ಸೆಂಥಿಲ್ ರಾಜೀನಾಮೆ ದೇಶದ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ – ದಕ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ

Spread the love

ಸೆಂಥಿಲ್ ರಾಜೀನಾಮೆ ದೇಶದ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ – ದಕ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ

 ಮಂಗಳೂರು: ದ.ಕ. ಜಿಲ್ಲಾಧಿಕಾರಿಯಾಗಿರುವ ಎಸ್.ಸಸಿಕಾಂತ್ ಸೆಂಥಿಲ್ ಅವರು ಐಎಎಸ್ ಸೇವೆಗೆ ಹಠಾತ್ ರಾಜೀನಾಮೆ ಸಲ್ಲಿಸಿರುವುದು ದೇಶದ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದ್ದಾರೆ.

ದೇಶದಲ್ಲಿ ನರೆಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಸರಕಾರದ ಆಡಳಿತದಿಂದ ಬೇಸತ್ತು  ತಮ್ಮ ಸೇವೆಗೆ  ರಾಜೀನಾಮೆ ನೀಡುತ್ತಿದ್ದಾರೆ. ಅವರ ಸಾಲಿಗೆ ಈಗ ಜಿಲ್ಲೆಯ ದಕ್ಷ ಜಿಲ್ಲಾಧಿಕಾರಿಯೆಂದೇ ಹೆಸರಾದ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿರುವುದನ್ನು ದಕ ಜಿಲ್ಲಾ ಯುವ ಜೆಡಿಎಸ್ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತದೆ.

ಸೆಂಥಿಲ್ ಅವರು ರಾಜೀನಾಮೆಯ ಪತ್ತರದಲ್ಲಿ  ನಮ್ಮ ವೈವಿಧ್ಯ ಪ್ರಜಾಪ್ರಭುತ್ವದ ಮೂಲಭೂತ ರಚನೆಗಳ ಜೊತೆ ಹಿಂದೆಂದೂ ಕಂಡಿರದ ರೀತಿಯಲ್ಲಿ ರಾಜಿ ಮಾಡಿಕೊಳ್ಳುವಾಗ ನಾಗರಿಕ ಸೇವೆಯಲ್ಲಿ ಮುಂದುವರಿಯುವುದು ನನಗೆ ಅನೈತಿಕವೆಂದು ಎನಿಸಿದ ಕಾರಣ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ದೇಶದ ಮೂಲ ಚೌಕಟ್ಟುಗಳು ಅತ್ಯಂತ ಕಷ್ಟಕರ ಸವಾಲುಗಳನ್ನು ಎದುರಿಸಲಿದೆ ಎಂದು ನಾನು ಬಲವಾಗಿ ನಂಬುತ್ತೇನೆ. ಆದ್ದರಿಂದ ನಾನು ಐಎಎಸ್ ನಿಂದ ಹೊರಬಂದು ನನ್ನ ಕೆಲಸ ಮುಂದುವರಿಸಿ ಎಲ್ಲರಿಗೂ ಒಳ್ಳೆಯದನ್ನು ಮಾಡಬೇಕೆಂದು ನಿರ್ಧರಿಸಿದ್ದೇನೆ” ಎಂದವರು ತಿಳಿಸಿದ್ದಾರೆ. ಇದರಿಂದ ದೇಶದ ಆಡಳಿತ ವ್ಯವಸ್ಥೆ ಅಧಿಕಾರಿಗಳನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತದೆ ಎನ್ನುವುದನ್ನು ತೋರಿಸುತ್ತದೆ.

ದೇಶದ ಎಲ್ಲಾ ವ್ಯವಸ್ಥೆಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಬೆದರಿಕೆಯ ತಂತ್ರದ ಮೂಲಕ ಮೋದಿ ಸರಕಾರ ಅಧಿಕಾರಿಗಳನ್ನು ಕೂಡ ಹಣಿಯಲು ಪ್ರಯತ್ನಿಸಿದ್ದು ಅದರ ಭಾಗವಾಗಿ ದಕ್ಷ ಅಧಿಕಾರಿಗಳು ಬಲಿಯಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಜಿಲ್ಲಾಧಿಕಾರಿಯಾಗಿ ಜಿಲ್ಲೆಯಲ್ಲಿ ಸಸಿಕಾಂತ್ ಸೆಂಥಿಲ್ ನೀಡಿದ ಸೇವೆಯನ್ನು ಜಿಲ್ಲೆಯ ಜನ ಎಂದಿಗೂ ಕೂಡ ಮರೆಯುವುದಿಲ್ಲ. ಇಂತಹ ದಕ್ಷ ಅಧಿಕಾರಿಗಳ ಸೇವೆ ಮುಂದುವರೆಸಿಕೊಂಡು ಹೋಗುವಲ್ಲಿ ಸಾಧ್ಯವಾಗದೆ ಇರುವುದು ದೇಶದ ದುರಂತವಾಗಿದೆ ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love