Home Mangalorean News Kannada News ಹನಿಟ್ರ್ಯಾಪ್ ಪ್ರಕರಣ; ಕರವೇ ತಾಲೂಕು ಅಧ್ಯಕ್ಷೆ ಸಹಿತ ಇಬ್ಬರ ಬಂಧನ

ಹನಿಟ್ರ್ಯಾಪ್ ಪ್ರಕರಣ; ಕರವೇ ತಾಲೂಕು ಅಧ್ಯಕ್ಷೆ ಸಹಿತ ಇಬ್ಬರ ಬಂಧನ

Spread the love

ಹನಿಟ್ರ್ಯಾಪ್ ಪ್ರಕರಣ; ಕರವೇ ತಾಲೂಕು ಅಧ್ಯಕ್ಷೆ ಸಹಿತ ಇಬ್ಬರ ಬಂಧನ

ಮಂಗಳೂರು: ವೃದ್ದರೋರ್ವರಿಂದ ಚಿನ್ನಾಭರಣಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಕರವೇ ತಾಲೂಕು ಅಧ್ಯಕ್ಷೆ ಸಹಿತ ಇಬ್ಬರನ್ನು ಬರ್ಕೆ ಠಾಣಾ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಕರ್ನಾಟಕ   ರಕ್ಷಣಾ ವೇದಿಕೆಯ ಮಹಿಳಾ ತಾಲೂಕು ಅಧ್ಯಕ್ಷೆಯಾದ   ಶ್ರೀಲತಾ  ಮತ್ತು ರಾಕೇಶ್ ಎಂದು ಗುರುತಿಸಲಾಗಿದೆ.

ಸಪ್ಟೆಂಬರ್ 23 ರಂದು   ವೃದ್ದರೋರ್ವರಿಗೆ ಮಹಿಳೆಯೋರ್ವರು ದೂರವಾಣಿ ಕರೆ ಮಾಡಿ ಮಂಗಳೂರು ನಗರದ ಲೇಡಿಹಿಲ್ ಸ್ಟೇಡಿಯಂ ಬಳಿಗೆ ಬರುವಂತೆ ತಿಳಿಸಿ ವೃದ್ದರು ಕಾರಿನಲ್ಲಿ ಸ್ಟೇಡಿಯಂ ಬಳಿಗೆ ಬಂದಾಗ ವೃದ್ದರನ್ನು ಮಹಿಳೆ ಮತ್ತು 4 ಮಂದಿ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಅಪಹರಿಸಿ ಸುರತ್ಕಲ್ ನ ರಾಜೇಶ್ ಪವಿತ್ರನ್ ಎಂಬವರ ಮನೆಯಲ್ಲಿ ಕೂಡಿ ಹಾಕಿ, ತಲಾ 5 ಲಕ್ಷ ಹಣ ಕೊಡಬೇಕೆಂದು ಇಲ್ಲದಿದ್ದಲ್ಲಿ  ಮೆಮೋರಿ ಕಾರ್ಡ್ ನಲ್ಲಿರುವ ಅಶ್ಲೀಲ ಚಿತ್ರಗಳನ್ನು ಮಾದ್ಯಮಗಳಿಗೆ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಸಿ, ವೃದ್ದರು ಬೇಡಿಕೆ ಇಟ್ಟ ಹಣ ಕೊಡದಿದ್ದಾಗ ಆತನಿಗೆ ಎಲ್ಲರೂ ಸೇರಿ ಹಲ್ಲೆ ನಡೆಸಿ ಬಲಾತ್ಕಾರವಾಗಿ ಕುತ್ತಿಗೆಯಲ್ಲಿದ್ದ 4 ½ ಪವನ್ ತೂಕದ  ಚಿನ್ನದ ಚೈನ್ -1, ಚಿನ್ನದ ಉಂಗರ-2, ವಾಚು -1, ನಗದು   ರೂ. 18,000/- ಗಳನ್ನು ದರೋಡೆ ಮಾಡಿರುತ್ತಾರೆ. ದರೋಡೆಗೆ ಒಳಗಾದ ವ್ಯಕ್ತಿ ಠಾಣೆಗೆ ಬಂದು  ಪಿರ್ಯಾದಿ ನೀಡಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ  ಕರ್ನಾಟಕ   ರಕ್ಷಣಾ ವೇದಿಕೆಯ ಮಹಿಳಾ ತಾಲೂಕು ಅಧ್ಯಕ್ಷೆಯಾದ ಆರೋಪಿ   ಶ್ರೀಲತಾ  ಮತ್ತು ಆರೋಪಿ  ರಾಕೇಶ್ ಎಂಬವರನ್ನು ದಸ್ತಗಿರಿ ಮಾಡಿ ಆರೋಪಿಗಳ ವಶದಿಂದ  ಪಿರ್ಯಾದಿದಾರರಿಂದ ದರೋಡೆಗೆ ಒಳಗಾದ 4 ½ ಪವನ್ ತೂಕದ  ಚಿನ್ನದ ಚೈನ್ -1, ಚಿನ್ನದ ಉಂಗರ-2, ವಾಚು -1, ಮತ್ತು ಆರೋಪಿತರಲ್ಲಿದ್ದ ಮೆಮೋರಿ ಕಾರ್ಡ್ ನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ಪ್ರಕರಣದಲ್ಲಿ ಉಳಿದ ಆರೋಪಿಗಳ ದಸ್ತಗಿರಿಗೆ ಬಾಕಿ ಇದ್ದು, ತಲೆ ಮರೆಸಿಕೊಂಡಿರುತ್ತಾರೆ.

ಈ ಪ್ರಕರಣದಲ್ಲಿ  ಮಂಗಳೂರು ನಗರದ  ಪೊಲೀಸು ಉಪ ಆಯುಕ್ತರಾದ  ಉಮಾ ಪ್ರಶಾಂತ್ ರವರ ನಿರ್ದೇಶನದಂತೆ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸು ಆಯುಕ್ತರಾದ   ಉದಯ ನಾಯಕ್ ರವರ ಮಾರ್ಗದರ್ಶನದಂತೆ  ಬರ್ಕೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಕೆ.ಕೆ. ರಾಮಕೃಷ್ಣ ಮತ್ತು ಸಿಬ್ಬಂದಿಯವರು ಮತ್ತು ಉರ್ವ ಪೊಲೀಸು ಠಾಣೆ ಪೊಲೀಸು ನಿರೀಕ್ಷಕರಾದ ಶ್ರೀ ರವೀಶ್ ನಾಯಕ್ ಮತ್ತು ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಶ್ರಮಿಸಿರುತ್ತಾರೆ.


Spread the love

Exit mobile version