ಸ್ವಚ್ಚತೆ ಕಾಪಾಡಿಕೊಳ್ಳುವುದು ಸರ್ವರ ಜವಾಬ್ದಾರಿ: ಡಾ.ವೈ.ಭರತ್ ಶೆಟ್ಟಿ
ಚಿತ್ರಾಪುರ : ಶುಚಿತ್ವ ಕಾಪಾಡಿಕೊಳ್ಳುವುದು ಸರ್ವರ ಜವಾಬ್ದಾರಿಯಾಗಿದ್ದು ಪ್ಲಾಸ್ಟಿಕ್ ಹಾವಳಿ ಮುಕ್ತ ಮಾಡ ಬೇಕಾದರೆ ಜನರಿಂದ ಮಾತ್ರ ಸಾಧ್ಯ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.
ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿರುವ ಸಮುದ್ರ ಕಿನಾರೆಯನ್ನು ಶುಚಿಗೊಳಿಸುವ ಕಾರ್ಯಕ್ರಮದಲ್ಲಿ ಬ್ರಿಗೇಡ್ ಕಾರ್ಯಕರ್ತರ ಜೊತೆಗೆ ಭಾಗವಹಿಸಿ ಮಾತನಾಡಿದರು.
ಪ್ಲಾಸ್ಟಿಕ್ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದು ಸಂಪೂರ್ಣ ನಿಷೇಧ ತ್ವರಿತವಾಗಿ ಅಸಾಧ್ಯ.ಆದರೆ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಚೀಲ, ಕೈ ತೊಟ್ಟೆ, ಆಹಾರ ತಿಂಡಿಗೆ ಬಳಸು ಲೋಟ ಮತ್ತಿತರ ವಸ್ತುಗಳ ಬಳಕೆ ನಿಷೇಧ್ಯ ಸಧ್ಯ. ಜನರು ಒಗ್ಗಟ್ಟಾಗಿ ತಿರಸ್ಕರಿಸುವ ಮೂಲಕ ಪ್ಲಾಸ್ಟಿಕ್ ಹಾವಳಿ ನಿಯಂತ್ರಣಕ್ಕೆ ಮುಂದಾಗ ಬೇಕು ಎಂದು ಕರೆ ನೀಡಿದರು.
ಗಣೇಶ್ ಹೊಸಬೆಟ್ಟು, ಕಾರ್ತಿಕ್ ಪೈ, ವಿಠ್ಠಲ್ ಸಾಲಿಯಾನ್, ರಮೇಶ್ ಅಳಪೆ, ಪ್ರಸಾದ್, ಸಂದೀಪ್ ಚಿತ್ರಾಪುರ, ವಸಂತ್ ಹೊಸಬೆಟ್ಟು ಮತ್ತಿತರರು ಭಾಗವಹಿಸಿದ್ದರು.