ಸುಳ್ಯ ಕಾಂಗ್ರೆಸ್ ನಾಯಕ ಇಸ್ಮಾಯಿಲ್ ಕೊಲೆ ಪ್ರಕರಣ; 7 ಆರೋಪಿಗಳ ಬಂಧನ
ಮಂಗಳೂರು: ಸುಳ್ಯ ಕಾಂಗ್ರೆಸ್ ನಾಯಕ ಇಸ್ಮಾಯಿಲ್ ನೇಲ್ಯಮಜಲು (52 ವರ್ಷ) ಹತ್ಯೆಗೆ ಸಂಬಂಧಿಸಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಬ್ದುಲ್ ರಶೀದ್ ಯಾನೆ ಮುನ್ನ (32), ಅಬ್ಬಾಸ್, ರಹಿಮಾನ್, ಯಾಕುಬ್ ಬಿಜೈ, ಫಾರೂಕ್ ಬೆಳ್ಳಾರೆ ಹಾಗೂ ಸೊಹೈಲ್ ಎಂದು ಗುರುತಿಸಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬೋರಸೆ ಸೆಪ್ಟೆಂಬರ್23 ರ ಮಧ್ಯಾಹ್ನ ಐವರ್ನಾಡು ಮಸೀದಿಗೆ ಪ್ರಾರ್ಥನೆಗೆ ಬಂದಿದ್ದ ಇಸ್ಮಾಯಿಲ್‌ರನ್ನು ಬೈಕ್‌ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಅಪರಾಧ ಪತ್ತೆದಳದ ಪೊಲೀಸರು ಕೊಲೆ ಪ್ರಕರಣದ ಜಾಡು ಹಿಡಿದು 10 ದಿನಗಳಲ್ಲಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳ ವಿಚಾರಣೆಯ ವೇಳೆ ರಹಿಮಾನ್ ಬೆಳ್ಳಾರೆ ಕುಟುಂಬ ಹಾಗೂ ಬೆಳ್ಳಾರೆ ಜಾಕ್ರಿಯಾ ಜುಮ್ಮಾ ಮಸೀದಿ ಆಡಳಿತದ ನಡುವಿನ ಆಸ್ತಿವಿವಾದ ಕೊಲೆಗೆ ಪ್ರಮುಖ ಕಾರಣವಾಗಿದ್ದು, ಕೊಲೆಯಾದ ಇಸ್ಮಾಯಿ ಜುಮ್ಮಾ ಮಸೀದಿ ಆಡಳಿತ ಮಂಡಳಿಗೆ ಬೆಂಬಲ ನೀಡುತ್ತಿದ್ದರು ಇದರಿಂದ ಹಲವು ವರುಷಗಳಿಂದ ರೆಹಿಮಾನ್ ಹಾಗೂ ಇಸ್ಮಾಯಿಲ್ ನಡುವೆ ವೈರತ್ವ ಇತ್ತು ಎಂದು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.