ಸೆ.25ಕ್ಕೆ ಆನೆಗುಂದಿ ಶ್ರೀ ಚಾತುರ್ಮಾಸ್ಯ ಸಮಾರೋಪ 

Spread the love

ಸೆ.25ಕ್ಕೆ ಆನೆಗುಂದಿ ಶ್ರೀ ಚಾತುರ್ಮಾಸ್ಯ ಸಮಾರೋಪ 

ಉಡುಪಿ: ಕಟಪಾಡಿಯ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವಿಲಂಬಿ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಸಮಾರೋಪ ಸಮಾರಮಭವು 2018ನೇ ಸೆಪ್ಟಂಬರ್ 25ರಂದು ಮಂಗಳವಾರ ಪಡುಕುತ್ಯಾರಿನ ಪಡುಕುತ್ಯಾರಿನ ಶ್ರೀಸರಸ್ವತೀ ಸಭಾ ಭವನದಲ್ಲಿ ನಡೆಯಲಿದೆ.

ಇದೇ ವೇಳೆ ನಡೆಯುವ ಧಾರ್ಮಿಕ ಸಭೆಯಲ್ಲಿ ಈ ಬಾರಿ ಪುರಸಭಾ ಚುನಾವಣೆಯಲ್ಲಿ ಚುನಾಯಿತರಾದ ಸಮಾಜ ಬಂಧುಗಳಿಗೆ ಅಭಿನಂದನಾ ಸಮಾರಂಭವು ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ ಘಂಟೆ 5ರಿಂದ ವಿಶ್ವಕರ್ಮ ಯಜ್ಞ , ಘಂಟೆ 7.00ಕ್ಕೆ ಕಟಪಾಡಿ ಮಣಿಪುರ ನದಿಯಲ್ಲಿ ಸಿಮೋಲ್ಲಂಘನ ನಂತರ ದಿಗ್ವಿಜಯ ಮೆರವಣಿಗೆಯ ಮೂಲಕ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಬೆಳಗುತ್ತಿಮಠ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನ, ಕಟಪಾಡಿ ವೇಣುಗಿರಿಶ್ರೀ ಕಾಳಿಕಾಂಬಾ ವಿಶ್ವಕಮೇಶ್ವರ ದೇವಸ್ಥಾನ ಸಂದರ್ಶನವಿತ್ತ ಬಳಿಕ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ಪೂಜೆ ನಡೆಸುವರು. ನಂತರ ಕಾಪು ಶ್ರೀ ಕಾಳಿಕಾಂಬಾ ದೇವಳ-ಪಡುಕುತ್ಯಾರು ಶ್ರೀ ದುರ್ಗಾದೇವಿ ಮಂದಿರ ದಾರಿಯಾಗಿ ಪಡುಕುತ್ಯಾರು ಶ್ರೀಮತ್ ಆನೆಗುಂದಿ ಮಠಕ್ಕೆ ಜಗದ್ಗುರುಗಳವರು ಮೆರವಣಿಗೆಯಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಪಡುಕುತ್ಯಾರಿನ ಮಹಾಸಂಸ್ಥಾನಕ್ಕೆ ಚಿತೈಸುವರು.

ನಂತರ ಶ್ರೀಸರಸ್ವತೀ ಸಭಾ ಭವನದಲ್ಲಿ ಘಂಟೆ 10.30ಕ್ಕೆ ಶ್ರೀಗುರುಪಾದಪೂಜೆಯ ಬಳಿಕ ಘಂಟೆ 11.00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಭೆಯಲ್ಲಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು.

ಸಭೆಯ ಅಧ್ಯಕ್ಷತೆಯನ್ನು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ತೆಲಂಗಾಣ ಸರಕಾರ ವಿಧಾನ ಸಭೆಯ ಸಭಾಪತಿಗಳಾದ ಶ್ರೀ ಸಿರಿಕೊಂಡ ಮಧುಸೂದನ ಆಚಾರ್, ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷರಾದ ಶ್ರೀ ಡಾ.ಡಿ ಮುರುಗಸೆಲ್ವಂ ಆಚಾರ್ ಚೆನೈ, ಅತಿಥಿಗಳಾಗಿ ಕಾಪು ಶಾಸಕ ಶ್ರೀ ಲಾಲಾಜಿ ಆರ್ ಮೆಂಡನ್, ಉಡುಪಿ ಶಾಸಕ ಶ್ರೀ ರಘುಪತಿ ಭಟ್, ಹೊನ್ನಳ್ಳಿ ಶಾಸಕ ಶ್ರೀ ರೇಣುಕಾಚಾರ್ಯ ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ ,ಶ್ರೀ ಪ್ರಮೋದ್ ಮಧ್ವರಾಜ್, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಧೀೀರಜ್ ಶೆಟ್ಟಿ ಭಾಗವಹಿಸುವರು. ಸಮಾರಂಭದಲ್ಲಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವ ಅಧ್ಯಕ್ಷ ಶ್ರೀ ಪಿ.ವಿ ಗಂಗಾಧರ ಆಚಾರ್ಯ, ಉಡುಪಿ , ಸಮಿತಿಯ ಉಪಾಧ್ಯಕ್ಷರುಗಳಾದ ಶ್ರೀ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಶ್ರೀ ಬಿ. ಸುಂದರ ಆಚಾರ್ಯ, ಬೆಳುವಾಯಿ, ಶ್ರೀ ಎನ್. ಪರಮೇಶ್ವರ ಆಚಾರ್ಯ ನೀರ್ಚಾಲು, ಶ್ರೀ ಕೆ. ಹರೀಶ್ ಆಚಾರ್ಯ ಕಾರ್ಕಳ, ಶ್ರೀ ಕೆ. ಕೇಶವ ಆಚಾರ್ಯ, ಮಂಗಳೂರು,ಶ್ರೀ ನವೀನ್ ಆಚಾರ್ಯ ಪಡುಬಿದ್ರೆ, ಶ್ರೀ ರತ್ನಾಕರ ಆಚಾರ್ಯ ಕಟ್ಟೆಮಾರ್ ಕಾರ್ಕಳ, ಶ್ರೀ ಮಂಜುನಾಥ ಆಚಾರ್ಯ ಬಡಾಕೆರೆ, ಶ್ರೀ ಮಧುಕರಚಂದ್ರಶೇಖರ ಆಚಾರ್ಯ, ಹೊನ್ನಾವರ, ಶ್ರೀ ಭಾಸ್ಕರ ಎ. ಆಚಾರ್ಯ, ಭಟ್ಕಳ,ಶ್ರೀ ಎ. ಶೇಖರ ಆಚಾರ್ಯ ಕಾಪು, ಶ್ರೀ ಕೆ. ಸುಧಾಕರ ಆಚಾರ್ಯ ಕೊಲಕಾಡಿ, ಶ್ರೀ ಕೆ. ಸುಂದರ ಆಚಾರ್ಯ ಕೋಟೆಕಾರು, ಶ್ರೀ ಪಿ. ಉಮೇಶ ಆಚಾರ್ಯ ಪೋಳ್ಯ ಪುತ್ತೂರು,ಶ್ರೀ ಎ. ಸುಧಾಕರ ಆಚಾರ್ಯ ಎಡನೀರು ಪುತ್ತೂರು, ಶ್ರೀ ಜೆ. ದಿವಾಕರ ಆಚಾರ್ಯ ಅಡೂರು,ಶ್ರೀ ಹರಿಶ್ಚಂದ್ರ ಎನ್. ಆಚಾರ್ಯ ಬೆಂಗಳೂರು, ಶ್ರೀ ಮಧು ಆಚಾರ್ಯ ಮೂಲ್ಕಿ, ಶ್ರೀ ಯು. ಕೆ. ಎಸ್ ಸೀತಾರಾಮ ಆಚಾರ್ಯ, ಶ್ರೀ ಟಿ. ಸುಧಾಕರ ಆಚಾರ್ಯ ತ್ರಾಸಿ, ವಿದ್ವಾನ್ ವೇ.ಬ್ರ. ಶ್ರೀ ಶಂಕರ ಆಚಾರ್ಯ ಪಂಡಿತ್ (ಕಡ್ಲಾಸ್ಕರ್), ಶ್ರೀ ಕೃಷ್ಣ ವಿ. ಆಚಾರ್ಯ ಮುಂಬಯಿ, ಶ್ರೀ ಜಿ.ಟಿ ಆಚಾರ್ಯ ಮುಂಬಯಿ, ಶ್ರೀ ಶುಭಕರ ಎನ್ ಆಚಾರ್ಯ ಕೊಯಂಬುತ್ತೂರು, ಶ್ರೀ ಮಲ್ಲಿಕಾರ್ಜುನ ಆಚಾರ್ ಶಿಕಾರಿಪುರ ಇವರು ಉಪಸ್ಥಿತರಿರುವರು. ಇದೇ ವೇಳೆ ಈ ಬಾರಿ ಪುರಸಭಾ ಚುನಾವಣೆಯಲ್ಲಿ ಚುನಾಯಿತರಾದ ಸಮಾಜ ಬಂಧುಗಳಿಗೆ, ವಿವಿಧ ಗಣ್ಯರಿಗೆ ಗೌರವ ಅಭಿನಂದನಾ ಸಮಾರಂಭವು ನಡೆಯಲಿದೆ. ಚಾತುರ್ಮಾಸ್ಯದ ಯಶಸ್ಸಿಗೆ ಶ್ರಮಿಸಿದ ಸರ್ವರಿಗೂ ಅಭಿನಂದನೆ ಕೃತಜ್ಞತಾ ಸಮರ್ಪಣೆ ಹಾಗೂ ಅನುಗ್ರಹ ಮಂತ್ರಾಕ್ಷತೆಯು ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.


Spread the love