Home Mangalorean News Kannada News ಹದಿ ಹರೆಯದ ಯುವಕರಲ್ಲಿ ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿ – ಡಾ.ಪಿ.ವಿ ಭಂಡಾರಿ  

ಹದಿ ಹರೆಯದ ಯುವಕರಲ್ಲಿ ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿ – ಡಾ.ಪಿ.ವಿ ಭಂಡಾರಿ  

Spread the love

ಹದಿ ಹರೆಯದ ಯುವಕರಲ್ಲಿ ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿ – ಡಾ.ಪಿ.ವಿ ಭಂಡಾರಿ  

ಉಡುಪಿ: ಪಡುತೋನ್ಸೆ ನಾಗರಿಕರ ಒಕ್ಕೂಟ ಹೂಡೆ ಆಯೋಜಿಸಿರುವ ಮಾದಕ ದ್ರವ್ಯ ವ್ಯಸನ ಅಭಿಯಾನದ ಪ್ರಯುಕ್ತ ಸೋಮವಾರ ಹೂಡೆಯ ಉರ್ದು ಶಾಲಾ ಮೈದಾನದಲ್ಲಿ ನಡೆದ ಜನ ಜಾಗೃತಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ.ಪಿ.ವಿ ಭಂಡಾರಿಯವರು, ಮದ್ಯಪಾನ, ಧೂಮಪಾನದ ಬಗ್ಗೆ ಸಮಾಜದಲ್ಲಿ ಬಹಳಷ್ಟು ತಪ್ಪು ಕಲ್ಪನೆ ಗಳಿವೆ. ಇದರಿಂದ ಮನುಷ್ಯನಿಗೆ ಲಾಭವಾಗುತ್ತದೆಂಬ ಭ್ರಮೆ ಆವರಿಸಿದೆ. ವಾಸ್ತವವಾಗಿ ಇದೊಂದು ಮಾರಕವಾದ ಪಿಡುಗು ಎಂದರು.ಇದರಿಂದಾಗಿ ದೈಹಿಕ, ಮಾನಸಿಕ ನ್ಯೂನತೆಗೊಳಗಾಗಿ ಈ ಪಿಡುಗುಗಳಿಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದರು. ಹಲವಾರು ಯುವಕರು ಇಂತಹ ಪಿಡುಗುಗಳಿಗೆ ಬಲಿಯಾಗುತ್ತಿದ್ದು ಆ ನಿಟ್ಟಿನಲ್ಲಿ ಪಡುತೋನ್ಸೆ ನಾಗರಿಕರ ಒಕ್ಕೂಟ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು ಶ್ಲಾಘನೀಯವೆಂದರು.

ಮಾದಕ ವ್ಯಸನ ಎಂಬುವುದು ಒಂದು ರೋಗ.ಇದನ್ನು ಬಯ್ಯುದರಿಂದ, ವ್ಯಸನಿಗಳಿಗೆ ಹೊಡೆಯುದರಿಂದ ಹೋಗಲಾಡಿಸಲು ಸಾಧ್ಯವಿಲ್ಲ. ಬದಲಾಗಿ ಅವರೊಂದಿಗೆ ಪ್ರೀತಿಪೂರ್ವಕವಾಗಿ ವರ್ತಿಸಿ ವೈದ್ಯಕೀಯ ಪರಿಹಾರಗಳನ್ನು ಕಂಡು ಕೊಳ್ಳಬೇಕೆಂದು ಮಾರ್ಗದರ್ಶನ ಮಾಡಿದರು.

ಸಮಾಜದಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ವ್ಯಾಪಕವಾಗಬೇಕು.ಅದರೊಂದಿಗೆ ಹದಿ ಹರೆಯದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಗಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಮುಖ್ಯವಾಗಿ ಹದಿ ಹರೆಯದ ಮಕ್ಕಳ ಬಗ್ಗೆ ಪೋಷಕರು ವಿಶೇಷ ಗಮನವಿಟ್ಟು ಇಂತಹ ವ್ಯಸನಗಳಿಗೆ ಬಲಿಯಾಗದಂತೆ ಕಾಳಜಿ ವಹಿಸಬೇಕೆಂದು ಸೇರಿದ್ದ ಜನಸ್ತೋಮಕ್ಕೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಅಬ್ದುಲ್ ಸಮದ್ ಹೊನ್ನಾನಿ ಮಾತನಾಡಿ ಯುವನಜರು ಡ್ರಗ್ಸ್ ಗಾಂಜಾದಂತಹ ವ್ಯಸನಗಳಿಗೆ ಬಲಿಯಾಗಿ ಲಿವರ್ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದಾಗಿ ಅವರು ಆರೋಗ್ಯ ಮತ್ತು ಅರ್ಥಿಕತೆಯಲ್ಲಿ ಕುಸಿತ ಕಾಣುವಂತಾಗುತ್ತದೆ.
ಮುಖ್ಯವಾಗಿ ಪೋಷಕರು ಈ ಬಗ್ಗೆ ಗಮನ ಹರಿಸಬೇಕು.ಅದರಲ್ಲೂ ಸಣ್ಣ ಮಕ್ಕಳ ಎದುರು ಧೂಮಪಾನ, ಮಧ್ಯಪಾನ ಮಾಡುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಮುಹಮ್ಮದ್ ಯಾಸೀನ್ ಮಲ್ಪೆ, ಉಡುಪಿ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಕೆ.ಪಿ ಇಬ್ರಾಹಿಂ ಮಾತನಾಡಿದರು.

ಈ ಸಂದರ್ಭದಲ್ಲಿ ಶಂಕರ್ ಅಂಚನ್, ಕೆ.ಉಮರ್ ಸಾಹೇಬ್, ಪರ್ಕಳ ಹಾಜಿ ಅಬ್ದುಲ್ಲಾ ಉಪಸ್ಥಿತರಿದ್ದರು.

ಮಾಸ್ಟರ್ ಅಜ್ಮಲ್ ಕಿರಾತ್ ಪಠಿಸಿದರು. ಜನಾಬ್ ಸಲಾಹುದ್ದೀನ್ ಅಬ್ದುಲ್ಲಾ ಶೇಖ್ ಪ್ರಸ್ತಾವಿಕ ಮತ್ತು ಸ್ವಾಗತ ಭಾಷಣ ನೆರವೇರಿಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ವಿತ್ತರು.


Spread the love

Exit mobile version