Home Mangalorean News Kannada News ಸೌಹಾರ್ದತೆಗಾಗಿ ಚಿಣ್ಣರ ನಡಿಗೆ ಉದ್ಘಾಟನೆ

ಸೌಹಾರ್ದತೆಗಾಗಿ ಚಿಣ್ಣರ ನಡಿಗೆ ಉದ್ಘಾಟನೆ

Spread the love

ಸೌಹಾರ್ದತೆಗಾಗಿ ಚಿಣ್ಣರ ನಡಿಗೆ ಉದ್ಘಾಟನೆ
ಬೆಂಗರೆ: ಎಪ್ರಿಲ್ 6,7,8ರಂದು ಕಸ್ಬಾ ಬೆಂಗರೆ ಸರಕಾರಿ ಶಾಲೆಯಲ್ಲಿ ನಡೆಯಲಿರುವ `ಸೌಹಾರ್ದಯುತ ನಾಳೆಗಾಗಿ ಚಿಣ್ಣರ ಹಬ್ಬ’ ಕಾರ್ಯಕ್ರಮದ ಪ್ರಚಾರಾರ್ಥ `ಸೌಹಾರ್ದತೆಗಾಗಿ ಚಿಣ್ಣರ ನಡಿಗೆ’ಯು ನಡೆಯಿತು. ಚಿಣ್ಣರ ನಡಿಗೆಯ ಉದ್ಘಾಟನೆಯನ್ನು ನಿವೃತ್ತ ಸೈನಿಕರಾದ ವಿಶ್ವನಾಥ್ ಪ್ರಕಾಶ್ ಕಾರ್ವಿಯವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಸ್ಥಳೀಯ ಕಾರ್ಪೋರೆಟರ್ ರಘುವೀರ್, ಮೀರಾ ಕರ್ಕೇರಾ, ಉದ್ಯಮಿ ಶಶಿ ಮೆಂಡನ್, ಬೆಂಗರೆ ವಿದ್ಯಾರ್ಥಿ ಸಂಘದ ಹೇಮಾಚಂದ್ರ, ಕಸಬಾ ಬೆಂಗರೆ ಜುಮಾ ಮಸೀದಿಯ ಅಧ್ಯಕ್ಷರಾದ ಹಮೀದ್ ಹುಸೈನ್, ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್, ಜುಮಾಅತೆ ಇಸ್ಲಾಮೀ ಹಿಂದ್ ಕಸ್ಬಾ ಬೆಂಗರೆ ಸಂಚಾಲಕ ಅಬ್ದುಲ್ ಕರೀಮ್, ಯೂತ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ನವೀನ್ ಸುವರ್ಣ ತಣ್ಣೀರುಬಾವಿ ಶುಭ ಹಾರೈಸಿದರು. ಚಿಣ್ಣರ ಹಬ್ಬ ಸ್ವಾಗತ ಸಮಿತಿ ಅಧ್ಯಕ್ಷರಾದ ಚೇತನ್ ಬೆಂಗರೆ ಸಮಾರೋಪ ಭಾಷಣ ಮಾಡಿದರು. ತೋಟಬೆಂಗರೆಯಿಂದ ತಣ್ಣೀರುಬಾವಿ ವರೆಗಿನ ಸುಮಾರು 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಚಿಣ್ಣರ ನಡಿಗೆಯಲ್ಲಿ ಭಾಗವಹಿಸಿ, “ನಾವು ಮಕ್ಕಳು ಇನ್ನು ಮುಂದೆ ಯಾವುದೇ ಕೆಡುಕುಗಳಲ್ಲಿ ಭಾಗಿಯಾಗಲಾರೆವು ಮತ್ತು ಸೌಹಾರ್ದತೆಗೆ ತಮ್ಮ ಜೀವನವನ್ನು ಮುಡಿಪಾಗಿಡುವೆವು” ಎಂದು ಪ್ರತಿಜ್ಞೆ ಮಾಡಿದರು. ಚಿಣ್ಣರ ನಡಿಗೆಯು ತೋಟಬೆಂಗರೆಯಿಂದ ಭಾರತ್ ಶಿಪ್‍ಯಾರ್ಡ್‍ವರೆಗೆ ನಡೆಯಿತು.

ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಹೊಣೆಗಾರರುಗಳಾದ ಸಂಜಯ್ ಸುವರ್ಣ, ಎಮ್.ಎ.ರಹ್‍ಮಾನ್(ಮೋನಾಕ), ಅಬ್ದುಸ್ಸಮದ್ ತೋಟಬೆಂಗರೆ, ಫೈಝಲ್ ಬಿನ್ ಇಸ್ಮಾಈಲ್, ಪ್ರಭಾಕರ್ ಕುದ್ರೋಳಿ ಬೆಂಗರೆ, ಕೆ.ಪಿ.ಇಸ್ಮಾಈಲ್, ಮೆಹಜಬೀನ್, ಸಕೀನಾ, ಖಾಲಿಸಾ ನಿಸಾರ್ ಮುಂತಾದವರು ಉಪಸ್ಥಿತರಿದ್ದರು.ಅಬ್ದುಲ್ ಕಬೀರ್ ಕಾರ್ಯಕ್ರಮ ನಿರೂಪಿಸಿದರು. ನಡಿಗೆಯಲ್ಲಿ ಸೌಹಾರ್ದ ಸಾರುವ ಹಾಡುಗಳನ್ನು ಹೊಂದಿರುವ ವಾಹನ ಪ್ರಚಾರ ನಡೆಸಲಾಯಿತು.


Spread the love

Exit mobile version