Home Mangalorean News Kannada News ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶ್ವಕರ್ಮ ಯುವ ಮಿಲನ್ ವತಿಯಿಂದ ಸನ್ಮಾನ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶ್ವಕರ್ಮ ಯುವ ಮಿಲನ್ ವತಿಯಿಂದ ಸನ್ಮಾನ

Spread the love

 ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶ್ವಕರ್ಮ ಯುವ ಮಿಲನ್ ವತಿಯಿಂದ ಸನ್ಮಾನ

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ , ವಿಶ್ವಕರ್ಮ ಯುವ ಮಿಲನ್ (ರಿ.) ಕರ್ನಾಟಕ ರಾಜ್ಯ ಮಂಗಳೂರು ತಾಲೂಕು ಸಂಘದ ವತಿಯಿಂದ  ಆರಕ್ಷಕ ಅಧಿಕಾರಿಗಳಿಗೆ, ನಿವೃತ್ತಿಗೊಂಡ ಸೈನಿಕರಿಗೆ, ಸಂಚಾರಿ ಅಧಿಕಾರಿಗಳಿಗೆ ಹಾಗು ಸ್ವಾತಂತ್ರ್ಯ ಸಂದರ್ಭದಲ್ಲಿ ಹೋರಾಟ ಮಾಡಿದ ವಿಶ್ವಕರ್ಮ ಸಮಾಜದ ಹಿರಿಯ ವ್ಯಕ್ತಿಗೆ ಗೌರವದಿಂದ ಸನ್ಮಾನಿಸಲಾಯಿತು.

ಸ್ವಾತಂತ್ರ್ಯ ಸಂದರ್ಭ  ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವಿಶ್ವಕರ್ಮ ಸಮಾಜದ ಹಿರಿಯ ಗಣ್ಯರಾದ ಶ್ಯಾಮರಾಯ ಆಚಾರ್ಯರಿಗೆ  ಆರಕ್ಷಕ ಠಾಣೆಯ ನಿಷ್ಠಾವಂತ ಅಧಿಕಾರಿಯಾದ   ಸುಂದರ್ ಆಚಾರ್ಯ, ಸಂಚಾರಿ ಅಧಿಕಾರಿಯಾದ ಶ್ರೀಮತಿ ಚಂಪಾ, ನಿವೃತ್ತ ಯೋಧರಾದ ಕ್ಯಾಪ್ಟನ್ ದೀಪಕ್ ಅದ್ಯಂತಾಯ, ಹ್ಯಾವ್ ಜೋಸೆಫ್ ವಿ.ಜೆ ಹಾಗು ಜೋಲುರ್ ಗ್ರೆಗೊರಿ ಅಲ್ಮೇಡಾ, ಸಂಘದ ವತಿಯಿಂದ ಬಿ.ಸಿ.ರೋಡ್ ಬಳಿ ಸನ್ಮಾನಿಸಲಾಯಿತು.

ವಿಶ್ವಕರ್ಮ ಯುವ ಮಿಲನ್(ರಿ.) ಕರ್ನಾಟಕ ರಾಜ್ಯ ಸಂಘದ ರಾಜ್ಯಾಧ್ಯಕ್ಷರಾದ ವಿಕ್ರಂ ಐ. ಆಚಾರ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸೂರಜ್ ಟಿ. ಆಚಾರ್ಯ, ಮಂಗಳೂರು ತಾಲೂಕಿನ ಅಧ್ಯಕ್ಷರಾದ ಅರುಣ್ ಆಚಾರ್ಯ, ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾದ ಸುಶಾನ್ ಪೆರಿಂಜೆ ಹಾಗು ಸಂಘದ ಎಲ್ಲಾ ಪದಾಧಿಕಾರಿಗಳು ಹಾಗು ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love

Exit mobile version