Home Mangalorean News Kannada News ಸೆಲ್ಕೋ 25 ವರ್ಷಾಚರಣೆ ಪ್ರಯುಕ್ತ ಡಿ.15 – ಜ.15ರವರೆಗೆ ಸೌರ ಬದುಕು ಕಾರ್ಯಕ್ರಮ

ಸೆಲ್ಕೋ 25 ವರ್ಷಾಚರಣೆ ಪ್ರಯುಕ್ತ ಡಿ.15 – ಜ.15ರವರೆಗೆ ಸೌರ ಬದುಕು ಕಾರ್ಯಕ್ರಮ

Spread the love

ಸೆಲ್ಕೋ 25 ವರ್ಷಾಚರಣೆ ಪ್ರಯುಕ್ತ ಡಿ.15 – ಜ.15ರವರೆಗೆ ಸೌರ ಬದುಕು ಕಾರ್ಯಕ್ರಮ

ಉಡುಪಿ: ಸೆಲ್ಕೋ ಸಂಸ್ಥೆಯು 25 ವರ್ಷಾಚರಣೆ ಪ್ರಯುಕ್ತ ಸುಸ್ಥಿರ ಇಂಧನ ಪರಿಕಲ್ಪನೆ ಅಡಿಯಲ್ಲಿ ಡಿ.15 ರಿಂದ ಜನವರಿ.15ರವರೆಗೆ ಸೌರ ಬದುಕು ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಿದೆ ಎಂದು ಸೆಲ್ಕೊ ಸಂಸ್ಥೆ ಎಜಿಎಂ ಗುರು ಪ್ರಸಾದ್ ಶೆಟ್ಟಿ ತಿಳಿಸಿದರು.

ಶನಿವಾರ  ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯ ಸಮಸ್ಯೆಗಳಿಗೆ ಬೇಕಾದ ಪರಿಹಾರ ಒದಗಿಸಲು ಅಗತ್ಯವಾದ ಪರಿಕರ ತನ್ನ ಚೌಕಟ್ಟಿನಲ್ಲಿ ರೂಪಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದರು. ವಿದ್ಯುತ್ನ್ನು ಹಾಗೂ ಮಾನವ ಸಂಪನ್ಮೂಲವನ್ನು ಅವಲಂಬಿಸಿದ ಸಾಕಷ್ಟು ಗುಡಿ ಕೈಗಾರಿಕೆಗಳು ಹಾಗೂ ಕಿರು ಉದ್ದಿಮೆ ತಮ್ಮ ಕೆಲಸ ನಿಲ್ಲಿಸಿವೆ. ಇದಕ್ಕೆ ಪೂರಕವಾಗಿ ಸಮಸ್ಯೆಗಳ ಅಧ್ಯಯನ ನಡೆಸಿ, ಅವುಗಳಿಗೆ ಬದಲಿ ಇಂಧನದ ಹಾಗೂ ಅದಕ್ಕೆ ಬೇಕಾದ ತಂತ್ರಜ್ಞಾನ ನೀಡುವಲ್ಲಿ ಸೆಲ್ಕೋ ಸಫಲವಾಗಿದೆ. ಸೆಲ್ಕೋ ಸಮುದಾಯ ಸಮಸ್ಯೆಗಳಿಗೆ ಬೇಕಾದ ಪರಿಹಾರ ಒದಗಿಸಲು ಅಗತ್ಯ ಪರಿಕರಗಳನ್ನು ತನ್ನ ಚೌಕಟ್ಟಿನಲ್ಲಿ ರೂಪಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದರು.

ವಿದ್ಯುತ್ನ್ನು ಹಾಗೂ ಮಾನವ ಸಂಪನ್ಮೂಲವನ್ನು ಅವಲಂಬಿಸಿದ ಸಾಕಷ್ಟು ಗುಡಿ ಕೈಗಾರಿಕೆಗಳು ಹಾಗೂ ಕಿರು ಉದ್ದಿಮೆಗಳು ತಮ್ಮ ಕೆಲಸ ನಿಲ್ಲಿಸಿವೆ. ಇದಕ್ಕೆ ಪೂರಕವಾಗಿ ಸಮಸ್ಯೆಗಳ ಅಧ್ಯಯನ ನಡೆಸಿ, ಅವುಗಳಿಗೆ ಬದಲಿ ಇಂಧನದ ಹಾಗೂ ಅದಕ್ಕೆ ಬೇಕಾದ ತಂತ್ರಜ್ಞಾನ ನೀಡುವಲ್ಲಿ ಸೆಲ್ಕೋ ಸಫಲವಾಗಿದೆ.

ಕುಂಬಾರರಿಗೆ ಕುಂಬಾರಿಕೆ ಯಂತ್ರ, ಕಮ್ಮಾರರಿಗೆ ಡಿ.ಸಿ. ಬ್ಲೋವರ್, ಟೈಲರ್ಗಳಿಗೆ ಹೊಲಿಗೆ ಯಂತ್ರ, ಹೈನುಗಾರರಿಗೆ ಹಾಲು ಕರೆಯುವ ಯಂತ್ರ, ಸಣ್ಣ ಅಂಗಡಿಗಳಿಗೆ ಫ್ರಿಡ್ಜ್, ಸಣ್ಣ ರೈತರಿಗೆ ಅನುಕೂಲವಾದ ಅಕ್ಕಿ ಮಿಲ್, ಹಿಟ್ಟಿನ ಗಿರಣಿ, ಹಗ್ಗ ತಯಾರಿಕೆ ಯಂತ್ರ, ಮಿಲ್ಲೆಟ್ ಗ್ರೈಂಡರ್, ಪಂಕ್ಚರ್ ಶಾಪ್ಗಳಿಗೆ ಏರ್ ಕಂಪ್ರೆಸರ್, ಕ್ಷೌರಿಕರಿಗೆ ಕ್ಷೌರ ಯಂತ್ರ(ಟ್ರಿಮ್ಮರ್), ಕಬ್ಬಿನ ಜ್ಯೂಸ್ ತಯಾರಿಕೆ ಯಂತ್ರ, ರೊಟ್ಟಿ ತಯಾರಿಕೆ ಯಂತ್ರ ಸೇರಿದಂತೆ 65ಕ್ಕೂ ಹೆಚ್ಚು ಪರಿಹಾರಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧವಾಗಿದೆ. ಈ ಬಗ್ಗೆ ಸಂಘ, ಸಂಸ್ಥೆ, ಸ್ಥಳೀಯ ಪಂಚಾಯಿತಿ ಮಟ್ಟದಲ್ಲಿ ಸೌರ ಬದುಕು ಕಾರ್ಯಕ್ರಮ ಆಯೋಜಿಸಿ ಜನರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೆಲ್ಕೊ ಸಂಸ್ಥೆಯ ಜನರಲ್ ಮ್ಯಾನೆಜರ್ ಜಗದೀಶ್ ಪೈ, ಸೀನಿಯರ್ ಮ್ಯಾನೇಜರ್ ಸುರೇಶ್ ನಾಯ್ಕ್, ಮ್ಯಾನೇಜರ್ ಸುಭಾಶ್ ಅಣ್ಣಿ, ಸೆಲ್ಕೊ ಫೌಂಡೇಶನ್ ಮ್ಯಾನೆಜರ್ ಕಿಶೋರ್ ಕುಮಾರ್ ಇದ್ದರು.


Spread the love

Exit mobile version