇನ್ನೋವಾ ಕಾರಿನ ಮೌಲ್ಯ ರೂ. 10 ಲಕ್ಷ ಆಗಬಹುದು. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 20,50,000/- ಆಗಿರುತ್ತದೆ. ಈ ಗಾಂಜಾವನ್ನು ಆರೋಪಿಯು ಅಂಧ್ರಪ್ರದೇಶದ ವಿಶಾಖಪಟ್ಣದಿಂದ ಖರೀದಿ ಮಾಡಿ ಮಂಗಳೂರು ನಗರ ಹಾಗೂ ಕಾಸರಗೋಡು ಜಿಲ್ಲೆಗೆ ಮಾರಾಟ ಮಾಡಲು ತಂದಿರುವುದಾಗಿದೆ. ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಗಾಂಜಾ, ಇನ್ನೋವಾ ಕಾರನ್ನು ಮುಂದಿನ ಕ್ರಮಕ್ಕಾಗಿ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ಸುನೀಲ್ ವೈ ನಾಯಕ್, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳಾದ ರಾಮ ಪೂಜಾರಿ, ಗಣೇಶ್, ಶೀನಪ್ಪ, ಚಂದ್ರಶೇಖರ, ಚಂದ್ರಹಾಸ, ಯೋಗೀಶ್, ಚಂದ್ರ, ಪ್ರಶಾಂತ್ ಶೆಟ್ಟಿ, ಶಾಜು ಕೆ ನಾಯರ್,ಸುನೀಲ್ ಕುಮಾರ್, ರಾಜೇಂದ್ರಪ್ರಸಾದ್, ದಾಮೋದರ, ಮಣಿ, ಸುಧೀರ್ ಶೆಟ್ಟಿ, ಇಸಾಕ್, ಅಬ್ದುಲ್ ಜಬ್ಬಾರ್, ಅಶಿತ್ ವಿಶಾಲ್ ಡಿಸೋಜಾ, ತೇಜಕುಮಾರ್ ರವರು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು