Home Mangalorean News Kannada News ಸೌಹಾರ್ದತೆ ಸಾರಿದ ಐವನ್ ಡಿ’ಸೋಜಾ ನೇತ್ರತ್ವದ ದೀಪಾವಳಿ ಭಾವೈಕೈತಾ ಸಂಗಮ

ಸೌಹಾರ್ದತೆ ಸಾರಿದ ಐವನ್ ಡಿ’ಸೋಜಾ ನೇತ್ರತ್ವದ ದೀಪಾವಳಿ ಭಾವೈಕೈತಾ ಸಂಗಮ

Spread the love

ಸೌಹಾರ್ದತೆ ಸಾರಿದ ಐವನ್ ಡಿ’ಸೋಜಾ ನೇತ್ರತ್ವದ ದೀಪಾವಳಿ ಭಾವೈಕೈತಾ ಸಂಗಮ

ಮಂಗಳೂರು: ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ನೇತ್ರತ್ವದಲ್ಲಿ ದೀಪಾವಳಿ ಹಬ್ಬದ ಪ್ರಯಕ್ತ ಭಾನುವಾರ ಕದ್ರಿಯ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಭಾವೈಕ್ಯತಾ ಸಂಗಮ ದೀಪಾವಳಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಕದ್ರಿ ಯೋಗೇಶ್ವರ ಮಠ ಕದ್ರಿ ಇದರ ಶ್ರೀ ಶ್ರೀ ಸಂದೀಪಂತಾಜಿ ಉದ್ಘಾಟಿಸಿದರು.

image002deepavali-ivandsouza-diwali-mangalorean-com-20161029-002

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಜೆ ಆರ್ ಲೋಬೊ ದೀಪಾವಳಿ ಕೇವಲ ಭಾರತೀಯರಿಗೆ ಮಾತ್ರ ಸೀಮಿತವಾಗಿಲ್ಲ ವಿಶ್ವದ ಎಲ್ಲೆಡೆ ನೆಲೆಸಿರುವ ಭಾರತೀಯರು ಇದನ್ನು ಆಚರಿಸುತ್ತಾರೆ. ಈ ದೀಪಗಳ ಹಬ್ಬದ ಮೂಲಕ ನಾವು ಶಾಂತಿ ಮತ್ತು ಸೌಹಾರ್ದ ಸಂದೇಶವನ್ನು ಸಾರಬೇಕಾಗಿದೆ. ಎಲ್ಲಿ ನಮ್ಮ ಸಮಾಜದಲ್ಲಿ ಶಾಂತಿ ಸೌಹಾರ್ದ ನೆಲೆಸಿರುತ್ತದೊ ಆಗ ದೇಶದ ಅಭಿವೃದ್ದಿ ಸಾಧ್ಯ. ನಾವು ಧರ್ಮ ಜಾತಿಯ ಆಧಾರಲ್ಲಿ ಭೇಧವನ್ನು ತೋರುತ್ತಾಹೋದರೆ ಅಂತಹ ದೇಶ ಎಂದಿಗೂ ಅಭಿವೃದ್ಧಿ ಕಾಣಲ್ಲ. ವಿವಿಧತೆಯಲ್ಲಿ ಏಕತೆಯನ್ನು ಸಾರಿದ ದೇಶದಲ್ಲಿ ಇಂದು ನಮಗೆ ಶಾಂತಿ ಸೌಹಾರ್ದತೆ ಅಗತ್ಯವಾಗಿ ಬೇಕಾಗಿದೆ. ದೇಶದಲ್ಲಿ ಹಲವ ಧರ್ಮಗಳ ಜನರು ಬದುಕುತ್ತಿದ್ದು ಯಾವುದೇ ಧರ್ಮ ಕೂಡ ಇತರರನ್ನು ಕೀಳಾಗಿ ಕಾಣು, ಕೊಲ್ಲು ಎನ್ನುವ ಸಂದೇಶ ನೀಡುವುದಿಲ್ಲ ಬದಲಾಗಿ ಪ್ರತಿಯೊಂದು ಧರ್ಮವೂ ಕೂಡ ಕಲಿಸುವ ಸಂದೇಶ ಒಂದೆ ಅದೇನೆಂದರೆ ದೇವನೊಬ್ಬನೆ ನಾವೇಲ್ಲರೂ ದೇವರ ಮಕ್ಕಳು, ಪ್ರತಿಯೊಬ್ಬರು ಕೂಡ ಪರಸ್ಪರ ಗೌರವಿಸಬೇಕು ಎಂದರು.

ಕದ್ರಿ ಯೋಗೇಶ್ವರ ಮಠ ಕದ್ರಿ ಇದರ ಶ್ರೀ ಶ್ರೀ ಸಂದೀಪಂತಾಜಿ ಮಾತನಾಡಿ ದೀಪಾವಳಿ ದೀಪಗಳ ಹಬ್ಬ ನಾವು ನಮ್ಮಲ್ಲಿನ ಅಂತರಂಗದಲ್ಲಿರುವು ಕತ್ತಲನ್ನು ಹೋಗಲಾಡಿಸಬೇಕು ಎಂದರು.

ಮೌಲಾನ ಸಾಧಿಕ್ ಫೈಜಿ ಮಾತನಾಡಿ ಪ್ರತಿ ಧರ್ಮದ ಹಬ್ಬ ಸುದಿನಗಳಲ್ಲಿ ಇತರ ಧರ್ಮಿಯರೂ ಸಂತೋಷಪಡಬೇಕು ಎಲ್ಲರನೂ ಸಹೋದರತೆಯಿಂದ ಬಾಳುವಂತಾಬೇಕು ಎಂದರು.

ಜೆಪ್ಪು ಸೆಮಿನರಿಯ ಪ್ರಾಧ್ಯಪಕರಾದ ವಂ ಕ್ಲಿಫರ್ಡ್ ಫೆರ್ನಾಂಡಿಸ್ ಮಾತನಾಡಿ ಎಲ್ಲಾ ಧರ್ಮದವರೂ ಪರಸ್ಪರ ಅನೋನ್ಯತೆ ಮತ್ತು ಸಹೋದರತೆಯಿಂದ ಬಾಳುವಂತಾಗಬೇಕು . ಹಬ್ಬದ ಸಂದರ್ಭದಲ್ಲಿ ಇತರ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮತ್ತು ಸಹಾಯ ನೀಡುವ ಕೆಲಸಗಳು ನಿರಂತರ ಸಾಗಬೇಕು ಎಂದರು.

ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಮೇಯರ್ ಹರಿನಾಥ್, ಸದಾನಂದ ಶೆಟ್ಟಿ, ಕೋಡಿಜಾಲ್ ಇಬ್ರಾಹಿಂ, ಮಿಥುನ್ ರೈ, ಡಾ ಕವಿತಾ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version