ಹಜ್ಜ್ ಕರ್ಮ ನಿರ್ವಹಿಸಲು ಮದೀನಾ ತಲುಪಿದ, ಭಾರತದ ಮೊದಲ ಹಾಜಿಗಳ ತಂಡ
ಸೌದಿ ಅರೇಬಿಯಾ, ಮದೀನಾ ಮುನವ್ವರ: ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಭಾರತದಿಂದ ಆಗಮಿಸಿದ ಮೊದಲ ವಿಮಾನವು ಮದೀನಾ ಮುನವ್ವರದ ಕಿಂಗ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ ತಲುಪಿದ್ದು ಕೆಸಿಎಫ್ ಮದೀನಾ ಕಾರ್ಯಕರ್ತರು ಹಾಜಿಗಳನ್ನು , ಖರ್ಜೂರ, ನೀರು ನೀಡಿ ಸ್ವಾಗತಿಸಿದರು.
ಭಾರತದಿಂದ ಆಗಮಿಸಿದ ಮೊದಲ ವಿಮಾನದಲ್ಲಿ ಒಟ್ಟು420 ಹಾಜಿಗಳು ಗೋವಾ ಸೇರಿದಂತೆ ಕುಮಟಾ, ಭಟ್ಕಳ, ದಾವಣಗೆರೆ, ಹೊನ್ನಾವರ, ಬೆಳಗಾಂನಿಂದ ಆಗಮಿಸಿದ್ದಾರೆ. ಈ ವೇಳೆ ಹಜ್ಜ್ ನಿರ್ವಹಿಸಲು ಭಟ್ಕಳದಿಂದ ಆಗಮಿಸಿದ್ದ ಇಸ್ಮಾಯಿಲ್ ಸಿದ್ದೀಕ್ ಭಟ್ಕಳ್ ಮಾತನಾಡಿ, ಇಸ್ಲಾಮ್ ಪಂಚ ಸ್ತಂಭಗಳಲ್ಲೊಂದಾದ ಹಜ್ಜ್ ನಿರ್ವಹಿಸಲು ಮದೀನಾ ತಲುಪಿದ್ದು, ನಮಗೆ ತುಂಬಾ ಸಂತೋಷವಾಗಿದೆ. ಭಾರತೀಯರಾದ ನಾವೆಲ್ಲರೂ ಒಂದಾಗಬೇಕು, ಹಿಂದು ಮುಸ್ಲಿಮ್ ಕ್ರೈಸ್ತ ರೆಲ್ಲರೂ ಸೇರಿ ಭಾರತವನ್ನು ಅಭಿವೃದ್ಧಿ ಪತದತ್ತ ಸಾಗಿಸಬೇಕು ಎಂದರು.
ದೇಶವನ್ನು ಪ್ರೀತಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದು ಪ್ರವಾದಿ ಮುಹಮ್ಮದ್(ಸ.ಅ) ಅವರ ಸಂದೇಶವಾಗಿದೆ ಎಂದ ಅವರು, ಭಾರತದಲ್ಲಿ ಕೋಮು ಸಾಮರಸ್ಯವುಂಟಾಗಲು ಮಕ್ಕಾ ಮದೀನಾದಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇವೆ ಎಂದರು.
ಈ ವೇಳೆ ಕೆಸಿಎಫ್ ಮದೀನಾ ಝೋನಲ್ ಹೆಚ್.ವಿ.ಸಿ ಚೇರ್ಮನ್ ತಾಜುದ್ದೀನ್ ಸುಳ್ಯ, ಕೆಸಿಎಫ್ ಮದೀನಾ ಝೋನಲ್ ಹೆಚ್.ವಿ.ಸಿ ಕನ್ವೀನರ್ ರಝಾಕ್ ಸಂತೋಷ್ ನಗರ, ಜಬ್ಬಾರ್ ಕಾವಳಕಟ್ಟೆ, ಮತ್ತಿತರ ಕೆಸಿಎಫ್ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಹಕೀಂ ಬೋಳಾರ್