ಸುರತ್ಕಲ್, ಚೊಕ್ಕಬೆಟ್ಟು, ಕೃಷ್ಣಾಪುರ ವರುಣ ಅಬ್ಬರ – ಶಾಸಕ ಭರತ್ ಶೆಟ್ಟಿ ಭೇಟಿ, ನೆರವು
ಸುರತ್ಕಲ್: ಸುರತ್ಕಲ್ ಹೊಸ ಮಾರುಕಟ್ಟೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆರೆಯಂತಾದರೆ, ಸುರತ್ಕಲ್ ಬಂಟರ ಭವನದ ಹಿಂದಿನ ತೋಡು ತುಂಬಿ ಸುತ್ತಮುತ್ತಲಿನ ಮನೆಗಳು ಮುಳುಗಡೆಯಾಗಿತ್ತು.
ಅಗರಮೇಲು, ಚೊಕ್ಕಬೆಟ್ಟು ,7ನೇ ಬ್ಲಾಕ್ ಕೃಷ್ಣಾಪುರದಲ್ಲಿ ವರುಣಾಭರದಿಂದ ವಸತಿ ಬಡಾವಣೆಗಳು ಭಾಗಶಃ ಮುಳುಗಡೆಯಾಗಿ ಜನತೆ ತೀವ್ರ ಸಂಕಷ್ಟ ಅನುಭವಿಸ ಬೇಕಾಯಿತು.
ಮಂಗಳವಾರ ಮುಂಜಾನೆಯೇ ಕೃತಕ ನೆರೆಯ ಮುನ್ಸೂಚನೆ ಪಡೆದ ಅವರು ಸ್ಥಳಕ್ಕೆ ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿ ಅಧಿಕಾರಿಗಳು, ಸ್ಥಳೀಯರೊಂದಿಗೆ ಪರಿಶೀಲನೆ ನಡೆಸಿದರು. ನಾರಾಯಣ ಗುರು ಶಾಲೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಕುರಿತಂತೆ ಮಾಹಿತಿ ಪಡೆದರು.ಶಾಲೆಯ ಪುನರ್ ನಿರ್ಮಾಣ , ಮನೆ ಕುಸಿತ ಸಹಿತ ವಿವಿಧ ಪ್ರಕೃತಿ ವಿಕೋಪದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ಮುಂದಿನ ದಿನಗಳಲ್ಲಿ ಮರು ನಿರ್ಮಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ದೂರವಾಣಿ ಕರೆ ಸ್ವೀಕರಿಸುತ್ತಾ ಸಹಾಯ ಕೇಳುತ್ತಾ ಬಂದ ಕಡೆಗೆ ತೆರಳಿ ನೆರವು ನೀಡಿದರು.
ಕಾರ್ಯಕರ್ತರು ,ಸ್ಥಳೀಯರೊಂದಿಗೆ ಜಡಿ ಮಳೆಯನ್ನೂ ಲೆಕ್ಕಿಸದೆ ಸಂತ್ರಸ್ಥರ ರಕ್ಷಣೆಯಲ್ಲಿ ತಾನೂ ಕೈ ಜೋಡಿಸಿ ಶ್ಲಾಘನೆಗೆ ಪಾತ್ರರಾದರು. ಬಿಜೆಪಿಯ ಕಾರ್ಪೊರೇಟರ್, ಪದಾಧಿಕಾರಿಗಳು,ಕಾರ್ಯಕರ್ತರು ಜತೆಗಿದ್ದರು.