ಸೌದಿ: ಜೈಲು ಪಾಲಾಗಿದ್ದ ನಿರಪರಾಧಿ – ಕೆಸಿಎಫ್ ನೆರವಿನಿಂದ ಬಂಧ ಮುಕ್ತ
ದಮ್ಮಾಮ್: ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಸುಮಾರು 8 ತಿಂಗಳ ಹಿಂದೆ ಪೆರ್ಲ ಬದಿಯಡ್ಕ ನಿವಾಸಿ ಅಬೂಬಕ್ಕರ್ ಎಂಬ ವ್ಯಕ್ತಿ ಕಾಣೆಯಾಗಿದ್ದಾರೆ ಎಂಬ ವಾರ್ತೆ ಸಾಮಾಜಿಕ ತಾಣದಲ್ಲಿ ಪಸರಿಸಿತು.
ಹಲವು ವ್ಯಕ್ತಿಗಳು, ಸಂಘಟನೆಗಳು ಅವರನ್ನು ಹುಡುಕಾಡಲು ಆರಂಭಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅದೇ ರೀತಿ ಕೆ.ಸಿ.ಎಫ್ ದಮ್ಮಾಂ ಝೋನಲ್ ನಾಯಕರಾದ ಮುಹಮ್ಮದ್ ಮಲೆಬೆಟ್ಟು, ಬಾಷಾ ಗಂಗಾವಳಿಯವರು ಕೂಡಾ ಹುಡುಕಾಡಲು ಆರಂಭಿಸಿದಾಗ ಕಾಣೆಯಾಗಿದ್ದ ಅಬೂಬಕ್ಕರ್ ಅವರು ಯಾವುದೋ ಒಂದು ಕೇಸಿನಲ್ಲಿ ಬಂಧನಕ್ಕೊಳಗಾಗಿ ಜೈಲೊಂದರಲ್ಲಿ ಇರುವುದಾಗಿ ಮಾಹಿತಿ ಲಭಿಸಿದ ಹಿನ್ನಲೆಯಲ್ಲಿ ಅಬೂಬಕ್ಕರವರನ್ನು ಮುಖತಃ ಭೇಟಿಯಾಗಿ ಕಾರಣಗಳನ್ನು ವಿಚಾರಿಸಿ, ಸಮಾಧಾನಪಡಿಸಿ ಹಿಂತಿರುಗಿದ್ದಾರೆ.
ಅಬೂಬಕ್ಕರ್ ಮತ್ತು ಅವರ ಕುಟುಂಬಸ್ಥರು ಅದೇ ರೀತಿ ಅವರ ಊರಿನವರಿಂದಲೂ ಕೆ.ಸಿ.ಎಫ್ ನಾಯಕರಾದ ಮುಹಮ್ಮದ್ ಮಲೆಬೆಟ್ಟುರವರಿಗೆ ಕರೆ ಮಾಡಿ ಜೈಲು ಮುಕ್ತಗೊಳಿಸಲು ಸಹಕರಿಸುವಂತೆ ಕೇಳಿಕೊಂಡಿದ್ದರು.
‘ನಾನು ನಿರಪರಾಧಿ ಸುಳ್ಳು ಕೇಸಿನಲ್ಲಿ ನನ್ನನ್ನು ಬಂಧಿಸಲಾಗಿದೆ ಹೇಗಾದರೂ ಮಾಡಿ ನನ್ನನ್ನು ಮೋಚಿಸಿ’ ಎಂದು ಬಹಳ ದುಖಃದಿಂದ ಅಬೂಬಕರ್ ಕರೆ ಮಾಡುತ್ತಿದ್ದರು.
ಈ ಸಮಸ್ಯೆಯನ್ನು ಬಗೆಹರಿಸುವ ಸಂಪೂರ್ಣ ಜವಾಬ್ದಾರಿಯನ್ನು ಕೆಸಿಎಫ್ ವಹಿಸಿಕೊಂಡು ಅಬೂಬಕ್ಕರವರನ್ನು ಬಂಧನ ಮುಕ್ತಗೊಳಿಸಲು ನಿರಂತರ ಪ್ರಯತ್ನಪಟ್ಟಿತು, ಆರು ತಿಂಗಳ ಬಳಿಕ ಅವರನ್ನು ಸೌದಿ ಕೋರ್ಟ್ ವಿಚಾರಣೆಗೊಳಪಡಿಸಿ, ನಿರಪರಾಧಿ ಎಂದು ಘೋಷಿಸಿ, ಬಂಧ ಮುಕ್ತಗೊಳಿಸಲು ಆದೇಶಿಸಿತು.
ಆದರೆ, ಜೈಲ್ ಮುಕ್ತಿಗಾಗಿ ಸಹಕರಿಸದ ಕಫೀಲ್ ರನ್ನು ಅಶ್ರಫ್ ಜುಬೈಲ್ ಅವರು ನಿರಂತರ ಸಂಪರ್ಕಿಸಿ, ಮನವೊಲಿಸುವಲ್ಲಿ ಸಫಲರಾದರು. ಅಬೂಬಕ್ಕರ್ ರವರು ಸಂಪೂರ್ಣವಾಗಿ ಬಂಧನಮುಕ್ತರಾಗಿ ಹೊರಬಂದರು.
ಅವರ ಜೈಲ್ ಮೋಚನೆ ಗೊಳಿಸಿದ್ಧಲ್ಲದೆ, ಒಂದು ಉದ್ಯೋಗವನ್ನೂ ಮಾಡಿಕೊಟ್ಟ ಕೆ.ಸಿ.ಎಫ್ ನ ಸಾಂತ್ವನ ಕಾರ್ಯಾಚರಣೆಯು ಸರ್ವರಿಂದಲೂ ಶ್ಲಾಘಿಸಲ್ಪಟ್ಟಿತು.