Home Mangalorean News Kannada News ಸ್ಟ್ರಾಂಗ್ ರೂಂ ಸೇರಿದ ಮತಪೆಟ್ಟಿಗೆಗಳು

ಸ್ಟ್ರಾಂಗ್ ರೂಂ ಸೇರಿದ ಮತಪೆಟ್ಟಿಗೆಗಳು

Spread the love

ಸ್ಟ್ರಾಂಗ್ ರೂಂ ಸೇರಿದ ಮತಪೆಟ್ಟಿಗೆಗಳು

ಮಂಗಳೂರು: ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮತಯಂತ್ರಗಳು ಸುರತ್ಕಲ್‍ನ ಎನ್ ಐ ಟಿಕೆಯ ಇಂಜಿನಿಯರಿಂಗ್ ಕಾಲೇಜಿನ ಕಟ್ಟಡದಲ್ಲಿ ಭದ್ರವಾಗಿವೆ.

ಇಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಚುನಾವಣಾ ವೀಕ್ಷಕರಾದ ರಾಜೀವ್ ರತನ್ ಅವರ ಸಮ್ಮುಖದಲ್ಲಿ ಎಲ್ ಮತಯಂತ್ರಗಳನ್ನು ಭದ್ರತಾಕೊಠಡಿಯಲ್ಲಿರಿಸಿ ಮುದ್ರೆ ಹಾಕಲಾಯಿತು.

8ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಅತ್ಯಂತ ಭದ್ರತೆಯಲ್ಲಿ ತಂದಿರಿಸಲಾಗಿದ್ದು, ಕಟ್ಟಡಕ್ಕೆ ವಿಶೇಷ ಭದ್ರತಾ ಪಡೆ, ಪೊಲೀಸ್ ತಂಡ ಹಾಗೂ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ.

ಮತಯಂತ್ರಗಳನ್ನು ಸ್ಟ್ರಾಂಗ್ ರೂಂಗೆ ಇರಿಸಿದ ಬಳಿಕ ಜಿಲ್ಲಾಧಿಕಾರಿಗಳು ಎಲ್ಲರಿಗೂ ವಿಶೇಷ ಅಭಿನಂದನೆ ಸಲ್ಲಿಸಿದರು. ಸಿಇಒ ಡಾ.ಸೆಲ್ಲಮಣಿ, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಇದ್ದರು.

ಮತಯಂತ್ರಗಳ ಪರಿಶೀಲನೆ

ಮಂಗಳೂರು: ಮತಯಂತ್ರಗಳ ಪರಿಶೀಲನೆಯನ್ನು ಎನ್‍ಐಟಿಕೆಯಲ್ಲಿಂದು ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರರು, ರಾಜಕೀಯ ಪಕ್ಷದ ಪ್ರತಿನಿಧಿಗಳು ಪಾಲ್ಗೊಂಡರು.


Spread the love

Exit mobile version