ಸ್ವಚ್ಚತಾ ಕಾರ್ಯಕ್ರಮದ ಮೂಲಕ ಬಿಜೆಪಿ ಯುವ ಮೋರ್ಚಾ ವತಿಯಿಂದ ಮೋದಿ ಹುಟ್ಟು ಹಬ್ಬ ಆಚರಣೆ

Spread the love

ಸ್ವಚ್ಚತಾ ಕಾರ್ಯಕ್ರಮದ ಮೂಲಕ ಬಿಜೆಪಿ ಯುವ ಮೋರ್ಚಾ ವತಿಯಿಂದ ಮೋದಿ ಹುಟ್ಟು ಹಬ್ಬ ಆಚರಣೆ

ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 67ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಗರ ಯುವ ಮೋರ್ಚಾ ಅಧ್ಯಕ್ಷ ಅಕ್ಷಿತ್ ಶೆಟ್ಟಿ ಹೆರ್ಗ ನೇತೃತ್ವದಲ್ಲಿ ಇಂದ್ರಾಳಿ ಎಮ್ ಜಿ ಎಮ್ ಕಾಲೇಜಿನ ಬಳಿ ಇರುವ ಬಸ್ ನಿಲ್ದಾಣಗಳು, ಹಾಗೂ ಇತರ ಕೆಲವೊಂದು ಕಾಲೇಜುಗಳ ಬಳಿ ಇರುವ ಬಸ್ ನಿಲ್ದಾಣಗಳನ್ನು ಸ್ವಚ್ಚಗೊಳಿಸಲಾಯಿತು. ಅಲ್ಲದೆ ಮೋದಿಯವರ ಹುಟ್ಟುಹಬ್ಬಕ್ಕೆ ಶುಭಾಶಯಕೋರುವ ಸಲುವಾಗಿ ಬ್ಯಾನರ್ ನಲ್ಲಿ ಶುಭಾಶಯಗಳನ್ನು ನಮೂದಿಸಲು ಅವಕಾಶ ನೀಡಲಾಯಿತು. ಸಾರ್ವಜನಿಕರು ಪ್ರಧಾನಿಗೆ ತಮ್ಮ ಸಂದೇಶಗಳನ್ನು ಬ್ಯಾನರಿನಲ್ಲಿ ಬರೆಯುವ ಮೂಲಕ ಶುಭಾಶಯಗಳನ್ನು ಕೋರಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಾಜಿ ಶಾಸಕ ರಘುಪತಿ ಭಟ್, ನಾಯಕರಾದ ಯಶ್ಪಾಲ್ ಸುವರ್ಣ, ಪ್ರವೀಣ್ ಕಪ್ಪೆಟ್ಟು, ಸುರೇಶ್ ನಾಯಕ್, ರವಿ ಅಮೀನ್, ಒವಿನ್ ಡಿಸೋಜಾ, ಆದರ್ಶ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.

ಇದೇ ವೇಳೆ ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಭಾನುವಾರ ಇಂದ್ರಾಳಿಯ ರೈಲ್ವೆ ನಿಲ್ದಾಣದಲ್ಲಿ ಉಚಿತ ಟೀ ವಿತರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಂಗಳೂರಿನಿಂದ ಆಗಮಿಸಿದ ರೈಲಿನ ಪ್ರಯಾಣಿಕರಿಗೆ ಉಚಿತ ಟೀಯನ್ನು ವಿತರಿಸುವುದರ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು.


Spread the love