ಸ್ಮಾರ್ಟ್ ಸಿಟಿಗೆ ಕೇಂದ್ರದ 107 ಕೋಟಿ ಬಿಡುಗಡೆ- ವೇದವ್ಯಾಸ ಕಾಮತ್
ಮಂಗಳೂರು: ಸ್ಮಾರ್ಟ್ಸಿಟಿಯಾಗಿ ಆಯ್ಕೆಗೊಂಡಿರುವ ಮಂಗಳೂರಿಗೆ ಕೇಂದ್ರ ಸರಕಾರದಿಂದ 107 ಕೋಟಿ ಬಿಡುಗಡೆಯಾಗಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯ ಈ ಮೂಲಕ ವಿಧ್ಯುಕ್ತವಾಗಿ ಆರಂಭಗೊಂಡಿದೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹರ್ಷ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಸ್ಪೆಶಲ್ ಪರ್ಪಸ್ ವೆಹಿಕಲ್ ರಚನೆಗೆ ಕುರಿತಾದ ಮಹತ್ವದ ಸಭೆ ಬೆಂಗಳೂರಿನಲ್ಲಿ ನಡೆದಿದೆ. ಎಸ್ ಪಿವಿ ಅಧ್ಯಕ್ಷ ರಿತೇಶ್ ಕುಮಾರ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸರಕಾರದ ಮೊದಲ ಕಂತು 107 ಕೋಟಿ ಬಿಡುಗಡೆಯಾಗಿರುವುದರಿಂದ ಸ್ಮಾರ್ಟ ಸಿಟಿಯ ಕೆಲಸಗಳು ಶೀಘ್ರದಲ್ಲಿ ಆರಂಭಗೊಳ್ಳಲಿವೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಎಸ್ ಪಿವಿಯ ಮುಂದಿನ ಸಭೆ ಜೂನ್ ನಲ್ಲಿ ಮಂಗಳೂರಿನಲ್ಲಿ ನಡೆಯಲಿದೆ ಎಂದು ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಕೇಂದ್ರ ಸರಕಾರ ಕೊಟ್ಟಷ್ಟೇ ಮೊದಲ ಹಂತದ ಅನುದಾನ ರಾಜ್ಯ ಸರಕಾರ ಕೊಡಬೇಕಾಗಿದೆ. ಅದು ಇನ್ನೂ ಬಂದಿಲ್ಲ. ಕನಿಷ್ಟ ಹತ್ತು ದಿನಗಳ ಒಳಗೆ ಆ ಹಣ ಬಂದರೆ ಕೆಲಸಗಳು ಇನ್ನಷ್ಟು ವೇಗದಿಂದ ನಡೆಯಬಹುದು.