Home Mangalorean News Kannada News ಸೆ. 30 : ಸರ್ವಿಸ್ ರಸ್ತೆಗೆ ಆಗ್ರಹಿಸಿ ಮಾಬುಕಳದಿಂದ ಕೋಟ ವರೆಗೆ ಪಾದಯಾತ್ರೆ

ಸೆ. 30 : ಸರ್ವಿಸ್ ರಸ್ತೆಗೆ ಆಗ್ರಹಿಸಿ ಮಾಬುಕಳದಿಂದ ಕೋಟ ವರೆಗೆ ಪಾದಯಾತ್ರೆ

Spread the love

ಸೆ. 30 : ಸರ್ವಿಸ್ ರಸ್ತೆಗೆ ಆಗ್ರಹಿಸಿ ಮಾಬುಕಳದಿಂದ ಕೋಟ ವರೆಗೆ ಪಾದಯಾತ್ರೆ

ಕೋಟ: ರಾಷ್ಟ್ರೀಯ ಹೆದ್ದಾರಿ 66 ಕುಮ್ರಗೋಡು ಮಾಬುಕಳದಿಂದ ಕೋಟದ ತನಕ ರಸ್ತೆಯ ಎರಡು ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆಗೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿಯ ನೇತೃತ್ವದಲ್ಲಿ ಸೆಪ್ಟೆಂಬರ್ 30 ರಂದು ಮಧ್ಯಾಹ್ನ 3 ಗಂಟೆಗೆ ಬೃಹತ್ ಪಾದಯಾತ್ರೆಯನ್ನು ಆಯೋಜಿಸಿದೆ.

ಈ ಕುರಿತು ಭಾನುವಾರ ಸಭೆ ಸೇರಿದ ಹೆದ್ದಾರಿ ಜಾಗೃತಿ ಸಮಿತಿಯು ಈ ನಿರ್ಧಾರವನ್ನು ಕೈಗೊಂಡಿದ್ದು ಸೆಪ್ಟೆಂಬರ್ 30ರಂದು ಮಾಬುಕಳ ದಿಂದ ಪ್ರಾರಂಭಿಸಿ ಕೋಟದ ತನಕ ಸಾವಿರಾರು ಮಂದಿ ಒಂದಾಗಿ ಪಾದಯಾತ್ರೆ ಮೂಲಕ ಹೆದ್ದಾರಿ ಪ್ರಾಧಿಕಾರ, ಜನಪ್ರತಿನಿಧಿಗಳು, ಜಿಲ್ಲಾಡಳಿತಕ್ಕೆ ಸಮಸ್ಯೆಯನ್ನು ಪರಿಚಯಿಸುವ ಸಲುವಾಗಿ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ಮುಂದೆ ಸರ್ವಿಸ್ ರಸ್ತೆ ಆಗುವ ತನಕ ತೀವ್ರ ಹೋರಾಟ ಮಾಡಲು ಸಭೆ ನಿರ್ಧರಿಸಿದೆ.

ಈಗಾಗಲೇ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸೂಕ್ತ ಸರ್ವಿಸ್ ರಸ್ತೆ ಇಲ್ಲದ ಕಾರಣ 100 ಮೀಟರ್ ಕ್ರಮಿಸಲು ಐದಾರು ಕಿ.ಮಿ. ಸುತ್ತಿ ಬಳಸಿ ಬರಬೇಕು ಅಥವಾ ಬಾರಿ ದಂಡ ತೆರಬೇಕಾಗಿದ್ದು ಅತ್ಯಂತ ಜನನಿಬಿಡ ಹಾಗೂ ಹಲವಾರು ಅಡ್ಡರಸ್ತೆಗಳನ್ನು ಹೊಂದಿರುವ ನಮ್ಮ ಪ್ರದೇಶಗಳಲ್ಲಿ ಅಸಮರ್ಪಕ ಕಾಮಾಗರಿಯಿಂದಾಗಿ ಅತ್ಯಂತ ಅಗತ್ಯವಿರುವ ಸ್ಥಳಗಳಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಮಾಡದೇ ಜಾರಿಕೊಳ್ಳುತ್ತಿರುವ ನವಯುಗ ಸಂಸ್ಥೆಗೆ ಹಾಗೂ ಜನಪ್ರತಿನಿಧಿಗಳಿಗೆ ಈ ಒಂದು ಹೋರಾಟದ ಮೂಲಕ ನಮಗೆ ನ್ಯಾಯ ದೊರಕುವ ತನಕ ಹೋರಾಟದ ಮೂಲಕ ಸೂಕ್ತ ಸಂದೇಶವನ್ನು ನೀಡಲು ಸಭೆ ನಿರ್ಧರಿಸಿದೆ.


Spread the love

Exit mobile version