Home Mangalorean News Kannada News ಹತ್ತು ಸಾವಿರ ಸಸಿ ನೆಡುವ ಯೋಜನೆ – ಗ್ರೀನ್ ಮಂಗಳೂರು ಸಮಾಲೋಚನಾ ಸಭೆಯಲ್ಲಿ ಶಾಸಕ ಕಾಮತ್

ಹತ್ತು ಸಾವಿರ ಸಸಿ ನೆಡುವ ಯೋಜನೆ – ಗ್ರೀನ್ ಮಂಗಳೂರು ಸಮಾಲೋಚನಾ ಸಭೆಯಲ್ಲಿ ಶಾಸಕ ಕಾಮತ್

Spread the love

ಹತ್ತು ಸಾವಿರ ಸಸಿ ನೆಡುವ ಯೋಜನೆ – ಗ್ರೀನ್ ಮಂಗಳೂರು ಸಮಾಲೋಚನಾ ಸಭೆಯಲ್ಲಿ ಶಾಸಕ ಕಾಮತ್

ಮಂಗಳೂರು: ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ನೇತೃತ್ವದಲ್ಲಿ ಆರಂಭವಾಗಿರುವ ಗ್ರೀನ್ ಮಂಗಳೂರು ಕಾರ್ಯಕ್ರಮದ ಸಮಾಲೋಚನಾ ಸಭೆ ನಡೆಯಿತು.

ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲಿನ ಸುಧೀಂದ್ರ ಹಾಲ್ ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕಾಮತ್ ಅವರು ಕನಿಷ್ಟ ಹತ್ತು ಸಾವಿರ ಸಸಿಗಳನ್ನು ಮಂಗಳೂರು ನಗರ ದಕ್ಷಿಣದಲ್ಲಿ ನೆಡುವ ಗುರಿ ಇದೆ. ಅದಕ್ಕಾಗಿ ಅರಣ್ಯ ಇಲಾಖೆ ಸಸಿಗಳನ್ನು ಪೂರೈಸಲಿದೆ. ವಿವಿಧ ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಸೇವಾ ವಿಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಾಮಾಜಿಕ ಕಾರ್ಯಕರ್ತರು, ಪಕ್ಷಭೇದ ಮರೆತು ಎಲ್ಲಾ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸಸಿಗಳನ್ನು ವಿತರಿಸಲಾಗುವುದು. ಜೂನ್ 29 ರಂದು ಸಂಘನಿಕೇತನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಸಿಗಳನ್ನು ವಿತರಿಸಲಾಗುವುದು. ಈಗಾಗಲೇ ಮೂರು ಸಾವಿರ ಸಸಿಗಳನ್ನು ವಿತರಿಸುವ ಮೊದಲ ಹಂತದ ಯೋಜನೆಯ ಸಮಾಲೋಚನಾ ಸಭೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಜನರ ಸಹಕಾರ ನಿರೀಕ್ಷಿಸುತ್ತಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿ ಶ್ರೀಧರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಹರ್ಷವಧನ್ ಹಾಗೂ ಬಿಜೆಪಿ ಪಕ್ಷದ ವಾರ್ಡ್ ಪ್ರಮುಖರು, ಕಾರ್ಯಕರ್ತರು, ನೂರಾರು ನಾಗರಿಕ ಬಂಧುಗಳು ಉಪಸ್ಥಿತರಿದ್ದರು.


Spread the love

Exit mobile version