ಹಜ್ಜಾಜಿಗಳ ಸೇವೆಯಲ್ಲಿ ನಿರತರಾದ ಕೆಸಿಎಫ್ ಸ್ವಯಂ ಸೇವಕರು
ಸೌದಿ ಅರೇಬಿಯಾ : ವಿವಿಧ ರಾಷ್ಟ್ರಗಳಿಂದ ಆಗಮಿಸಿದ ಹಜ್ಜ್ ಯಾತ್ರಾರ್ಥಿಗಳಿಗೆ ಸೇವೆ ಮಾಡಲು ಕರ್ನಾಟಕ ಕಲ್ಚರಲ್ ಫೌಂಡೇಶನ್ ಹಜ್ಜ್ ಸ್ವಯಂ ಸೇವಕರು ಪವಿತ್ರ ಮಿನಾದಲ್ಲಿ ಕಾರ್ಯರಂಗಕ್ಕಿಳಿದಿದ್ದಾರೆ.
ಅರಫಾದಿನದಿಂದೇ ಪವಿತ್ರ ಮಕ್ಕಾಗೆ ತಲುಪಿದ ಕೆ.ಸಿ ಎಫ್ ಸ್ವಯಃ ಸೇವಕರು ಎರಡು ಶಿಫ್ಟ್ ಗಳಾಗಿ ದಿನದ 24 ಗಂಟೆಗಳಲ್ಲೂ ಸೇವೆಗೆ ಸದಾ ಕಾರ್ಯನಿರತರಾಗಿ ಕಾರ್ಯನಿರತರಾಗಿದ್ದಾರೆ. ಹಜ್ಜ್ ಗಾಗಿ ಆಗಮಿಸಿದ ಹಾಜಿಗಳಿಗೆ ತಮ್ಮ ಡೇರೆಗಳನ್ನು ತೋರಿಸುವಲ್ಲಿ, ಹಾಜಿಗಳನ್ನು ಜಂರಾತ್ ಗೆ (ಶೈತಾನನಿಗೆ ಕಲ್ಲು ಬಿಸಾಡುವ ಸ್ಥಳ) ಕರೆದುಕೊಂಡು ಹೋಗಿ ಕಲ್ಲು ಬಿಸಾಡಲು, ನೆರವಾದರು. ವಯಸ್ಕರು ಮತ್ತು ಮಹಿಳೆಯರಿಗೆ ಅವಶ್ಯಕವಾದ ನೆರವು ನೀಡಿ ಅವರನ್ನು ಸುರಕ್ಷಿತವಾಗಿ ಗಾಲಿ ಕುರ್ಚಿಗಳ ಮೂಲಕ ತಮ್ಮ ಡೇರೆಗಳಿಗೆ ತಲುಪಿಸಲು ಕೆಸಿಎಫ್ ಕಾರ್ಯಕರ್ತರು ನೆರವಾದರು.
ಲಕ್ಷಾಂತರ ಜನರ ನಡುವೆ ಡೇರೆಗಳು ಹೋಗುವ ದಾರಿ ತಪ್ಪುವುದು ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ, ವಿಶೇಷವಾಗಿ ಭಾರತದ ಹಾಜಿಗಳಿಗೆ ಕೆ.ಸಿಎಫ್ ಸೇವಕರ ಸಹಾಯ ತುಂಬಾ ಪ್ರಯೋಜನ ನೀಡಿದೆ. ಅನಾರೋಗ್ಯ ಪೀಡಿತ ಹಾಜಿಗಳನ್ನು ಆಸ್ಪತ್ರೆಗೆ ತಲುಪಿಸಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ಮತ್ತು ಅವಶ್ಯಕವಾದ ಔಷಧಿಗಳನ್ನು ಪಡೆಯಲು ಸಹಕರಿಸಿದರು. ನಡೆಯಲಾಗದ ಹಜ್ಜಾಜಿಗಳನ್ನು ಗಾಲಿಕುರ್ಚಿಯಲ್ಲಿಯೇ ಜಂರಾತ್ ತಲುಪಿಸಿ ಪುನಃ ಅವರ ಕೊಠಡಿ ಗಳಿಗೆ ತಲುಪಿಸಿದ್ದು, ಲಕ್ಷಾಂತರ ಹಾಜಿಗಳ ನಡುವೆ ಕುಟುಂಬದ ಸದಸ್ಯರಿಂದ ಬೇರ್ಪಟ್ಟ ಹಾಜಿಗಳನ್ನು ತಮ್ಮ ಕೊಠಡಿಗೆ ತಲುಪಿಸಲು ಹರಸಾಹಸಪಟ್ಟರು.
ಕೆ.ಸಿಎಫ್ ಕಾರ್ಯಕರ್ತರ ಸೇವೆಯನ್ನು ವಿವಿಧ ರಾಷ್ಟ್ರಗಳ ಹಜ್ಜಾಜಿಗಳು , ಸೌದಿ ಹೆಲ್ತ್ ಮಿನಿಸ್ಟ್ರಿ ಸಿಬ್ಬಂದಿಗಳು ,ಸೌದಿ ಪ್ರಜೆಗಳು, ಸೇರಿದಂತೆ ಸೌದಿ ಪೋಲೀಸ್ ಇಲಾಖೆಯೂ ಕೂಡ ಪ್ರಶಂಸಿದೆ ಎಂದು ಕೆಸಿಎಫ್ ಹಜ್ಜ್ ವಾಲೇಂಟಿಯರ್ ಕೋರ್ ಚೇರ್ಮೇನ್ ಹನೀಫ್ ಮಂಜನಾಡಿ ಮತ್ತು ಕೆ.ಸಿ ಎಫ್ ಸೌದಿ ರಾಷ್ತ್ರೀಯ ಕಮಿಟಿ ಅದ್ಯಕ್ಷ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.