ಸ್ವಯಂ ರಕ್ಷಣೆ ಕರಾಟೆ ಕೌಶಲ್ಯ: ತರಬೇತುದಾರರ ಆಹ್ವಾನ

Spread the love

ಸ್ವಯಂ ರಕ್ಷಣೆ ಕರಾಟೆ ಕೌಶಲ್ಯ: ತರಬೇತುದಾರರ ಆಹ್ವಾನ
ಮ0ಗಳೂರು : ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 2017-18ನೇ ಸಾಲಿನಲ್ಲಿ 3 ತಿಂಗಳ ಅವಧಿಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ತರಬೇತಿ (ಕರಾಟೆ ಕೌಶಲ್ಯ) ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ತರಬೇತಿ ನೀಡಲು ಕರಾಟೆ ಬ್ಲ್ಯಾಕ್ ಬೆಲ್ಟ್ ಅರ್ಹತೆ ಹೊಂದಿರುವ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತುದಾರರಿಗೆ ಇಲಾಖೆಯು ಗೌರವಧನ ನಿಗಧಿಪಡಿಸಿದ್ದು ಸ್ಥಳೀಯ ತರಬೇತುದಾರರು ಹಾಗೂ ಮಹಿಳಾ ತರಬೇತುದಾರರಿಗೆ ಆದ್ಯತೆ ನೀಡಲಾಗುವುದು. ತರಬೇತುದಾರರು ಸದ್ವರ್ತನೆಯುಳ್ಳವರಾಗಿದ್ದು ತಮ್ಮ ಭಾವಚಿತ್ರ ಹೊಂದಿರುವ ಸರ್ಕಾರದ ಅಧಿಕೃತ ಗುರುತಿನ ಚೀಟಿಯ ಪ್ರತಿ ಹಾಗೂ ತಮಗೆ ಪರಿಚಯವುಳ್ಳ ಇಬ್ಬರು ಗಣ್ಯವ್ಯಕ್ತಿಗಳ ಸಂಪೂರ್ಣ ವಿಳಾಸವನ್ನು ಮನವಿಯೊಂದಿಗೆ ಲಗತ್ತಿಸಿ ಉಪನಿರ್ದೇಶಕರು(ಆ)ಮತ್ತು ಪದನಿಮಿತ್ತ, ಜಿಲ್ಲಾಯೋಜನಾ ಸಮನ್ವಯಾಧಿಕಾರಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ದ.ಕ ಮಂಗಳೂರು ಇವರಿಗೆ ಜೂನ್ 20 ರಒಳಗೆ ಸಲ್ಲಿಸಬೇಕು. . ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಜಿಲ್ಲಾ ಕಛೇರಿ, ದ.ಕ. ಜಿಲ್ಲಾ ಪಂಚಾಯತ್ ಕಟ್ಟಡ, ಕೊಟ್ಟಾರ ಮಂಗಳೂರು-575006 (ದೂರವಾಣಿ: 0824-2450664) ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.


Spread the love