Home Mangalorean News Kannada News ಸ್ವಾಮಿ ವಿವೇಕಾನಂದ 154 ನೇ ಜನ್ಮ ದಿನಾಚರಣೆ ಹಾಗೂ ಬೃಹತ್ ಜಾಥಾ

ಸ್ವಾಮಿ ವಿವೇಕಾನಂದ 154 ನೇ ಜನ್ಮ ದಿನಾಚರಣೆ ಹಾಗೂ ಬೃಹತ್ ಜಾಥಾ

Spread the love

ಸ್ವಾಮಿ ವಿವೇಕಾನಂದ 154 ನೇ ಜನ್ಮ ದಿನಾಚರಣೆ ಹಾಗೂ ಬೃಹತ್ ಜಾಥಾ

ಮಂಗಳೂರು: ಸ್ವಾಮಿ ವಿವೇಕನಂದರವರ 154 ನೇ ಜನ್ಮ ದಿನಾಚರಣೆ ಹಾಗೂ ರಾಷ್ಟೀಯ ಯುವ ಸಪ್ತಾಹ ಸಮಾರಂಭದ ಪ್ರಯುಕ್ತ ಜಿಲ್ಲಾಡಳಿತ ದಕ್ಷಿಣ ಕನ್ನಡ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ, ಮಂಗಳೂರು ವಿಶ್ವವಿದ್ಯಾನಿಲಯ ಯುವ ರೆಡ್‍ಕ್ರಾಸ್ ಘಟಕ ಮತ್ತು ದ.ಕ. ಜಿಲ್ಲಾ ಕಾಲೇಜು ಶಿಕ್ಷಣ ಇಲಾಖೆ ಇದರ ಆಶ್ರಯದಲ್ಲಿ ಬೃಹತ್ ಜಾಥಾ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕರ್ನಾಟಕ ರಾಜ್ಯ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಚೆಯರ್‍ಮೆನ್ ಬಸ್ರೂರು ರಾಜೀವ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾ. ಎಂ. ಆರ್. ರವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದ.ಕ. ಜಿಲ್ಲಾ ಪಂಚಾಯತ್, ಕುಮಾರ್, ಅಪರ ಜಿಲ್ಲಾಧಿಕಾರಿಗಳು, ಸಿ.ಎ. ಶಾಂತರಾಮ್ ಶೆಟ್ಟಿ, ದ.ಕ. ಜಿಲ್ಲಾ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಚೆಯರ್‍ಮೆನ್, ಕಾರ್ಯದರ್ಶಿಯಾದ, ಡಾ. ರಾಜೇಶ್, ಸಂಸ್ಥೆಯ ಪದಾಧಿಕಾರಿಗಳಾದ ಶ್ರೀ ವಸಂತ್ ಶೆಣೈ, ಸುಶೀಲ್ ಜತ್ತನ್ನ, ಶ್ರೀ ಪ್ರಭಾಕರ್ ಶ್ರೇಯಾನ್, ನಿತ್ಯಾನಂದ ಶೆಟ್ಟಿ, ವೇಣು ಶರ್ಮ, ರವೀಂದ್ರ, ದಿನೇಶ್ ರಾವ್, ದಯಾನಂದ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‍ಕ್ರಾಸ್ ಘಟಕದ ನೋಡಲ್ ಅಧಿಕಾರಿ, ವಿನೀತ ರೈ, ರಾಜಶೇಖರ್ ಹೆಬ್ಭಾರ್, ಸರಕಾರಿ ಪ್ರ್ತಥಮ ದರ್ಜೆ ಪದವಿ ಕಾಲೇಜು ರಥಬೀದಿ ಮಂಗಳೂರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಯನ್ನು ಮಾಡಲಾಯಿತು. ವಿಪತ್ತು ನಿರ್ವಾಹಣಾ ಸಮಿತಿಯಿಂದ ಸ್ವಯಂಸೇವಕರ ನೋಂದಣಿ ಮತ್ತು ವಸ್ತುಪ್ರದರ್ಶನ ಹಾಗೂ ರೆಡ್‍ಕ್ರಾಸ್ ರಕ್ತ ನಿಧಿ ವತಿಯಿಂದ ರಕ್ತದಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಸಿ.ಎ. ಶಾಂತರಾಮ್ ಶೆಟ್ಟಿ, ದ.ಕ. ಜಿಲ್ಲಾ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಚೆಯರ್‍ಮೆನ್ ಅಥಿತಿಗಳನ್ನು ಸ್ವಾಗತಿಸಿದರು, , ಸಚೇತ್ ಸುವರ್ಣ, ದ.ಕ. ಜಿಲ್ಲಾ ಯುವ ರೆಡ್‍ಕ್ರಾಸ್‍ನ ಚೆಯರ್‍ಮೆನ್, ವಂದನಾರ್ಪನೆ ನೆರವೇರಿಸಿದರು. ರೋಶನಿ ನಿಲದ ವಿದ್ಯಾರ್ಥಿನಿಗಳಾದ ಕುಮಾರಿ ನೇಹ ಹನೀಫ್ ಮತ್ತು ಕುಮಾರಿ ಡಯಾನ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು.


Spread the love

Exit mobile version