ಸ್ವಚ್ಛ ಭಾರತ ಯೋಜನೆಗೆ ದೃಢ ಹೆಜ್ಜೆ – ಶ್ರೀ ಕೃಷ್ಣ ಮಠದಲ್ಲಿ ಜೈವಿಕ ಸಂಸ್ಕರಣಾ ಘಟಕ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಜೈವಿಕ ಸಂಸ್ಕರಣಾ ಘಟಕವನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿದರು.ಪೇಜಾವರ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಘಟಕದ ಇಂಜಿನಿಯರ್ ಆದ ವಸಿಷ್ಠ ಮಾಯಾಂಕ್ ,ಮಠದ ದಿವಾನರಾದ ರಘುರಾಮ ಆಚಾರ್ ,ಶ್ರೀ ರವಿಶಂಕರ್ ವಿದ್ಯಾ ಮಂದಿರ್ ಟ್ರಸ್ಟ್ ನ ಆಡಳಿತಾಧಿಕಾರಿಗಳಾದ ಪ್ರಶಾಂತ್ ವಿ.ಕುಮಾರ್ ಹಾಗೂ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಮಚಂದ್ರ ಉಪಾಧ್ಯಾಯರು ಉಪಸ್ಥಿತರಿದ್ದರು.
ಸ್ವಚ್ಛ ಭಾರತ ಯೋಜನೆಗೆ ದೃಢ ಹೆಜ್ಜೆ – ಶ್ರೀ ಕೃಷ್ಣ ಮಠದಲ್ಲಿ ತಾಜ್ಯ ಸಂಸ್ಕರಣಾ ಘಟಕ ಅಳವಡಿಕೆ.ಸ್ವಚ್ಛ ಭಾರತ- ಸುಂದರ ಭಾರತ ನಿರ್ಮಾಣದ ಪ್ರಧಾನ ಮಂತ್ರಿಯವರ ಉದಾತ್ತ ಆಶಯಕ್ಕೆ ಪೂರಕವಾಗಿ ಉಡುಪಿ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಗೊಳಿಸುವ ಬಗ್ಗೆ ಜಿಲ್ಲಾಡಳಿತ ಮಹತ್ವದ ಹೆಜ್ಜೆಯಿಟ್ಟಿರುವ ಹಿನ್ನಲೆಯಲ್ಲಿ ನಾಡಿನ ಪ್ರಸಿದ್ಧ ಯಾತ್ರಾ ಕೇಂದ್ರ ಉಡುಪಿ ಶ್ರೀಕೃಷ್ಣ ಮಠದಲ್ಲಿ ಜೈವಿಕ ತಾಜ್ಯ ನಿರ್ವಹಣಾ ಘಟಕವನ್ನು ಅಳವಡಿಸುವ ಮೂಲಕ ಮಹತ್ವದ ಅಭಿಯಾನಕ್ಕೆ ಸ್ಪಂದನೆ ನೀಡಲಾಗಿದೆ. ಬೆಂಗಳೂರಿನ ಆರ್ಟಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ ಗುರೂಜಿ ನೇತೃತ್ವದ ಶ್ರೀ ಶ್ರೀ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿಸುಮಾರು ರೂಪಾಯಿ 13 ಲಕ್ಷ ವೆಚ್ಚದಲ್ಲಿ ನೀಡಲಾದ ಘಟಕವನ್ನು ಸ್ಥಾಪಿಸಲಾಗಿದೆ.
ನಿತ್ಯ ಸಾವಿರಾರು ಯಾತ್ರಿಗಳಿಗೆ ಇಲ್ಲಿ ಅನ್ನದಾನದ ವುವಸ್ಥೆ ಇರುವದರಿಂದ ದೊಡ್ಡ ಮಟ್ಟದಲ್ಲಿ ಜೈವಿಕತ್ಯಾಜ್ಯ ಉತ್ಪತ್ತಿಯಗುತ್ತದೆ. ಇವುಗಳನ್ನು ಈ ಯಂತ್ರದ ಮೂಲಕ ಸಂಸ್ಕರಿಸಿ ಕೆಲವು ದ್ರಾವಣಗಳನ್ನು ನಿಗದಿತ ಪ್ರಮಾಣದಲ್ಲಿ ಮಿಶ್ರಗೊಳಿಸಿ ಹತ್ತು ದಿನಗಳ ಕಾಲ ಇಡಲಾಗುತ್ತದೆ. ಬಳಿಕ ಅದು ಅತ್ಯುತ್ತಮ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.
ಈ ಗೊಬ್ಬರವನ್ನು ಆಸಕ್ತ ಕೃಷಿಕರಿಗೆ ಸಾಂಕೇತಿಕ ದರದಲ್ಲಿ ವಿತರಿಸುವ ಯೋಚನೆ ಇದೆ. ಈ ದರವು ಯಂತ್ರದ ನಿರ್ವಹಣೆ ವಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಮಾತ್ರ ವಿದಿಸಲಾಗುತ್ತದೆ. ಈ ಮೂಲಕ ಉಡುಪಿಯ ಕೃಷಿಕರಿಗೆ ಉತ್ತಮ ಜೈವಿಕ ಗೊಬ್ಬರ ಲಬಿಸುವ ಅವಕಾಶ ದೊರೆತಂತಾಗುತ್ತದೆ. ಈ ಯಂತ್ರದ ಅಳವಡಿಕೆ ಮೂಲಕ ಮುಂದಿನ ದಿನಗಳಲ್ಲಿ ಕೃಷ್ಣಮಠದಲ್ಲಿ ಊಟದ ಎಲೆ, ತರಕಾರಿ, ಹೂ, ಮೊದಲಾದ ಜೈವಿಕ ತ್ಯಾಜ್ಯ ನಿರ್ವಹಣೆ ಸುಸೂತ್ರವಾಗಲಿದೆ. ಈ ಮಾದರಿಯ ಘಟಕ ದಕ್ಷಿಣ ಭಾರತದಲ್ಲಿಯೇ ಪ್ರಥಮದಾಗಿದೆ. ಇದನ್ನು ಒದಗಿಸಿದ ಶ್ರೀ ಶ್ರೀ ರವಿಶಂಕರ ಗುರೂಜಿಯವರು ಇಂತಹ ಅನೇಕ ರಚನಾತ್ಮಕ ಕಾರ್ಯ ನಡೆಸುತ್ತಿರುವುದರ ಬಗ್ಗೆ ನಮಗೆ ಅಭಿಮಾನವಿದೆ