ಹಣ ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ಐವರ ಬಂಧನ
ಮಂಗಳೂರು: ನಗರದ ಅತ್ತಾವರ ಮಣಿಪಾಲ್ ಸ್ಕೂಲ್ ಎದುರುಗಡೆ ಇರುವ PEECI COURT ಅಪಾರ್ಟಮೆಂಟ್ ಕಟ್ಟಡದ ನೆಲ ಅಂತಸ್ತಿನ ಪಾರ್ಕಿಂಗ್ ಸ್ಥಳದಲ್ಲಿರುವ ಕೊಠಡಿಯಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್ ಎಲೆಗಳ ಮೇಲೆ ಉಲಾಯಿ-ಪಿದಾಯಿ ಎಂಬ ಜುಗಾರಿ ಆಟವನ್ನು ಆಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರು ತೊಕ್ಕೊಟ್ಟು ಒಳಪೇಟೆ ನಿವಾಸಿ ಮನೋಜ್ (34), ಸುರತ್ಕಲ್ ಪಿ ಎಸ್ ಕಂಪೌಂಡ್ ನಿವಾಸಿ ಮಹಮ್ಮದ್ ಅನ್ವರ್ (26), ತೊಕ್ಕೊಟ್ಟು ನಿವಾಸಿ ರೆನ್ನಿ ಆರ್ (25), ರಕ್ಷಿತ್ (28), ಕೊಣಾಜೆ ನಿವಾಸಿ ಲ್ಯಾನ್ಸಿ ಕರ್ನೆಲಿಯೋ (45) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಜುಗಾರಿ ಆಟಕ್ಕೆ ಬಳಿಸಿದ ನಗದು ಒಟ್ಟು ರೂ. 80,700/- ನಗದು ಹಣ ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಪೊಲೀಸ್ ಆಯುಕ್ತರಾದ ಟಿ.ಆರ್ ಸುರೇಶ್ IPS, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ IPS, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಉಮಾ ಪ್ರಶಾಂತ್ ಹಾಗೂ ಮಂಗಳೂರು ಸೆಂಟ್ರಲ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಭಾಸ್ಕರ್ ವಿ.ಬಿ ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕರಾದ ಮಹಮ್ಮದ್ ಶರೀಫ್.ಕೆ ರವರ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ರಾಜೇಂದ್ರ.ಬಿ ರವರು ಆರೋಪಿಗಳನ್ನು ಬಂಧಿಸಿರುತ್ತಾರೆ. ದಾಳಿ ಹಾಗೂ ಆರೋಪಿಗಳ ದಸ್ತಗಿರಿ ಸಮಯ ಸಿಬ್ಬಂಧಿಗಳು ಸಹಕರಿಸಿರುತ್ತಾರೆ.