Home Mangalorean News Kannada News ಸ್ವಚ್ಛ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನದ 23ನೇ ವಾರದಲ್ಲಿ ಜರುಗಿದ 11 ಸ್ವಚ್ಛತಾ ಕಾರ್ಯಕ್ರಮಗಳ ವರದಿ

ಸ್ವಚ್ಛ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನದ 23ನೇ ವಾರದಲ್ಲಿ ಜರುಗಿದ 11 ಸ್ವಚ್ಛತಾ ಕಾರ್ಯಕ್ರಮಗಳ ವರದಿ

Spread the love

ಸ್ವಚ್ಛ ಭಾರತಕ್ಕಾಗಿಸ್ವಚ್ಚ ಮಂಗಳೂರುಅಭಿಯಾನದ23ನೇ ವಾರದಲ್ಲಿಜರುಗಿದ11 ಸ್ವಚ್ಛತಾ ಕಾರ್ಯಕ್ರಮಗಳ ವರದಿ

250) ಕೊಡಿಯಾಲ್ ಬೈಲ್:ಪ್ರೇರಣಾತಂಡದಿಂದಪಿವಿಎಸ್ ವೃತ್ತದ ಆಸುಪಾಸಿನಲ್ಲಿ ಸ್ವಚ್ಛತಾಕಾರ್ಯಜರುಗಿತು. ಸ್ವಾಮಿಜಿತಕಾಮಾನಂದಜಿ ಸಮ್ಮುಖದಲ್ಲಿ ಶ್ರೀ ಆರ್ ಕೆ ರಾವ್ ಹಾಗೂ ಶ್ರೀ ಗಿರೀಶ್‍ರಾವ್‍ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಪ್ರೇರಣಾತಂಡದ ಸಂಯೋಜಕರಾದ ಶ್ರೀ ಸದಾನಂದಉಪಾಧ್ಯಾಯ ಮಾರ್ಗದರ್ಶನದಲ್ಲಿ ಸುಮಾರುಎರಡುವರೆ ಗಂಟೆಗಳ ಕಾಲ ಶ್ರಮದಾನ ನಡೆಸಲಾಯಿತು. ಪಿವಿಎಸ್ ವೃತ್ತದಿಂದ ವಿಆರ್‍ಎಲ್‍ಕಚೇರಿವರೆಗಿನ ಮಾರ್ಗವನ್ನು ಸ್ವಚ್ಛಗೊಳಿಸಲಾಯಿತು. ಶ್ರೀ ನಿತೀನ್‍ಚಂದ್ರ, ಶ್ರೀ ಸ್ವರೂಪ ಶೆಟ್ಟಿ ಹಾಗೂ ಶ್ರೀ ಜಿ ಕೆ ಉಡುಪ ಸೇರಿದಂತೆ ಸುಮಾರು75ಜನಕಾರ್ಯಕರ್ತರು ಭಾಗವಹಿಸಿದರು.

251)ಬೋಳಾರ: ಸೋದರಿ ನಿವೇದಿತಾ ಬಳಗದಿಂದಬೋಳಾರನಲ್ಲಿ ಸ್ವಚ್ಛತಾಅಭಿಯಾನಜರುಗಿತು. ಶ್ರೀಮತಿ ಲೈಲಾ ಕಿಶೋರಿ ಹಾಗೂ ಶ್ರೀ ವಿನೋದ್‍ಅಭಿಯಾನಕ್ಕೆ ಚಾಲನೆ ನೀಡಿದರು. ಅಧ್ಯಾಪಕಿ ವಿಜಯಲಕ್ಷ್ಮೀ ಮಾರ್ಗದರ್ಶನದಲ್ಲಿನಿವೇದಿತಾ ಬಳಗದ ಸದಸ್ಯರು ಬೋಳಾರ ಪ್ರಾರ್ಥಮಿಕ ಶಾಲಾ ಆವರಣದ ಒಳಗೆ ಹಾಗೂ ಹೊರಭಾಗಗಳನ್ನು ಕಸ ಹೆಕ್ಕಿ, ಗೂಡಿಸಿ ಶುಚಿಗೊಳಿಸಿದರು. ಕು. ಕಾಂಚನಾ, ಪ್ರಜ್ವಲ್‍ಹಾಗೂ ವೈಶಾಖ್‍ಮತ್ತಿತರರುಸುಮಾರು500 ಮನೆಗಳಿಗೆ ತೆರಳಿ ಸ್ವಚ್ಛತಾಜಾಗೃತಿಕರಪತ್ರ ನೀಡಿದರು.

252)ಮುಳಿಹಿತ್ಲು: ಶ್ರೀಅಂಬಾಮಹೇಶ್ವರಿ ಭಜನಾ ಮಂದಿರದ ಸದಸ್ಯರು ಬೋಳಾರ ಫೆರಿರಸ್ತೆಯಲ್ಲಿ ಸ್ವಚ್ಛತಾಅಭಿಯಾನ ಹಮ್ಮಿಕೊಂಡರು. ಪ್ರಾಧ್ಯಾಪಕ ಶ್ರೀ ಮೋಹನ್ ಹಾಗೂ ಶ್ರೀ ವಸಂತ ಪದ್ಮನ್‍ಜಂಟಿಯಾಗಿಅಭಿಯಾನಕ್ಕೆಚಾಲನೆ ನೀಡಿದರು. ಸ್ಥಳೀಯ ಮನೆಗಳಿಂದ ತಂದು ಹಾಕಲಾಗುತ್ತಿದ್ದ ತ್ಯಾಜ್ಯರಾಶಿಯನ್ನು ತೆಗೆದು ಶುಚಿಗೊಳಿಸಲಾಯಿತು ನಂತರ ಶ್ರೀ ನಿಕೇತನ್, ಶ್ರೀ ರಮೇಶ್‍ಕೊಟ್ಟಾರಿ ನೇತೃತ್ವದಲ್ಲಿ ಬೋಳಾರ ಫೆರಿರಸ್ತೆಯಲ್ಲಿಅಲ್ಲಲ್ಲಿಗುಡ್ಡೆ ಹಾಕಲಾಗಿದ್ದ ಹಳೆಯ ಕಟ್ಟಡತ್ಯಾಜ್ಯವನ್ನು ತೆರವುಗೊಳಿಲಾಯಿತು. ಇದರಜೊತೆ ಕಳೆಗುಂದಿದ್ದ ನಾಲ್ಕು ಮಾರ್ಗಸೂಚಕ ಫಲಕಗಳನ್ನೂ ನವೀಕರಿಸಲಾಯಿತು.

253)ಆರ್ ಟಿ ಓರಸ್ತೆ: ಶ್ರೀಕೃಷ್ಣ ಭವನಆಟೋಚಾಲಕರತಂಡದಿಂದಆರ್ ಟಿ ಓರಸ್ತೆಯಲ್ಲಿ ಸ್ವಚ್ಛತಾಕಾರ್ಯಜರುಗಿತು. ಮುಖ್ಯವಾಗಿ ಮಾರ್ಗ ವಿಭಾಜಕಗಳಲ್ಲಿ ತುಂಬಿಕೊಂಡಿದ್ದ ಕಸ ಹಾಗೂ ತ್ಯಾಜ್ಯವನ್ನುತೆಗೆದು ಶುಚಿಗೊಳಿಸಲಾಯಿತು. ಜೊತೆಜೊತೆಗೆ ನೆಹರೂ ಮೈದಾನದಎದುರು ಗೋಡೆಗಳಿಗೆ ಅಂಟಿಸಿದ್ದ ಪೆÇೀಸ್ಟರ್‍ಗಳನ್ನು ತೆಗೆಯಲಾಯಿತು. ಶ್ರೀಯೋಗಿಶ್ ಕುಮಾರ್, ಶ್ರೀ ವಿಲ್ಫಿ ಕಲ್ಲಾಪು,ಶ್ರೀ ಸುಧೀರ್ ಬೋಳಾರ ಸೇರಿಸುಮಾರು40ಜನಆಟೋಚಾಲಕರು ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಭಾಗವಹಿಸಿದರು. ಶ್ರೀ ನವೀನ್ ಮಂಕಿಸ್ಟಾಂಡ್ ಹಾಗೂ ಶ್ರೀ ಗಣೇಶ್ ಬೋಳಾರ ಕಾರ್ಯಕ್ರಮವನ್ನು ಆಯೋಜಿಸಿದರು.

254)ಜ್ಯೋತಿ: ದೇಶಾಭಿಮಾನಿ ತಂಡದಿಂದ ಕೆಎಂಸಿ ಆಸ್ಪತ್ರೆ ಮುಂಭಾಗ ಹಾಗೂ ಜ್ಯೋತಿ ವೃತ್ತದ ಸುತ್ತಮುತ್ತ ಸ್ವಚ್ಛತಾಕಾರ್ಯಕ್ರಮವನ್ನುಆಯೋಜಿಸಲಾಗಿತ್ತು. ಶ್ರೀಕರ ಪ್ರಭು ಹಾಗೂ ಶ್ರೀ ಪ್ರಭಾಕರ್‍ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಮೊದಲಿಗೆ ಕೆ ಎಂ ಸಿ ಆಸ್ಪತ್ರೆಯ ಮುಂಭಾಗದಕಾಲುದಾರಿ ಹಾಗೂ ರಸ್ತೆಗಳನ್ನು ಶುಚಿಗೊಳಿಸಲಾಯಿತು. ನಂತರ ಪಕ್ಕದರಸ್ತೆಯ ಬದಿ ಹಾಗೂ ತೋಡುಗಳನ್ನು ಕಸಮುಕ್ತವನ್ನಾಗಿಸಲಾಯಿತು. ಸುಮಾರು70ಜನಕಾರ್ಯಕರ್ತರು ಸುಮಾರುಎರಡು ಗಂಟೆಗಳ ಕಾಲ ಶ್ರಮದಾನ ಮಾಡಿದರು. ಶ್ರೀನಾಗೇಶ್ ಹಾಗೂ ಅಶ್ವಿನ್ ಕಾರ್ಯಕ್ರಮವನ್ನು ಸಂಯೋಜಿಸಿದರು.

255)ಮಣ್ಣಗುಡ್ಡ: ಗಾಂಧಿ ಪಾರ್ಕ್‍ನಲ್ಲಿ ಸ್ಥಳಿಯ ನಾಗರಿಕರು ಸ್ವಚ್ಛತಾಕಾರ್ಯಕ್ರಮವನ್ನು ಆಯೋಜಿಸಿದ್ದರು. ಮನಪಾ ಸದಸ್ಯೆ ಶ್ರೀಮತಿ ಜಯಂತಿಆಚಾರ್ ಹಾಗೂ ಶ್ರೀಮತಿ ವಂದನಾ ನಾಯಕ್ ಸ್ವಚ್ಛತಾಕಾರ್ಯಕ್ಕೆ ಚಾಲನೆ ನೀಡಿದರು. ಪಾರ್ಕಿನ ಒಳಗಡೆಯಿರುವ ಕಾಲುದಾರಿಯನ್ನು ಗೂಡಿಸಿ ಸ್ವಚ್ಛಗೊಳಿಸಲಾಯಿತು ಅಲ್ಲದೇಅಲ್ಲಲ್ಲಿ ಬಿದ್ದುಕೊಂಡಿದ್ದ ಕಸ, ಪ್ಲಾಸ್ಟಿಕ್ ಹಾಗೂ ಪೇಪರ್‍ತ್ಯಾಜ್ಯವನ್ನು ಹೆಕ್ಕಿ ಆವರಣವನ್ನು ಶುಚಿಗೊಳಿಸಲಾಯಿತು. ಪ್ರಾಧ್ಯಾಪಕಿ ಶ್ರೀಮತಿ ಸ್ಮಿತಾ ಶೆಣೈ ಸೇರಿದಂತೆಅನೇಕರುಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

256)ಕೆಪಿಟಿ:ಕರ್ನಾಟಕ ಪಾಲಿಟಿಕ್ನಿಕ್ ವಿದ್ಯಾರ್ಥಿಗಳಿಂದ ರಾಷ್ಟ್ರಿಯ ಹೆದ್ದಾರಿ ಹಾಗೂ ಪಾಲಿಟೆಕ್ನಿಕ್ ಮುಂಭಾಗದಲ್ಲಿ ಸ್ವಚ್ಛತಾಕಾರ್ಯ ನಡೆಯಿತು. ಎರಡು ತಂಡಗಳಾಗಿ ಸ್ವಚ್ಛತೆಯನ್ನು ನೆರವೇರಿಸಿದರು. ಮೊದಲ ತಂಡ ಹೆದ್ದಾರಿ ಹಾಗು ಪಕ್ಕದಲ್ಲಿರುವಆವರಣಗೋಡೆಯ ಬದಿಯ ಹುಲ್ಲು ಹಾಗೂ ಕಸವನ್ನುತೆಗೆದು ಸ್ವಚ್ಛಗೊಳಿಸಿದರು. ಮೊತ್ತೊಂದುತಂಡ ಪಾಲಿಟೆಕ್ನಿಕ್ ಮುಂಭಾಗದಗೊಡೆಗೆ ಅಂಟಿಸಿದ್ದ ಭಿತ್ತಿಚಿತ್ರಗಳನ್ನುಕಿತ್ತು ಶುಚಿಗೊಳಿಸಿದರು. ನಂತರರಸ್ತೆ ಹಾಗೂ ಪುಟ್ ಪಾಥ್ ಗೂಡಿಸಿ ಸ್ವಚ್ಛಗೊಳಿಸಿದರು.

257)ಪಡೀಲ್:  ಸ್ವಚ್ಛ ಪಡೀಲ್‍ತಂಡದಿಂದಸ್ವಚ್ಛತಾಕಾರ್ಯಕ್ರಮನಡೆಯಿತು. ಶ್ರೀರತ್ನಾಕರ್ ಅಮೀನ್ ಹಾಗೂ ಶ್ರೀಹರೀಶ್ ಆಚಾರ್‍ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು.  ರೈಲ್ವೆಅಂಡರ್ ಪಾಸ್‍ನಿಂದ ಪೆರ್ಲ ವೀರನಗರ ವರೆಗೆರಸ್ತೆಯಎರಡು ಬದಿಗಳನ್ನು ಸ್ವಚ್ಛಗೊಳಿಸಲಾಯಿತು. ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನುತೆಗೆಯಲಾಯಿತು. ಸಂಯೋಜಕ ಶ್ರೀಉದಯ ಕೆ ಪಿ, ಶ್ರೀ ಪಿ ಟಿ ಕೊಟ್ಯಾನ್ ಮತ್ತಿತರರು ಶ್ರಮದಾನಗೈದರು.

258) ದೇರಳಕಟ್ಟೆ: ಕ್ಷೇಮ ವೈದ್ಯಕೀಯ ವಿದ್ಯಾರ್ಥಿಗಳಿಂದ ಸ್ವಚ್ಛತಾಅಭಿಯಾನ ದೇರಳಕಟ್ಟೆಯಲ್ಲಿ ನಡೆಯಿತು. ಡಾ. ಅನಿರ್ವಾನ್‍ಚಕ್ರವರ್ತಿ ಹಾಗೂ ಡಾ ಸಚಿನ್‍ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಸ್ಟಿಸ್ ಕೆ ಎಸ್ ಹೆಗ್ಡೆ ಮೆಡಿಕಲ್‍ಅಕಾಡಮಿಯ ಮುಂಭಾಗದರಸ್ತೆಯಿಂದ ಫಾದರ್ ಮುಲ್ಲರಕಾಲೇಜಿನ ವರೆಗೆ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಡಾ ದೀಕ್ಷಿತ್, ಡಾಅನುರಾಗ, ಡಾ ಶಶಿಕುಮಾರ ಶೆಟ್ಟಿ ಸೇರಿದಂತೆ ಅನೇಕ ಜನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಸ್ವಚ್ಛತಾಅಭಿಯಾನದಲ್ಲಿ ಭಾಗವಹಿಸಿದರು.

259)ಕಾಟಿಪಳ್ಳ:ಜೆಸಿಆಯ್ ಗಣೇಶಪುರ ಸದಸ್ಯರಿಂದ ಸ್ವಚ್ಛತಾಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಮತಿ ಪ್ರಿಯಾದೇವಾಡಿಗ ಹಾಗೂ ವಿದ್ಯಾರಾಜ್ ಶೆಟ್ಟಿಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕರ್ತರುಗಣೇಶಪುರ ವೃತ್ತದಿಂದಎಂಆರ್‍ಪಿಎಲ್‍ಕಾರ್ಗೊಗೇಟ್ ವರೆಗಿನ ಪರಿಸರವನ್ನು ಸ್ವಚ್ಛಗೊಳಿಸಿದರು. ನವೋದಯಯುವಕ ವೃಂದ, ಟೀಂಆಸರೆ, ಕೇಸರಿ ಫ್ರೇಂಡ್ಸ್, ಹಾಗೂ ಕಾಟಿಪಳ್ಳ ಪೆÇೀಸ್ಟ್‍ಆಫೀಸ್ ಸಿಬ್ಬಂದಿ ಅಭಿಯಾನದಲ್ಲಿ ಭಾಗವಹಿಸಿದರು. ಶ್ರೀ ಚೇತನ್‍ಅಮೀನ್, ರಘುರಾಮ್‍ತಂತ್ರಿ, ಪ್ರಶಾಂತ ನಾಯಕ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು. ಡಾ. ಸಂಪತ್‍ಕುಮಾರಅಭಿಯಾನವನ್ನು ಸಂಯೋಜಿಸಿದರು.

260)ಕರಂಗಲಪಾಡಿ: ಸಂತ ಅಲೊಸಿಯಸ್ ಕಾಲೇಜಿನಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಕರಂಗಲಪಾಡಿಯಲ್ಲಿ ಸ್ವಚ್ಛತಾಕಾರ್ಯಜರುಗಿತು. ಶ್ರೀ ಪ್ರಶೋಭ ಹಾಗೂ ಶ್ರೀ ಸನಲ್‍ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಪ್ರಾಧ್ಯಾಪಕಿ ಶ್ರೀಮತಿ ಪ್ರೇಮಲತಾ ಶೆಟ್ಟಿ ಮಾರ್ಗದರ್ಶನದಲ್ಲಿ ಕರಂಗಲಪಾಡಿ ಬಿಜೈರಸ್ತೆಯಲ್ಲಿಯ ಸೋನಿ ಟವರ್ಸ್‍ಎದುರಿನರಸ್ತೆಯಲ್ಲಿ ಸ್ವಚ್ಛತೆಯನು ಕೈಗೊಳ್ಳಲಾಯಿತು.ಈ ಅಭಿಯಾನಗಳಿಗೆ ಎಂಆರ್‍ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿವೆ.

250 ರಿಂದ 260ರವರೆಗಿನ ಕಾರ್ಯಕ್ರಮಗಳ ಕೆಲ ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ವರದಿಯನ್ನು ಪ್ರಕಟಿಸಿ ಈ ಮೂಲಕ ನೀವೂ ಈ ಮೂಲಕ“ಸ್ವಚ್ಚ ಮಂಗಳೂರು ಅಭಿಯಾನ”ದಲ್ಲಿ ಕೈ ಜೋಡಿಸಿ ಸಹಕರಿಸಬೇಕೆಂದು ಕೇಳಿಕೊಳ್ಳುವೆವು.


Spread the love
1 Comment
Inline Feedbacks
View all comments
Janet
7 years ago

Keep up the good work.

wpDiscuz
Exit mobile version