ಸೆ 5-9 ರ ತನಕ ಉಡುಪಿ ಜಿಲ್ಲೆಯಲ್ಲಿ ವಾಹನ ರ್ಯಾಲಿ, ಪ್ರತಿಭಟನೆಗಳಿಗೆ ನಿಷೇಧ

Spread the love

ಸೆ 5-9 ರ ತನಕ ಉಡುಪಿ ಜಿಲ್ಲೆಯಲ್ಲಿ ವಾಹನ ರ್ಯಾಲಿ, ಪ್ರತಿಭಟನೆಗಳಿಗೆ ನಿಷೇಧ

ಉಡುಪಿ: ಎಫ್ಐ, ಕೆ.ಎಫ್.ಡಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮತ್ತು ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಇದೇ ಗುರುವಾರ ಬಿಜೆಪಿ ಯುವ‌ ಮೋರ್ಚಾ ವತಿಯಿಂದ ನಡೆಸಲು ಉದ್ದೇಶಿಸಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿ  ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಸಪ್ಟೆಂಬರ್ 5 ಬೆಳಿಗ್ಗೆ 6 ರಿಂದ 9 ಬೆಳಿಗ್ಗೆ 6  ಗಂಟೆಯ ತನಕ  ಯಾವುದೇ ರೀತಿಯ ವಾಹನ ರ್ಯಾಲಿ, ಪ್ರತಿಭಟನೆ, ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ

ಈ ಕುರಿತು ಅಧಿಸೂಚನೆ ಹೊರಡಿಸಿರುವ ಜಿಲ್ಲಾ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನುರಾಧ ಅವರು ಜಿಲ್ಲಾ ಪೋಲಿಸ್ ಇಲಾಖೆ ವರದಿಯನ್ನು ಆಧರಿಸಿ ಉಡುಪಿ ಜಿಲ್ಲೆಯಲ್ಲಿ ಉಡುಪಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ಬೈಕ್ ರ್ಯಾಲಿ ಮತ್ತು ಅದಕ್ಕೆ ಸಂಬಂಧಿತ ಕಾರ್ಯಕ್ರಮಗಳಿಗೆ ಉಡುಪಿ ಜಿಲ್ಲೆಯಲ್ಲಿ ಅನುಮತಿ ನೀಡಿದ್ದೇ ಆದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವುಂಟಾಗುವ ಸಾಧ್ಯತೆ ಇರುವುದನ್ನು ಮತ್ತು ಉಡುಪಿ ಜಿಲ್ಲೆಯಲ್ಲಿನ ಸಾಮಾನ್ಯ ಜನ ಜೀವನ ಅಸ್ತವ್ಯಸ್ಥವಾಗುವ ಸಾಧ್ಯತೆಯನ್ನು ಮನಗಂಡು  ಯಾವುದೇ ಬೈಕ್ ರ್ಯಾಲಿ ನಡೆಸುವುದನ್ನು ಮತ್ತು ಯಾವುದೇ ಸಂಘಟನೆಯ ಕಾರ್ಯಕರ್ತರು ಯಾವುದೇ ಕಾರಣಕ್ಕಾಗಿ ಬೈಕ್ ರ್ಯಾಲಿಯಲ್ಲಿ ಉಡುಪಿ ಜಿಲ್ಲೆ ಪ್ರವೇಶಿಸದಂತೆ ಉಡುಪಿ ಜಿಲ್ಲೆಯಲ್ಲಿ ಸಂಚರಿಸದಂತೆ ಹಾಗೂ ಉಡುಪಿ ಜಿಲ್ಲೆಯಿಂದ ಹೊರ ಹೋಗದಂತೆ ಮುಂಜಾಗೃತ ಕ್ರಮವಾಗಿ ಸಪ್ಟೆಂಬರ್ 5 ಬೆಳಿಗ್ಗೆ 6 ರಿಂದ 9 ಬೆಳಿಗ್ಗೆ 6  ಗಂಟೆಯ ತನಕ  ಯಾವುದೇ ಸಂಘಟನೆಗಳ ಆಯೋಜಕರು/ಕಾರ್ಯಕರ್ತರು/ಸದಸ್ಯರು ಹಾಗೂ ಯಾವುದೇ ವ್ಯಕ್ತಿಗಳು ಯಾವುದೇ ರೀತಿಯ ದ್ವಿಚಕ್ರ ವಾಹನ, ಬೈಕ್ ಇತ್ಯಾದಿ ಇತರ ಯಾವುದೇ ವಾಹನಗಳ ಮೂಲಕ ಜಾಥಾ ನಡೆಸುವುದನ್ನು ಮತ್ತು ಪಾದಾಯಾತ್ರೆ, ಮೆರವಣಿಗೆ, ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವುದನ್ನು ಸಹಾ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.


Spread the love