ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದಿಂದ ದೇಶದಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯದ ವಿರುದ್ದ ಮನವಿ ಸಲ್ಲಿಕೆ

Spread the love

ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದಿಂದ ದೇಶದಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯದ ವಿರುದ್ದ ಮನವಿ ಸಲ್ಲಿಕೆ

ಉಡುಪಿ: ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ, ಉಡುಪಿ ಜಿಲ್ಲೆ ವತಿಯಿಂದ ಕೊಲ್ಕೊತ್ತಾ ಹಾಗೂ ದೇಶದಾದ್ಯಂತ ಸ್ತ್ರೀಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ,ಅತ್ತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಯವರಿಗೆ ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಲಾಯಿತು.

ದೇಶದಾದ್ಯಂತ ಇಂತಹ ಘಟನೆಗಳು ಪದೇಪದೇ ನಡೆಯುತ್ತಿದ್ದು ಸ್ತ್ರೀಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ,ಭದ್ರತೆ ದೊರೆಯುವಂತೆ ಮಾಡಲು ಕಠಿಣ ಕ್ರಮಗಳನ್ನು ಜರುಗಿಸುವ ಕಾನೂನನ್ನು ರಚಿಸಿ ಅನುಷ್ಠಾನಗೊಳಿಸಲು ಒತ್ತಾಯಿಸಿ ಒಕ್ಕೂಟದ 6 ಸಾವಿರದಷ್ಟು ಸದಸ್ಯರ ಸಹಿಯನ್ನೊಳಗೊಂಡ ಮನವಿಯನ್ನು ನೀಡಲಾಯಿತು.

ಮಾನಿನಿ ರಾಜ್ಯ ಮಹಿಳಾ ಒಕ್ಕೂಟದ ಪ್ರತಿನಿಧಿ ಜೆನೆಟ್ ಬರ್ಬೋಜಾರವರ ಮುಂದಾಳುತ್ವದಲ್ಲಿ ಮನವಿ ನೀಡಲಾಯಿತು.

ಈ ಸಂದರ್ಭ ಒಕ್ಕೂಟದ ಅಧ್ಯಕ್ಷರಾದ ಗ್ರೇಸಿ ಕುವೆಲ್ಲೊ ,ಕಾರ್ಯದರ್ಶಿ ಫ್ಲೇವಿಯಾ ಡಿಸೋಜ, ಉಪಾಧ್ಯಕ್ಷರಾದ ಅನ್ಸಿಲ್ಲಾ ಲೂವಿಸ್, ಕೋಶಾಧಿಕಾರಿ ಸಿಂತಿಯಾ ಡಿಸೋಜಾ, ಸಹಕಾರ್ಯದರ್ಶಿ ಫ್ಲೋರಿನ್ ಮೆಂಡೊನ್ಸಾ, ಮರಿನಾ ಲೂವಿಸ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments