ಸಿ.ಎಫ್.ಐ ಕುಮ್ಮಕ್ಕಿನಿಂದ ಸ್ಕಾರ್ಫ್ ವಿವಾದ ನಡೆದಿದೆ; ಸೈಂಟ್ ಆಗ್ನೆಸ್ ಕಾಲೇಜು ಪ್ರಾಂಶುಪಾಲೆ ಸ್ಪಷ್ಟನೆ

Spread the love

ಸಿ.ಎಫ್.ಐ ಕುಮ್ಮಕ್ಕಿನಿಂದ ಸ್ಕಾರ್ಫ್ ವಿವಾದ ನಡೆದಿದೆ; ಸೈಂಟ್ ಆಗ್ನೆಸ್ ಕಾಲೇಜು ಪ್ರಾಂಶುಪಾಲೆ ಸ್ಪಷ್ಟನೆ

ಮಂಗಳೂರು: ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜು ಕ್ಯಾಂಪಸ್ನಲ್ಲಿ ಸ್ಕರ್ಪ್ ಧರಿಸುವುದನ್ನು ನಿಷೇಧಿಸಿರುವ ವಿಚಾರದ ವಿವಾದವು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕುಮ್ಮಕ್ಕಿನಿಂದ ನಡೆದಿದ್ದು, ಕಾಲೇಜಿನ ವಿದ್ಯಾರ್ಥಿಗಳನ್ನು ಸಂಘಟನೆ ಮಾಡುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ| ಜೆಸ್ವಿನಾ ಅವರು ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜು ಕ್ಯಾಂಪಸ್ನಲ್ಲಿ ಸ್ಕರ್ಪ್ ಧರಿಸುವುದನ್ನು ನಿಷೇಧಿಸಿರುವ ವಿಚಾರದ ಕುರಿತು ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಕಾಲೇಜಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಂಗಳೂರಿನ ಸಂತ ಆಗ್ನೇಸ್ ಕಾಲೇಜು (ಸ್ವಾಯತ್ತ) ಒಂದು ಕ್ಯಾಥೊಲಿಕ್ ಕ್ರೈಸ್ತ ಶಿಕ್ಷಣ ಸಂಸ್ಥೆ. ಇದು ಭಾರತದ ಪಶ್ಚಿಮ ಕರಾವಳಿಯ ಪ್ರಥಮ ಮಹಿಳಾ ಕಾಲೇಜು ಮತ್ತು ಭಾರತದ ಎರಡನೇ ಖಾಸಗಿ ಮಹಿಳಾ ಕಾಲೇಜು. ಇದು ಮಹಿಳೆಯರ ಗುಣಮಟ್ಟದ ಶಿಕ್ಷಣಕ್ಕೆ ಪ್ರಖ್ಯಾತವಾದ ಶಿಕ್ಷಣ ಸಂಸ್ಥೆಯಾಗಿದೆ. ಮುಂಬರುವ 2020-2021ನೇ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯು ಶತಮಾನೋತ್ಸವವನ್ನು ಆಚರಿಸಿಕೊಳ್ಳಲಿದೆ. ಇದು ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಾಗಿದ್ದರೂ ಎಲ್ಲಾ ಜಾತಿ ಮತ, ಎಲ್ಲಾ ಆರ್ಥಿಕ ಸಾಮಾಜಿಕ ಸ್ಥಾನಮಾನಗಳವರಿಗೂ ಪ್ರವೇಶ ನೀಡುತ್ತಿದೆ.

ಈ ಸಂಸ್ಥೆಯು ಆರಂಭದಿಂದಲೇ ಮಹಿಳೆಯರಿಗೆ ಗುಣಮಟ್ಟದ, ಮೌಲ್ಯಯುತವಾದ ಸಮಗ್ರ ಶಿಕ್ಷಣ ನೀಡುತ್ತಿದ್ದು ಸಂಸ್ಥೆಯಲ್ಲಿ ಕಳೆದ 98 ವರ್ಷಗಳಿಂದ ಕಲಿತ ಸಾವಿರಾರು ಮಹಿಳೆಯರು ಪ್ರಪಂಚದಾದ್ಯಂತ ಅದ್ಯಾಪಕರು, ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್ಗಳು, ನ್ಯಾಯವಾದಿಗಳು ಮೊದಲಾಗಿ ಸಮಾಜದ ಪ್ರತಿಷ್ಠಿತ ಸ್ಥಾನಗಳಲ್ಲಿದ್ದಾರೆ.

ಕಾಲೇಜು ಈಗ ಮಾಡಿರುವ ನೀತಿನಿಯಮಾವಳಿಗಳು ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದು ವಸ್ತ್ರ ಸಂಹಿತೆ ಅದರ ಭಾಗವಾಗಿದೆ. ಕಾಲೇಜು ಶಿಸ್ತು, ಸಮಾನತೆ, ಪಾರದರ್ಶಕತೆಯನ್ನು ಕಾಪಾಡುವುದಕ್ಕಾಗಿ ಇಂತಹ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆ.

ಇತ್ತೀಚೆಗೆ, ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಒಂದು ಗುಂಪಿನೊಂದಿಗೆ ಸೇರಿ ಕಾಲೇಜಿನ ವಸ್ತ್ರ ಸಂಹಿತೆಯನ್ನು ವಿರೋದಿಸಿ ಕಾಲೇಜಿನ ಮುಖ್ಯ ಗೇಟಿನ ಬಳಿ ಪ್ರತಿಭಟನೆ ನಡೆಸಿದರು. ನಂತರ ವಿಚಾರಿಸಿದಾದ ಸಿ.ಎ¥sóï.ಐ. ಎಂಬ ಸಂಘಟನೆ ಅವರನ್ನು ಪ್ರಚೋದಿಸಿರುವುದಾಗಿ ತಿಳಿದುಬಂತು.

ಈ ಘಟನೆಯ ನಂತರ ಕಾಲೇಜು ಮತ್ತು ಕಾಲೇಜಿನ ಸಿಬ್ಬಂದಿಗಳಿಗೆ ಸಂಬಂದಿಸಿ ಅಪಪ್ರಚಾರ ಹಾಗೂ ಕೆಲವು ಸುಳ್ಳು ವದಂತಿಗಳನ್ನು ಹಬ್ಬಿಸಿ ಕಾಲೇಜಿನ ಘನತೆಗೆ ಕುಂದು ತರುವ ಪ್ರಯತ್ನ ಮಾಡುತ್ತಿದ್ದಾರೆ.

ಕಾಲೇಜಿನ ಪ್ರಾದ್ಯಾಪಕರು ಯಾವುದೇ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿನಿಯ ಸ್ಕಾರ್ಪ್ ಎಳೆದಿಲ್ಲ ಅಥವಾ ಅವರನ್ನು ಮುಟ್ಟಿಲ್ಲ. ಈ ಘಟನೆ ಬಳಿಕ ಯಾವುದೇ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತುಗೊಳಿಸಿಲ್ಲ. ವಾಸ್ತವವಾಗಿ ಕಳೆದ ಸೋಮವಾರ, 25 ಜೂನ್ 2018ರಂದು ಕಾಲೇಜಿನ ಗೇಟಿನ ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ಮತ್ತು ಅಂದು ಮಾದ್ಯಮದ ಎದುರು ಮಾತನಾಡಿದ ತ್ರತೀಯ ಬಿ.ಕಾಂ. ವಿದ್ಯಾರ್ಥಿನಿ ಫಾತಿಮಾ ಆನಿಸ್ ಮರುದಿನದಿಂದಲೇ ಕಾಲೇಜು ನಿಗದಿಪಡಿಸಿದ ಸಮವಸ್ತ್ರದೊಂದಿಗೆ ಎಲ್ಲಾ ತರಗತಿಗಳಿಗೂ ಹಾಜರಾಗುತ್ತಿದ್ದಾರೆ. ಕಾಲೇಜಿನ ನಿಯಾಮಾವಳಿಗಳ ವಿರುದ್ದ ಪ್ರತಿಭಟಿಸಿದ ವಿದ್ಯಾರ್ಥಿನಿಯರಿಂದ ಅವರ ಹೆತ್ತವರ ಸಮ್ಮುಖದಲ್ಲಿ 3 ದಿನಗಳೊಳಗೆ ಲಿಖಿತ ಸ್ಪಸ್ಟನೆಯನ್ನು ನೀಡಬೇಕೆಂದು ಸೂಚಿಸಲಾಗಿತ್ತು ಹೊರತು ಕಾಲೇಜಿನ ಪ್ರಾಂಶುಪಾಲೆಯಾಗಿ ನಾನು ಅಥವಾ ಯಾವುದೇ ಪ್ರಾದ್ಯಾಪಕರು ಖಾಲಿ ಕಾಗದದ ಮೇಲೆ ವಿದ್ಯಾರ್ಥಿನಿಯರ ಸಹಿ ಪಡೆದಿರುವುದಿಲ್ಲ.

ವಸ್ತ್ರಸಂಹಿತೆಯ ನೀತಿ ನಮ್ಮ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಚಾಲ್ತಿಯಲ್ಲಿರುತ್ತದೆ. ವಸ್ತ್ರಸಂಹಿತೆಯೂ ಸೇರಿದಂತೆ ಕಾಲೇಜಿನ ನೀತಿನಿಯಮಗಳನ್ನು ವಿದ್ಯಾರ್ಥಿ ಹಾಗೂ ಪೋಷಕರ ಗಮನಕ್ಕೆ ತರುವುದಕ್ಕಾಗಿ ಪ್ರತಿ ವರ್ಷವೂ ಕಾಲೇಜಿನ ಹ್ಯಾಂಡ್ ಬುಕ್ ನಲ್ಲಿ ಪ್ರಕಟಿಸಲಾಗುತ್ತಿದೆ. ಜೊತೆಗೆ ಕಾಲೇಜಿನ ಪ್ರವೇಶದ ಸಂದರ್ಭದಲ್ಲಿ ನೀತಿ ನಿಯಮಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಿ ಮಾಡುತ್ತಾರೆ.

ಕಾಲೇಜಿನ ನಿಯಾಮಾವಳಿಗಳ ಪ್ರಕಾರ ಎಲ್ಲಾ ವಿದ್ಯಾರ್ಥಿನಿಯರು ಕಾಲೇಜು ಸಮವಸ್ತ್ರವನ್ನು ಧರಿಸಬೇಕು ಮತ್ತು ಅದಕ್ಕೆ ಹೊರತಾದ ಬೇರಾವುದೇ ಉಡುಗೆತೊಡುಗೆಯನ್ನು ಧರಿಸಬಾರದು. ಯಾವುದೇ ವಿದ್ಯಾರ್ಥಿನಿ ಸ್ಕಾರ್ಫ್ ಧರಿಸುವಂತಿಲ್ಲ. ಮುಖವನ್ನು ಮುಚ್ಚಿಕೊಳ್ಳುವಂತಿಲ್ಲ. ಸಮವಸ್ತ್ರಕ್ಕೆ ಹೊರತಾದ ಬೇರಾವುದೇ ಉಡುಗೆಯನ್ನು ಕಾಲೇಜು ವೇಳೆಯಲ್ಲಿ ತೊಡುವಂತಿಲ್ಲ. (ಹ್ಯಾಂಡ್ ಬುಕ್ ಪುಟ 29)

ಕಾಲೇಜು ದಾಖಲಾತಿಗೆ ಶೈಕ್ಷಣಿಕ ಅರ್ಹತೆಗಳೊಂದಿಗೆ ಈ ನಿಯಮ ಪಾಲಿಸುವುದು ಅವಶ್ಯಕತೆಯಾಗಿರುತ್ತದೆ. ಅದರಂತೆ ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಇದಕ್ಕೆ ಒಪ್ಪಿಕೊಂಡು ಪ್ರವೇಶ ಪಡೆದಿರುತ್ತಾರೆ.

ಶಿಕ್ಷಣಕ್ಕಾಗಿ ಈ ಕಾಲೇಜನ್ನು ಆಯ್ಕೆಮಾಡಿಕೊಂಡ ಪ್ರತಿವೊಬ್ಬ ವಿದ್ಯಾರ್ಥಿನಿಯನ್ನೂ ನಾವು ಗೌರವಿಸುತ್ತೇವೆ. ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿನಿಯರು, ಪೆÇೀಷಕರು, ಹಳೆವಿದ್ಯಾರ್ಥಿಗಳು ಮತ್ತು ಸಮಾಜದ ಎಲ್ಲಾ ವರ್ಗದವರೊಂದಿಗೆ ಅನ್ಯೋನತೆಯಿಂದ ಬಾಳಿ ಸೌಹಾರ್ದಯುತ ಸಂಬಂದವನ್ನು ರೂಪಿಸಿ ಅದನ್ನು ಬೆಳೆಸಲು ನಾವು ಇಷ್ಟಪಡುತ್ತೇವೆ.

ಕಳೆದ 98 ವರ್ಷಗಳಿಂದ ಸಂತ ಆಗ್ನೇಸ್ ಕಾಲೇಜು ಮಹಿಳೆಯರ ಶಿಕ್ಷಣ ಹಾಗೂ ಸಬಲೀಕರಣದ ಜೊತೆಗೆ ಪ್ರೀತಿ, ಸೌಹಾರ್ದ, ಸೇವೆಗಳಿಂದ ಕೂಡಿದ ಸಮಗ್ರ ಮೌಲ್ಯಾಧಾರಿತ ಬದುಕಿನ ಶಿಕ್ಷಣವನ್ನು ನೀಡುತ್ತಿದೆ.

ಈ ಕಾಲೇಜಿನಲ್ಲಿ ಪಡೆದುಕೊಂಡ ಮೌಲ್ಯಯುತ ಶಿಕ್ಷಣದಿಂದಾಗಿ ಅವರು ತಮ್ಮ ಕುಟುಂಬ ಹಾಗೂ ಸಮಾಜದಲ್ಲಿ ಬದಲಾವಣೆಗಳನ್ನು ತರುತ್ತಿದ್ದು ಗೌರವಯುತ ಜೀವನವನ್ನು ನಡೆಸುತ್ತಿದ್ದಾರೆ. ನಮ್ಮ ವಿದ್ಯಾರ್ಥಿನಿಯರು ಈ ಪರಂಪರೆಯನ್ನು ಮುಂದುವರಿಸಿಕೊಂಡು ಉತ್ತಮ ಕುಟುಂಬ ಹಾಗೂ ಸಮಾಜದ ನಿರ್ಮಾತೃಗಳಾಗಬೇಕೆಂದು ನಾವು ಬಯಸುತ್ತೇವೆ. ಇದು ನಮ್ಮ ಸಂಸ್ಥೆಯ ಧ್ಯೇಯವಾಗಿದ್ದು ಇದನ್ನು ಮುಂದುವರಿಸಿ ಹೋಗಲು ಬದ್ದರಾಗಿದ್ದೇವೆ. ನಮ್ಮ ಕಾಲೇಜಿಸ ಸಂಸ್ಥಾಪಕಿಯಾದ ಮದರ್ ಮೇರಿ ಅಲೋಶಿಯಾ ಹಾಗೂ ಆರಂಭ ಕಾಲದ ಧರ್ಮಭಗಿನಿಯರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು ರೂಪಿಸಿಕೊಟ್ಟ ಮೇಲ್ಪಂಕ್ತಿಯನ್ನು ಪಾಲಿಸುವ ಸಲುವಾಗಿ ನಾವು ಮೌಲ್ಯವನ್ನು ತ್ಯಜಿಸುವುದಾಗಲೀ, ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುವುದಾಗಲೀ, ಶೈಕ್ಷಣಿಕ ಹಿತದೃಷ್ಠಿಯಿಂದ ಅಸಾಧ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಸಿ. ಡಾ. ಮರಿಯಾ ರೂಪಾ, ಎ.ಸಿ. ಜೊತೆ ಕಾರ್ಯದರ್ಶಿ, ಸಂತ ಆಗ್ನೇಸ್ ಕಾಲೇಜು,ಸಿ. ಡಾ. ವೆನಿಸ್ಸಾ ಎ.ಸಿ.ಉಪ ಪ್ರಾಂಶುಪಾಲರು, ಮಾಲವಿಕಾ ಅಡ್ಯಂತಾಯ ಡೀನ್ – ಆಡಳಿತ, ಚಾರ್ಲ್ಸ್ ಸ್ಟ್ಯಾನಿ ಪಾಯ್ಸ್ ರಿಜಿಸ್ಟ್ರಾರ್, ಡಾ. ದೇವಿ ಪ್ರಭಾ ಆಳ್ವಾ -ಸಂಯೋಜಕಿ, ಶಿಸ್ತು ಸಮಿತಿ ಹಾಗೂ ಮಾಜಿ ವಿಭಾಗ ಮುಖ್ಯಸ್ಥೆ, ವಾಣಿಜ್ಯ ಶಾಸ್ತ್ರ, ನೀನಾ ಉಪಾದ್ಯಕ್ಷೆ, ರಕ್ಷಕ ಶಿಕ್ಷಕ ಸಂಘ, ಲ್ಯಾಡ್ಲಿನ್ ಜನೀಷಾ ಮೊಂತೇರೊ ಅಧ್ಯಕ್ಷೆ, ವಿದ್ಯಾರ್ಥಿ ಸಂಘ, ನೌರೀನ್ ಉಪಾಧ್ಯಕ್ಷೆ, ವಿದ್ಯಾರ್ಥಿ ಸಂಘ ಹಾಗೂ ಇತರರು ಉಪಸ್ಥಿತರಿದ್ದರು.


Spread the love
1 Comment
Inline Feedbacks
View all comments
Shafeeq
6 years ago

Ok
fine alright

Then why the Nuns Teaches are wearing scarf?
Let them come without scarf and abaya easily resolve the problems within the college!.