Home Mangalorean News Kannada News ಸೂಕ್ತ ಸಮಯದ ಮಧ್ಯಪ್ರವೇಶದಿಂದ ಮಂಗಳಮುಖಿಯರ ನಡುವಿನ ಹೊಡೆದಾಟ ತಪ್ಪಿಸಿದ ಪರಿವರ್ತನ ಟ್ರಸ್ಟ್

ಸೂಕ್ತ ಸಮಯದ ಮಧ್ಯಪ್ರವೇಶದಿಂದ ಮಂಗಳಮುಖಿಯರ ನಡುವಿನ ಹೊಡೆದಾಟ ತಪ್ಪಿಸಿದ ಪರಿವರ್ತನ ಟ್ರಸ್ಟ್

Spread the love

ಸೂಕ್ತ ಸಮಯದ ಮಧ್ಯಪ್ರವೇಶದಿಂದ ಮಂಗಳಮುಖಿಯರ ನಡುವಿನ ಹೊಡೆದಾಟ ತಪ್ಪಿಸಿದ ಪರಿವರ್ತನ ಟ್ರಸ್ಟ್

ಮಂಗಳೂರು: ಎರಡು ಮಂಗಳಮುಖಿಯರ ತಂಡಗಳ ನಡುವಿನ ಗಲಾಟೆಯನ್ನು ಸೂಕ್ತ ಸಮಯದಲ್ಲಿ ಪರಿವರ್ತನಾ ಚಾರಿಟೇಬಲ್ ಟ್ರಸ್ಟಿನ ಮಧ್ಯ ಪ್ರವೇಶದಿಂದ ಶಮನಗೊಳಿಸಿದ ಘಟನೆ ನಡೆದಿದೆ.

ಪರಿವರ್ತನಾ ಚಾರಿಟೇಬಲ್ ಟ್ರಸ್ಟಿನೊಂದಿಗೆ ನೊಂದಾಯಿಸಲ್ಪಟ್ಟ ಮಂಗಳಮುಖಿಯರ ತಂಡದ ಸದಸ್ಯರಿಗೆ ನವ ಸಹಜ ಸಹಾಯ ಅಲ್ಪಸಂಖ್ಯಾತರ ತಂಡ ನಗರದ ಟೌನ್ ಹಾಲ್ ಬಳಿ ಹಲ್ಲೆ ನಡೆಸಿದ್ದು ಒರ್ವ ಸದಸ್ಯೆಯನ್ನು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.

ಸಹಾಯಕ್ಕಾಗಿ ಟ್ರಸ್ಟಿನ ಸದಸ್ಯರು ಮ್ಯಾನೆಜಿಂಗ್ ಟ್ರಸ್ಟಿಯವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪರಿವರ್ತನ ಚಾರೀಟೇಬಲ್ ಟ್ರಸ್ಟಿನ ಮ್ಯಾನೆಜಿಂಗ್ ಟ್ರಸ್ಟಿ ಸ್ಥಳಕ್ಕೆ ತಲುಪಿದ್ದು ಸದಸ್ಯರುನ್ನು ಬಂದರು ಪೋಲಿಸ್ ಠಾಣೆಗೆ ತೆರಳುವಂತೆ ಸೂಚಿಸಿದರು. ಠಾಣೆಗೆ ತೆರಳಲು ಅಟೋ ಹತ್ತಿದ ಸದಸ್ಯರು ಇನ್ನೊಂದು ತಂಡದ ಸದಸ್ಯರು ತಡೆದಿರುವುದು ಮಾತ್ರವಲ್ಲದೆ ನಯನಾ ಎಂಬ ಸದಸ್ಯೆಯ ಮೇಲೆ ಹಲ್ಲೆ ಕೂಡ ನಡೆಸಿದರು.

image001parivarthana-20161006-001

ಈ ವೇಳೆ ಬಂದರು ಠಾಣೆಯ ಪೋಲಿಸರು ಪಾಂಡೇಶ್ವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚನೆ ನೀಡಿದ್ದು, ಅದರಂತೆ ಪರಿವರ್ತನ ಚಾರಿಟೇಬಲ್ ಟ್ರಸ್ಟಿನ ಸದಸ್ಯರು ದೂರು ನೀಡಲು ಪಾಂಡೇಶ್ವರ ಪೋಲಿಸ್ ಠಾಣೆಗೆ ತೆರಳಿದ್ದು, ಇನ್ನೋಂದು ತಂಡದ ಸದಸ್ಯರು ಕೂಡ ಅಲ್ಲಿಗೆ ಬಂದರು.

ಈ ವೇಳೆ ಮಧ್ಯಪ್ರವೇಶಿಸಿದ ಟ್ರಸ್ಟಿನ ಮ್ಯಾನೆಜಿಂಗ್ ಟ್ರಸ್ಟಿ ಎರಡು ತಂಡಗಳ ನಡುವೆ ಸಂಧಾನ ನಡೆಸಿದರು ಅಲ್ಲದೆ ಮುಂದಿನ ದಿನಗಳಲ್ಲಿ ಪರಸ್ಪರ ಹೊಡೆದಾಡದಂತೆ ಸಂಧಾನ ನಡೆಸಿದರು.

ಪರಿವರ್ತನ ಚಾರೀಟೇಬಲ್ ಟ್ರಸ್ಟ್ ಇತ್ತೀಚೆಗೆ ಮಂಗಳಮುಖಿಯರಿಗೆ ಸಮಾಜದ ಮುಖ್ಯವಾಹಿನಿಗೆ ತರಲು ಆರಂಭವಾಗಿದ್ದು ಅವರನ್ನು ಮಾನವರಂತೆ ಗೌರವಿಸಲು ಪ್ರಯತ್ನಿಸುತ್ತಿದೆ.

ಎರಡು ತಂಡಗಳಿಗೆ ಬುದ್ದಿ ಹೇಳೀದ ಮ್ಯಾನೆಜಿಂಗ್ ಟ್ರಸ್ಟಿ ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಕಚ್ಚಾಡಿಕೊಳ್ಳುವುದು ಜನರಲ್ಲಿ ಕೆಟ್ಟ ಭಾವನೆ ಮೂಡಿಸುತ್ತಿದ್ದು, ಮುಂದೆ ಇಂತಹ ಘಟನೆಗಳು ನಡೆಯಕೂಡದು. ಬಳಿಕ ಎರಡು ತಂಡಗಳೂ ಪರಸ್ಪರ ಮುಂದೆ ಒಗ್ಗಟ್ಟಾಗಿ ನಡೆಯಲು ಹಾಗೂ ಯಾವುದೇ ರೀತಿಯಲ್ಲಿ ಕಾನೂನು ಕೈಗೆತ್ತಿಕೊಳ್ಳದಂತೆ ಜಾಗ್ರತೆ ವಹಿಸುವುದಾಗಿ ಅಲ್ಲದೆ ಇದಕ್ಕೆ ತಪ್ಪಿದ್ದಲ್ಲಿ ಕಾನೂನಿಂತೆ ಕ್ರಮಕ್ಕೆ ತಾವು ಬದ್ದ ಎಂದು ಒಪ್ಪಿಕೊಂಡರು.

ಮುಂದೆ ಇಂತಹ ಘಟನೆಗಳು ನಡೆಸುವುದಿಲ್ಲ ಎಂದು ನವಸಹಜ ಸಹಾಯ ಅಲ್ಪಸಂಖ್ಯಾತರ ಸಂಘದ ಅಧ್ಯಕ್ಷ ನಿಖಿಲ್ ಅಲಿಯಾಸ್ ಪ್ರವೀಣ್ ಮತ್ತು ಪರಿವರ್ತನ ಟ್ರಸ್ಟಿನ ಕಾರ್ಯದರ್ಶಿ ಸಂಜನಾ ಪರಸ್ಪರ ಮುಚ್ಚಳಿಕೆ ಬರೆದು ಪಾಂಡೇಶ್ವರ ಪೋಲಿಸರ ಎದುರು ಸಹಿ ಹಾಕಿ ಅಲ್ಲಿಂದ ಕೈಕುಲುಕಿ ತೆರಳಿದರು.


Spread the love

Exit mobile version