Home Mangalorean News Kannada News ಸ್ವಾಮಿ ಕೊರಗಜ್ಜ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ; ಕ್ಷಮೆ ಕೇಳಿದ ಆರೋಪಿ

ಸ್ವಾಮಿ ಕೊರಗಜ್ಜ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ; ಕ್ಷಮೆ ಕೇಳಿದ ಆರೋಪಿ

Spread the love

ಸ್ವಾಮಿ ಕೊರಗಜ್ಜ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ; ಕ್ಷಮೆ ಕೇಳಿದ ಆರೋಪಿ

ಮಂಗಳೂರು: ಕೊರಗಜ್ಜ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಬರೆದ ಮನೋಜ್ ಪಂಡೀತ್ ಕ್ಷಮೆಯಾಚಿಸಿದ್ದಾನೆ.

ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಶಿರಸಿಯ 45 ವರ್ಷ ವಯಸ್ಸಿನ ಮನೋಜ್ ಪಂಡಿತ್ ಎಂಬಾತ ಕೊರಗಜ್ಜ ಕುರಿತು ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಬರೆದಿದ್ದ. ಈ ಕುರಿತು ಹಿಂದು ಸಂರಕ್ಷಣಾ ಸಮಿತಿಯ ಕೆ ಆರ್ ಶೆಟ್ಟಿ ಎಂಬವರು ಡಿಸಿಪಿ ಹನುಮಂತರಾಯ ಅವರಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿದ ಬಳಿ ಸೈಬರ್ ಕ್ರೈಮ್ ತಂಡ ರಚಿಸಿ ಆರೋಪಿಯನ್ನು ಬಂಧಿಸಲು ಪ್ರಯತ್ನಿಸಿತು. ಅದರಂತೆ ಮೂರು ವಾರಗಳ ಬಳಿಕ ಶಿರಸಿಗೆ ತೆರಳಿದ ತಂಡ ಆರೋಪಿಯನ್ನು ಬಂಧಿಸಿ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡಿದರು. ಈ ವೇಳೆ ಮನೋಜ್ ಕ್ಷಮೆ ಯಾಚಿಸಿದ್ದು ಆತನಿಗೆ ಕೊರಗಜ್ಜ ಸ್ವಾಮಿಯ ಕುರಿತಾದ ಮಾಹಿತಿ ಇಲ್ಲದೆ ಇಂತಹ ಪೋಸ್ಟ್ ಹಾಕಿರುವುದಾಗಿ ಒಪ್ಪಿಕೊಂಡಿದ್ದ. ಆದರೆ ಸಮಿತಿಯ ಸದಸ್ಯರು ದೂರನ್ನು ವಾಪಾಸು ಪಡೆಯಲು ಸಿದ್ದರಿರಲಿಲ್ಲ. ಮನೋಜ್ ಬಳಿಕ ಜಾಮೀನಿನ ಮೇಲೆ ಬಿಡುಗೊಂಡಿದ್ದು ಬಳಿಕ ಆತನ ಮನೆಯವರು ಆರೋಗ್ಯ ಸಮಸ್ಯೆಯನ್ನು ಎದುರಿಸಿದರು.

ತಾನು ಮಂಗಳೂರಿಗೆ ಬರಲು ತಯಾರಿದ್ದು ಕ್ಷಮೆ ಕೇಳುವುದಾಗಿ ಹೇಳಿದ್ದ. ಅದರಂತೆ ನವೆಂಬರ್ 5 ರಂದು ಮನೋಜ್ ಪದವಿನಂಗಡಿಗೆ ಬಂದು ಸಮಿತಿಯ ಅಧ್ಯಕ್ಷ ಕೆ ಆರ್ ಶೆಟ್ಟಿ ಭೇಟಿಯಾಗಿ ಕ್ಷಮೆ ಯಾಚಿಸಿದ್ದು ತನಗೆ ತಿಳಿಯದೆ ಇಂತಹ ಕೆಲಸ ಮಾಡಿದ್ದಾಗಿ ಹೇಳಿದ್ದನು. ಅದರಂತೆ ಸಮಿತಿಯ ಸದಸ್ಯರು ಆತನನ್ನು ಕ್ಷಮಿಸಲು ನಿರ್ಧರಿಸಿ ಆತನ ವಿರುದ್ದ ನೀಡಿದ ಪ್ರಕರಣವನ್ನು ವಾಪಾಸು ಪಡೆಯಲು ನಿರ್ಧರಿಸಲಾಯಿತು.


Spread the love

Exit mobile version