ಹಣ ಪಣಕ್ಕಿಟ್ಟು ಕೋಳಿ ಅಂಕ ನಡೆಸುತ್ತಿದ್ದ 10 ಮಂದಿ ಆರೋಪಿಗಳ ಬಂಧನ
ಮಂಗಳೂರು: ಹಣ ಪಣಕ್ಕಿಟ್ಟು ಕೋಳಿ ಅಂಕ ನಡೆಸುತ್ತಿದ್ದ 10 ಮಂದಿ ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 7 ರಂದು ಧನಂಜಯ ಎ, ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ವಿಟ್ಲ ಪೊಲೀಸ್ ಠಾಣೆ ಸಿಬ್ಬಂಧಿಗಳೊಂದಿಗೆ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಹೇಮಾಜೆಯ ಮಿನಾವು ಎಂಬ ಸರಕಾರಿ ಗುಡ್ಡ ಜಾಗದಲ್ಲಿ ಸಮಯ ಸುಮಾರು 4.00 ಗಂಟೆಗೆ ಅಕ್ರಮವಾಗಿ ಕೋಳಿ ಕಾಲುಗಳಿಗೆ ಬಾಳುಕತ್ತಿಯನ್ನು ಕಟ್ಟಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜುಗಾರಿ ಆಟ ಆಡುತ್ತಿವವರನ್ನು ಸುತ್ತುವರಿದು ದಾಳಿ ನಡೆಸಿದಾಗ ಓಡಿ ಹೋಗಿದ್ದು, ಬೆನ್ನಟ್ಟಿ ಆ ಪೈಕಿ 1.ರವೀಂದ್ರ (40) .2) ನಾರಾಯಣ (30) .3) ಕೇಶವ (36) .4) ಈಶ್ವರ (49) .5) ನಾರಾಯಣ (52) .6) ಬಾಬು (52) .7) ಗಣೇಶ್ (45) .8) ರವೀಂದ್ರ ಯಾನೆ ಬೇಬಿ (33) .9) ರಾಜೇಶ್ (30) .10) ಆಶಿಸ್ ಮನ್ಸೂರ್ (29) ಒಟ್ಟು 10 ಜನರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರ ವಶದಲ್ಲಿದ್ದ ರೂ 3300/- ಸ್ವಾಧೀನಪಡಿಸಿಕೊಂಡ ಸ್ಥಳದಲ್ಲಿದ್ದ 6 ಹುಂಜ ಕೋಳಿಗಳು ಹಾಗೂ ಬಾಳು ಕತ್ತಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.