ಸ್ಟರಕ್ ರಸ್ತೆ ಅಭಿವೃದ್ಧಿಗೆ ಶಾಸಕ ಜೆ. ಆರ್ ಲೋಬೊ ಶಿಲಾನ್ಯಾಸ

Spread the love

ಸ್ಟರಕ್ ರಸ್ತೆ ಅಭಿವೃದ್ಧಿಗೆ ಶಾಸಕ ಜೆ. ಆರ್ ಲೋಬೊ ಶಿಲಾನ್ಯಾಸ

ಮಂಗಳೂರು : ನಗರದ ಹೃದಯ ಭಾಗದಲ್ಲಿರುವ ಫಳ್ನೀರ್ ಬಳಿ ಸ್ಟರಕ್ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸವನ್ನು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಜೆ. ಆರ್ ಲೋಬೊ ಹಾಗೂ ಮೇಯರ್ ಶ್ರೀಮತಿ ಕವಿತಾ ಸನಿಲ್ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶ್ರೀ ಲೋಬೊರವರು ಬಹಳ ವರ್ಷಗಳಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಹಂಬಲ ಪಾಲಿಕೆಗೆ ಇತ್ತು. ಆ ಕನಸು ನನಸಾಗುವ ಕಾಲ ಪಕ್ಷವಾಗಿದೆ. ಇದೀಗ ಪ್ರೀಮಿಯಮ್ ಅಫೈರ್ ನಿಧಿಯಿಂದ ಸುಮಾರು ರೂ. 1.90 ಕೋಟಿ ವೆಚ್ಚದಲ್ಲಿ ಈ ರಸ್ತೆಯು ಅಭಿವೃದ್ಧಿಯಾಗಲಿದೆ. ಸುಮಾರು 480 ಮೀಟರ್ ಉದ್ದ, 12 ಮೀಟರ್ ಅಗಲವಾಗಲಿರುವ ಈ ರಸ್ತೆಯ ಅಭಿವೃದ್ಧಿಗೆ ಸ್ಥಳೀಯವಾಗಿ ವಾಸಿಸುತ್ತಿರುವ ಅನೇಕ ಜನರ ಸಹಕಾರವಿದೆ. ಅದರ ಸೇವೆಯನ್ನು ನಾವು ಮರೆಯುವಂತಿಲ್ಲ. ರಸ್ತೆಯ ಬದಿಯಲ್ಲಿ ಫೂಟ್‍ಪಾತ್ ಹಾಗೂ ಮಳೆನೀರು ಹರಿಯುವ ತೋಡು ಕೂಡ ನಿರ್ಮಾಣವಾಗಲಿದೆ. ಈ ರಸ್ತೆಯು ಅತೀ ಮುಖ್ಯ ರಸ್ತೆಯಾಗಿದ್ದು, ಇದು ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್‍ಗೆ ಹೋಗುವ ಜನರಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ನಗರ ಯೋಜನೆ ಅಧ್ಯಕ್ಷ ಅಬ್ದುಲ್ ರವೂಫ್, ಆರೋಗ್ಯ ಸಮಿತಿ ಅಧ್ಯಕ್ಷೆ ಶ್ರೀಮತಿ ನಾಗವೇಣಿ, ಕಾರ್ಪೋರೇಟರ್ ಎ.ಸಿ ವಿನಯ್‍ರಾಜ್, ಮುಖ್ಯ ಸಚೇತಕ ಶಶಿಧರ ಹೆಗಡೆ, ಮಾಜಿ ಕಾರ್ಪೋರೇಟರ್‍ಗಳಾದ ಸುರೇಶ್ ಬಾಬು, ರಾಮಚಂದ್ರ ಕರ್ಕೇರಾ, ಧರ್ಮಣ್ಣ ನಾೈಕ, ಕೆಎಸ್‍ಆರ್‍ಟಿಸಿ ನಿರ್ದೇಶಕ ಟಿ.ಕೆ ಸುಧೀರ್ ಯುವ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ತೌಫೀಕ್, ಉಪ ಆಯುಕ್ತ (ಅಭಿವೃದ್ಧಿ) ಶ್ರೀ ಲಿಂಗೇಗೌಡ, ಕಾರ್ಯಪಾಲಕ ಅಭಿಯಂತಕ ಗುರುರಾಜ್, ಮರಳ ಹಳ್ಳಿ ಸಹಾಯ ಅಭಿಯಂತಕ ವಿಶಾಲನಾಥ, ಕಿರಿಯ ಅಭಿಯಂತಕ ರಘುಪಾಲ, ಗುತ್ತಿಗೆದಾರ ಜಸೀರುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.


Spread the love