ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರವನ್ನು ಕೂಡಲೇ ಬೈಕಂಪಾಡಿ ಮಾರುಕಟ್ಟೆಗೆ ಸ್ಥಳಾಂತರಿಸಿ – ಕೃಷ್ಣ ರಾಜ ಹೆಗ್ಡೆ
ಮಂಗಳೂರು: ಪ್ರಸ್ತುತ ಸೆಂಟ್ರಲ್ ಮಾರುಕಟ್ಟೆಯಲ್ಲಿನ ಹಣ್ಣು ಮತ್ತು ತರಕಾರಿ ವ್ಯಾಪಾರ ನಡೆಯುತ್ತಿರುವ ವ್ಯಾಪಾರ ವನ್ನು ಕೂಡಲೇ ಬೈಕಂಪಾಡಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸುವಂತೆ ವ್ಯಾಪಾರಸ್ಥರನ್ನು ಎಪಿಎಮ್ ಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ವಿನಂತಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಪ್ರಸ್ತುತ ಸೆಂಟ್ರಲ್ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರು ನಮ್ಮ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ದ್ದು, ಸಮಿತಿಯಿಂದ / ಇಲಾಖೆಯಿಂದ ಲೈಸೆನ್ಸ್ ಪಡೆದು ವ್ಯಾಪಾರ ವಹಿವಾಟು ನಡೆಸಿದರು. ಪ್ರಸ್ತುತ APMC ಕಾಯ್ದೆ ನಿಯಮಾನುಸಾರ ಕಾರ್ಯನಿರ್ವಹಿಸಬೇಕಾಗುತ್ತದೆ.
ಪ್ರಸ್ತುತ ಸೆಂಟ್ರಲ್ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರ ವಹಿವಾಟು ನಡೆಸಲು ಸ್ಥಳಾವಕಾಶದ ತೀರಾ ಕಡಿಮೆ ಇರುವುದರಿಂದ ಹಾಗೂ ಮೂಲಭೂತ ಸೌಕರ್ಯ ಕೊರತೆ ಇರುವುದರಿಂದ ಹೆಚ್ಚಿನ ವಾಹನಗಳ ಆಗಮನದಿಂದ ಟ್ರಾಫಿಕ್ ಹೆಚ್ಚಾಗಿ ರೈತರು ಮತ್ತು ಸಾರ್ವಜನಿಕರಿಗೆ ಸಹ ತುಂಬಾ ತೊಂದರೆ ಆಗುತ್ತಿರುತ್ತದೆ. ಅಲ್ಲದೇ ಸೆಂಟ್ರಲ್ ಮಾರುಕಟ್ಟೆಯಲ್ಲಿ ನಡೆಸುತ್ತಿರುವ ವ್ಯಾಪಾರ ವಹಿವಾಟಿನ ಕಟ್ಟಡವು ಸುಮಾರು 60 ವರ್ಷ ದಷ್ಟು ಹಳೆಯದಾಗಿದ್ದು, ಈಗ ಇದು ಶಿಥಿಲಾವಸ್ಥೆಯಲ್ಲಿ ಅಪಾಯಕರ ಸ್ಥಿತಿಯಲ್ಲಿರುತ್ತದೆ. ಆ ಕಾರಣಕ್ಕಾಗಿ ಜಿಲ್ಲಾಡಳಿತವು ಸದರಿ ವ್ಯಾಪಾರ ವಹಿವಾಟನ್ನು APMC ಮುಖ್ಯ ಮಾರುಕಟ್ಟೆ ಪ್ರಾಂಗಣ, ಬೈಕಂಪಾಡಿಗೆ ಸ್ಥಳಾಂತರಿಸಲು ಕ್ರಮ ಕೈ ಗೊಂಡಿರುತ್ತದೆ. ಆದರೆ, ಕೆಲವು ಕಾನೂನಾತ್ಮಕ ತೊಂದರೆಗಳಿಂದಾಗಿ ಅದು ಪ್ರಸ್ತುತ ಪ್ರಕರಣವು ಘನ ನ್ಯಾಯಾಲಯ ಮುಂದಿರುತ್ತದೆ. ಈಗ ಕೋವಿಡ್-19 ಮಹಾಮಾರಿ ಹರಡುವಿಕೆಯನ್ನು ತಡೆಗಟ್ಟುವ ಸವಾಗಿಯೂ ಸಹ ಸೆಂಟ್ರಲ್ ಮಾರುಕಟ್ಟೆ ಸ್ಥಳಾಂತರ ಅತ್ಯಂತ ಅವಶ್ಯಕವಾಗಿರುತ್ತದೆ,
ಜಿಲ್ಲಾಡಳಿತ ಹಣ್ಣು ಮತ್ತು ತರಕಾರಿ ವ್ಯಾಪಾರ ವಹಿವಾಟನ್ನು 4 ತಿಂಗಳ ಹಿಂದೆ ಸಮಿತಿ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಿದ್ದು, ಸಮಿತಿಯು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 100 ಕೋಟಿ ಗಳ ವೆಚ್ಚದಲ್ಲಿ ತುರ್ತಾಗಿ ಅವಶ್ಯವಿರುವ ಕಾಮಗಾರಿ ಕೈಗೊಂಡಿದ್ದು, ವ್ಯಾಪಾರಸ್ಥರಿಗೆ ಲಭ್ಯವಿರುವ 7 ಮೆ: ಟನ್ ಸಾಮರ್ಥ್ಯದ ಗೋದಾಮುಗಳು ಕಾಯ್ದಿರಿಸಿ ರಸ್ತೆಗಳು, ಚರಂಡಿ, ಬೆಳಕಿನ ವ್ಯವಸ್ಥೆ, ನೀರಿನ ವ್ಯವಸ್ಥೆ, ಶೌಚಾಲಯ ಮುಂತಾದ ಅನೇಕ ಕಾಮಗಾರಿಗಳನ್ನು ಕೈಗೊಂಡು ಸುವ್ಯವಸ್ಥೆಯನ್ನು ಕಿಲಾಗಿರುತ್ತದೆ. ಕಳೆದ 4 ತಿಂಗಳಿಂದ ಸಹ ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರು ಮಾರುಕಟ್ಟೆ ಪ್ರಾಂಗಣ ಸ್ಥಳದಲ್ಲಿಯೇ ವ್ಯಾಪಾರ ವಹಿವಾಟು ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ಅವರಿಗೆ ಅಗತ್ಯವಿರುವ ಶಾಶ್ವತ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳುವ ಸಲುವಾಗಿ ಸಹ ವಿಶೇಷ ಕ್ರಿಯೆ ಯೋಜನೆಯ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು. ಈ ಸಮಯದಲ್ಲಿ ಸದರಿ ವ್ಯಾಪಾರಸ್ಥರಿಂದ ಬಾಡಿಗೆ, ಮಾರುಕಟ್ಟೆ ಶುಲ್ಕ, ಸೇವಾ ಶುಲ್ಕ ಇತರೆ ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ, ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯ ವನ್ನು ಉಚಿತವಾಗಿ ಕಲ್ಪಿಸಲಾಗಿರುತ್ತದೆ.
ಬೈಕಂಪಾಡಿ .ಮಾರುಕಟ್ಟೆ ಪ್ರಾಂಗಣ 80 ಎಕರೆ ಪ್ರದೇಶವಿದ್ದು ಅದರಲ್ಲಿ ಸುಸಜ್ಜಿತ ಗೋದಾಮು, ರಸ್ತೆ, ಒಳಚರಂಡಿ, ನೀರಿನ ಸೌಕರ್ಯ ಮತ್ತು ಶೌಚಾಲಯ ಮುಂತಾದ ಸೌಕರ್ಯ ಕಲ್ಪಿಸಲಾಗಿರುತ್ತದೆ. ಮೂಲಭೂತವಾಗಿ ಕಲ್ಪಿಸಲಾಗಿರುತ್ತದೆ. ವ್ಯಾಪಾರ చేరి వాటిని ಅಗತ್ಯವಿರುವ ಎಲ್ಲಾ ಸೌಕರ್ಯ ಪ್ರಸ್ತುತ APMC ಕಾಯ್ದೆ ನಿಯಮಾನುಸಾರ ಲೈಸೆನ್ಸ್ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿರುವ ಹಣ್ಣು ಮತ್ತು ತರಕಾರಿ ವ್ಯಾಪಾರವನ್ನು ಬೈಕಂಪಾಡಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸಂಪೂರ್ಣವಾಗಿ ಸ್ಥಳಾಂತರಿಸಿ ಬೇಕಾಗಿರುತ್ತದೆ.
ಪ್ರಸ್ತುತ ಜಿಲ್ಲಾಡಳಿತವು ಜನಸಂದಣಿ, ವಾಹನ ದಟ್ಟಣೆ ಹಾಗೂ ಜನಸಾಮಾನ್ಯರಿಗೆ ತೊಂದರೆಗಳನ್ನು ತಪ್ಪಿಸುವ ಸಲುವಾಗಿ ಬೈಕಂಪಾಡಿಯ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಕೋವಿಡ್-19 ಹರಡುವಿಕೆಯನ್ನು ತಡೆಯುವುದು ಸಹ ಅತ್ಯಂತ ಜರೂರು ಕಾರ್ಯವಾಗಿದ್ದು, ಸಮಿತಿ ಸಹ ತನ್ನ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ, ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿ ಸಜ್ಜುಗೊಳಿಸಲಾಗುತ್ತಿದೆ.
ಆದ್ದರಿಂದ ಪ್ರಸ್ತುತ ಸೆಂಟ್ರಲ್ ಮಾರುಕಟ್ಟೆಯಲ್ಲಿನ ಹಣ್ಣು ಮತ್ತು ತರಕಾರಿ ವ್ಯಾಪಾರ ನಡೆಯುತ್ತಿರುವ ವ್ಯಾಪಾರ ವನ್ನು ಕೂಡಲೇ ಬೈಕಂಪಾಡಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸುವಂತೆ ವ್ಯಾಪಾರಸ್ಥರನ್ನು ಕೋರಿದೆ. ಮುಂದಿನ ದಿನಗಳಲ್ಲಿ ಅನಾವಶ್ಯಕ ಕಾನೂನು ಸಮಸ್ಯೆ ಎದುರಾಗದ ರೀತಿಯಲ್ಲಿ ಮತ್ತು ಸೌಹಾರ್ದದಿಂದ ವ್ಯವಹರಿಸುವಂತೆ ಸಹಕರಿಸಲು ಮನವಿ ಮಾಡಿದೆ. ಇಲ್ಲವಾದಲ್ಲಿ ಅನಿವಾರ್ಯವಾಗಿ ಕಾನೂನು ರೀತಿ ಅನಿವಾರ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವ್ಯಾಪಾರಸ್ಥರು ಹಳೆಯ ಸೆಂಟ್ರಲ್ ಮಾರುಕಟ್ಟೆಯ ಕಟ್ಟಡದ ಅವ್ಯವಸ್ಥೆ ಹಾಗೂ ಅಪಾಯವನ್ನು ಸಹ ಮನವರಿಕೆ ಮಾಡುತ್ತಾ, ಮುಂದೆ ಆಗಬಹುದಾದ ಎಲ್ಲಾ ಸಾಧಕ ಬಾಧಕಗಳನ್ನು ಪರಿಗಣಿಸಿ ಕೂಡಲೇ ವ್ಯಾಪಾರ ವಹಿವಾಟನ್ನು ಭದ್ರತೆ ಮತ್ತು ಸೂಕ್ತ ರಕ್ಷಣೆಯುಳ್ಳ ಬೈಕಂಪಾಡಿ ಮುಖ್ಯ ಮಾರುಕಟ್ಟೆ ಸ್ಥಳಾಂತರಿಸುವಂತೆ ಸಮಿತಿಯು ಕೋರುತ್ತದೆ. ಮುಂದುವರೆದು, ಪ್ರಸ್ತುತ ಸಮಿತಿ ಯಲ್ಲಿ ಲಭ್ಯವಿರುವ ಸುಸಜ್ಜಿತ ಗೋದಾಮು | ಅಂಗಡಿಯನ್ನು ಮತ್ತು ನಿವೇಶನಗಳನ್ನು ನಿಯಮಾನುಸಾರ ಹಂಚಿಕೆ ಪಡೆಯುವ ದೃಷ್ಟಿಯಿಂದ ಸಮಿತಿ ಬೇಡಿಕೆ ಸಲ್ಲಿಸಿದ್ದಾರೆ.