Home Mangalorean News Kannada News ಹರಿಹರ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ವನ್ನು ಕಿರುಬಸಿಲಿಕಾ ವೆಂದು ಘೋಷಣೆ

ಹರಿಹರ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ವನ್ನು ಕಿರುಬಸಿಲಿಕಾ ವೆಂದು ಘೋಷಣೆ

????????????????????????????????????
Spread the love

ಹರಿಹರ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ವನ್ನು ಕಿರುಬಸಿಲಿಕಾ ವೆಂದು ಘೋಷಣೆ

ಶಿವಮೊಗ್ಗ: ಹರಿಹರ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ವನ್ನು ಕಿರುಬಸಿಲಿಕಾ ವೆಂದು ಸಾರುವ ಸಾಂಭ್ರಮಿಕ ಘೋಷನೆ ಹಾಗೂ ಸಮರ್ಪಣಾ ಕಾರ್ಯಕ್ರಮ ಜಪಸರ ಪ್ರಾರ್ಥನೆಯೊಂದಿಗೆ ಪ್ರಾರಂಬಿಸಿ ಮಾತೆ ಮರಿಯಮ್ಮರವರ ಆಶೀರ್ವಾದಗಳನ್ನು ಬೇಡಲಾಯಿತು.

????????????????????????????????????
????????????????????????????????????
????????????????????????????????????
????????????????????????????????????
????????????????????????????????????

ಫಾದರ್ ನೆಲ್ಸನ್ ಡಿ’ಸೋಜಾರವರು ಬಲಿಪೂಜೆ ಮುನ್ನುಡಿಯೋಂದಿಗೆ ಸರಿಯಾಗಿ 9.35ಕ್ಕೆ ಪ್ರಾರಂಭವಾಯಿತು ಸಹಸ್ರರು ಮಂದಿ ಭಕ್ತಾದಿಗಳು ವಿವಿಧ ಧರ್ಮಕ್ಷೇತ್ರದಿಂದ ಸೇರಿದ್ದರು. ಹಲವು ಧರ್ಮಕ್ಷೇತ್ರಗಳಿಂದ ಗುರುಗಳು, ಧಾರ್ಮಿಕ ಸಭೆಗಳಿಂದ ಮುಖ್ಯಸ್ಥ ಗುರುಗಳು, ಧರ್ಮಭಗಿನಿಯರು ಭಾಗವಹಿಸಿದ್ದರು.

ಪರಮಪೂಜ್ಯ ಫಿಲಿಪ್ ನೆರಿ ಫೆರಾವ್ ಗೋವಾ/ ದಾಮನ್ ಮಹಾಧರ್ಮಧ್ಯಕ್ಷರು ಪವಿತ್ರ ಬಲಿಪೂಜೆಯ ಮುಖ್ಯಸ್ಥರಾದರೆ ಪರಮಪೂಜ್ಯ ಪೀಟರ್ ಮಚಾದೊ ಬೆಂಗಳೂರು ಮಹಧರ್ಮಧ್ಯಕ್ಷರು ಪರಮಪೂಜ್ಯ ಹೆನ್ರಿ ಡಿ’ಸೋಜಾ, ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೊ, ಪರಮಪೂಜ್ಯ ಟಿ. ಅಂತೋನಿ ಸ್ವಾಮಿ, ಪರಮಪೂಜ್ಯ ರಾಬಾರ್ಟ್ ಎಂ ಮಿರಾಂದ, ಪರಮಪೂಜ್ಯ ಡೆರಿಕ್ ಫೆರ್ನಾಂಡಿಸ್, ಮಾರ್ ಜಿವರ್ಗಿಸ್ಮಕಾರಿಯಸ್ ಕಲಾಯಿಲ್, ಪರಮಪೂಜ್ಯ ಕೆ. ಎ. ವಿಲಿಯಂ,ಪರಮಪೂಜ್ಯ ಇಗ್ನೆಶಿಯಸ್ ಡಿ’ಸೋಜಾ, ಮತ್ತು ಶಿವಮೊಗ್ಗದ ಪರಮಪೂಜ್ಯ ಫ್ರಾನ್ಸಿಸ್ ಸೆರಾವೊ ಬಲಿಪೂಜೆಯಲ್ಲಿ ಭಾಗವಹಿಸಿದ್ದರು

????????????????????????????????????

ಹಾಗೆಯೇ ಫಾದರ್ ಜೆಸು ಅರ್. ನಾಥನ್, ಫಾದರ್ ಸ್ಟ್ಯಾನಿ, ಶ್ರೇಷ್ಟಗುರು ಫೆಲಿಕ್ಸ್ ನೋರೊನ್ಹಾ ಮತ್ತು ವಂ. ಡಾ ಅಂತೋನಿ ಪೀಟರ್ ಹರಿಹರ ಪುಣ್ಯಕ್ಷೇತ್ರದ ಧರ್ಮಕೇಂದ್ರದ ಗುರುಗಳು ವೇದಿಕೆಯಲ್ಲಿ ಸಹಪೂಜೆಯಲ್ಲಿ ಭಾಗವಹಿಸಿದರು.

ಕಿರುಬೆಸಿಲಿಕಾದ ಸಾಂಭ್ರಮಿಕ ಘೋಷಣೆ ಹಾಗೂ ಲೋಕಾರ್ಪಣೆಯನ್ನು ಪರಮಪೂಜ್ಯ ಪೀಟರ್ ಮಚಾದೊ ಬೆಂಗಳೂರು ಮಹಧರ್ಮಧ್ಯಕ್ಷರು ಮೊದಲಿಗೆ ಲಾಟಿನ್ ಭಾಷೆಯಲ್ಲಿ ಓದಿ ಹೇಳಿದರೆ, ಕನ್ನಡ ಭಾಷೆಯಲ್ಲಿ ಓದಿ ಹೇಳಿದರು. ಇದರ ನಿರೂಪಣೆಯನ್ನು ಫಾದರ್ ಫ್ರಾನ್ಸಿಸ್ ಅವರು ಮಾಡಿ ಸರ್ವ ಜನರು ಮಹೋನ್ನತ ದಲ್ಲಿ ದೇವರಿಗೆ ಮಹಿಮೆ ಎಂದು ಜಯಘೋಷವನ್ನು ಹಾಡಿದರು. ಇದರ ಮುಖ್ಯ ವಿಷಯವನ್ನು ಈ ರೀತಿ ತಿಳಿಸಲಾಯಿತು. ದೈವಾರಧನಾ ಮತ್ತು ಸಂಸ್ಕಾರ ಶಿಸ್ತು ಪಾಲಾನ ಸಮಿತಿಯ ತನಗೆ ಪರಮೋಚ್ಚಗುರು ಫ್ರಾನ್ಸಿಸರು ಅನುಗ್ರಹಿಸಿದ ವಿಶೇಷ ಅಧಿಕಾರದಿಂದ 18 ಸೆಪ್ಟಂಬರ್ 2019 ರಂದು ಹರಿಹರ ಆರೋಗ್ಯಮಾತೆಯ ಪುಣ್ಯಕ್ಷೇತ್ರವನ್ನು ಕಿರುಬಸಿಲಿಕವೆಂದು ಮಾನ್ಯತೆ ನೀಡಿದ್ದರು ಹಾಗೂ ಈ ಪತ್ರವನ್ನು ಕಳುಹಿಸಲಾಗಿತ್ತು ಇದನ್ನು ಲೋಕಾರ್ಪಣೆ ಮಾಡಲಾಯಿತು.

ಮೊದಲನೆ ವಾಚವನ್ನು ಎಜೆಕಿಯಲ್ ಗ್ರಂಥದಿಂದ ಆರಿಸಿ ದೇವ ಮಂದಿರ ಕ್ರೈಸ್ತ ಬದುಕಿನ ಶಾಂತಿ, ಪ್ರೀತಿಯ ತಾಣಾ ಇಲ್ಲಿರುವ ದೈವಿ ಪ್ರಭೆಯಿಂದ ಮನಗಳು ಅರಳುತ್ತವೆ. ಮನೆಗಳು ಬೆಳಗುತ್ತವೆ ಈ ಮಂದಿರ ದೇವರನ್ನು ಮನುಷ್ಯನನ್ನು ಒಂದುಗೂಡಿಸುವ ಭಾಂಧವ್ಯದ ಸೇತುವೆ ಹಾಗೂ ಇನ್ನಿತ್ತಿರ ಅಧ್ಯಾತ್ಮಿಕ ಅಂಶಗನ್ನು ಒಳಗೊಂಡ ವಿಷಯಗಳು ಇದರಲ್ಲಿ ಅಲಿಸಲಾಯಿತು

ಶ್ಲೋಕ ನದಿಯೊಂದು ಆನಂದಗೊಳಿಸುವುದು ದೇವ ನಗರವನು ಪುನೀತಗೊಳಿಸಿವುದು ಪರಾತ್ಪನ ನಿವಾಸವನು ಎನ್ನುತ್ತಾ ವಾಚನಕ್ಕೆ ಉತ್ತರವಾಗಿ ಹಾಡಾಲಾಯಿತು.

ಎರಡನೇ ವಾಚನವನ್ನು , ಪ್ರಭು ಯೇಸುಕ್ರಿಸ್ತರು ಕ್ರೈಸ್ತ ಬದುಕಿನ ಭದ್ರ ಬುನಾದಿಯಾಗಿದ್ದಾರೆ. ತನ್ನ ದೇಹವನ್ನೆ ಧಾರೆಯೆರೆದು ನಮ್ಮನ್ನು ತಮ್ಮವರಾಗಿಸಿಕೊಂಡಿದ್ದಾರೆ. ನಮ್ಮ ದೇಹವೆಂಬ ದೇಗುಲದಲ್ಲಿ ಅವರನ್ನು ಪ್ರತಿಷ್ಠಾಪಿಸಿದ್ದಾರೆ. ನಮ್ಮ ದೇಹವೆಂಬ ದೇಗುಲದಲ್ಲಿ ಅವರನ್ನು ಪ್ರತಿಷ್ಠಾಪಿಸಿಕೊಂಡಿದ್ದೇವೆ. ಹಾಗೂ ಇನ್ನಿತ್ತಿರ ಅಧ್ಯಾತ್ಮಿಕ ದೇಗುಲಕ್ಕೆ ಒಳಗೊಂಡ ವಿಷಯಗಳು ಇದರಲ್ಲಿ ಅಲಿಸಲಾಯಿತು

ಶುಭಸಂದೇಶವನ್ನು ಫಾದರ್ ಸ್ಟ್ಯಾನಿಯವರು ಮೆರವಣಿಗೆಯಲ್ಲಿ ತಂದು ಆರಾಧಿಸಲಾಯಿತು. ಹಾಗೆಯೇ ಅದನ್ನು ಸಂತ ಲೂಕನ ಶುಭಸಂದೇಶದಿಂದ ಮಾತೆಗೆ ದೈವ ವಾಣಿಯನ್ನು ನೀಡುವ ಹಾಗೂ ದೂತನು ಬಂದು ಅವರಿಗೆ ಯೇಸು ಅವರಲ್ಲಿ ಹುಟ್ಟುತ್ತಾರೆ ಎಂಬುದರ ಬಗ್ಗೆ ಹಾಗೆಯೇ ಮಾತೆ ಮತ್ತು ದೂತನ ನಡುವೆ ನಡೆದ ಸಂಬಾಷಾನೆಯ ಬಗ್ಗೆ ದೇವಜನರಿಗೆ ದೇವರಿಗೆ ಆಸಾಧ್ಯವಾದದು ಯಾವುದು ಇಲ್ಲ ಎಂದು ಆಲಿಸಲಾಯಿತು.
ಪ್ರಭೋದನೆಯನ್ನು ಪರಮಪೂಜ್ಯ ಉಡುಪಿ ಧರ್ಮಕ್ಷೇತ್ರದ ಧರ್ಮಧ್ಯಕ್ಷರಾಗಿರುವ ಡಾ. ಜೆರಾಲ್ಡ್ ಐಸಾಕ್ ಲೋಬೊರವರು ನೀಡುತ್ತಾ ಕೆಳಕಂಡ ವಿಷಯಗಳನ್ನು ಧ್ಯಾನಿಸಲು ಕರೆನೀಡಿದರು.

ಈ ದಿನವು ಸರ್ವರಿಗೆ ಆನಂಧಮಯ ದಿನ ಸ್ವರ್ಣಾಕ್ಷಾರಗಳಲ್ಲಿ ಬರೆದಿಡುವ ದಿನ. ಈ ಕಿರು ಬಸಿಲಿಕವನ್ನು ಕೆಲವೇ ದೇವಾಲಯಗಳಿಗೆ ನೀಡುವುದಾಗಿದೆ. ಹಾಗೆಯೇ ಹಲವಾರು ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಾಬೇಕಾದಿದೆ. ಇದು ಹಲಾವಾರು ದಿನದ ಪ್ರಾರ್ಥನೆಯ ಫಲವು ಕೂಡ ಆಗಿದೆ. ಈ ಕಿರುಬಸಿಲಿಕಾವಾಗಬೇಕಾದರೆ ಯಾವ ಯಾವ ದೇವಕಾರ್ಯಗಳು ಆ ಪುಣ್ಯಕ್ಷೇತ್ರದಲ್ಲಿ ನಡೆಯಬೇಕು ಎಂದು ಜನರಿಗೆ ತಿಳಿಸಿದರು

ವಿಶ್ವಾಸ ನಿವೇದನೆಯ ಬಳಿಕ ವಿಶ್ವಾಸಿಗಳ ಪ್ರಾರ್ಥನೆಯಲ್ಲಿ ದೇವರಿಗೆ ವಂದನೆಯನ್ನು ಸಲ್ಲಿಸುತ್ತಾ ಅವರ ಸಕಲ ವರದಾನಗಳಿಗೆ ಪ್ರಾರ್ಥಿಸಲಾಯಿತು ತದನಂತರ ಕಾಣಿಕೆಯ ಸಮಯದಲ್ಲಿ ಸಹಸ್ರರು ಮಂದಿ ಕಾಣಿಕೆಯನ್ನು ಅರ್ಪಿಸಿದರು.

ಬಲಿಪೂಜೆಯ ಪ್ರಮುಖ ಭಾಗವಾದ ಪವಿತ್ರ ಪ್ರಸಾದದ ಸಂಸ್ಕಾರ ವಿಧಿಯನ್ನು ಇಂಗ್ಲೀಷ್ ಭಾಷೆಯಲ್ಲಿ ನೆರವೇರಿಸಲಾಯಿತು

ಬಂದ ಭಕ್ತ ಜನರಿಗೆ 28 ಬ್ಲಾಕ್ ಗಳಲ್ಲಿ ಆಸನಗಳನ್ನು ಹಾಗೆಯೇ ಪರಮ ಪ್ರಸಾದವನ್ನು ಸ್ವೀಕರಿಸಲು ಅವಕಾಶ ಮಾಡಿಕೊಡಲಾಯಿತು. ಎಲ್ಲಾ ಭಕ್ತ ಜನರು ಭಕ್ತಿಯಿಂದ ಇದರಲ್ಲಿ ಭಾಗವಹಿಸಿದರು. ಪರಮಪೂಜ್ಯ ಫಿಲಿಪ್ ನೆರಿ ಫೆರಾವ್ ಗೋವಾ/ ದಾಮನ್ ಮಹಾಧರ್ಮಧ್ಯಕ್ಷರು ಮತ್ತು ವೇದಿಕೆಯಲ್ಲಿ ಇದ್ದ ಧರ್ಮಧ್ಯಕ್ಷರು ಪೂಜೆಯ ಅಂತಿಮ ಆಶೀರ್ವಾದವನ್ನು ಹಾಜರಿದ್ದ ಎಲ್ಲಾ ಭಕ್ತಾದಿಗಳಿಗೆ ನೀಡಿದರು

ಗಾಯನವೃಂದವು ಅವರ ಸುಮಧುರ ಹಾಡುಗಳಿಂದ ಇಡೀ ಬಲಿಪೂಜೆಯ ಭಕ್ತಿಯಿಂದ ಭಾಗವಹಿಸಲು ಅನುವು ಮಾಡಿದರು

ಸಭಾ ಕಾರ್ಯಕ್ರಮ
ಹರಿಹರ ಆರೋಗ್ಯ ಮಾತೆಯ ಪುಣ್ಯಕ್ಷೇತ್ರವನ್ನು ಕಿರುಬಸಿಲಿಕಾವೆಂದು ಸಾರುವ ಸಾಂಭ್ರಮಿಕ ಘೋಷನೆ ಹಾಗೂ ಸಮರ್ಪಣಾ ಕಾರ್ಯಕ್ರಮದ ವೇದಿಕೆಯ ಕಾರ್ಯಕ್ರಮವನ್ನು 11.45 ಕ್ಕೆ ಸರಿಯಾಗಿ ಪ್ರಾರಂಭಿಸಲಾಯಿತು

ಮೊದಲಿಗೆ ದೇವರ ವಾಕ್ಯವನ್ನು ಓದುತ್ತಾ ಮರಿಯ ನಿವಾಸ ಶಾಲೆಯ ಮಕ್ಕಳಿಂದ ಪ್ರಾರ್ಥನಾ ನೃತ್ಯದೊಂದಿಗೆ ಪ್ರಾರಂಭಿಸಲಾಯಿತು. ಪರಮಪೂಜ್ಯ ಪೀಟರ್ ಮಚಾದೊ ಬೆಂಗಳೂರು ಮಹಧರ್ಮಧ್ಯಕ್ಷರು ಕಾರ್ಯದ ಅಧ್ಯಕ್ಷತೆಯನ್ನು ಶ್ರೀ ಬಿ.ಎಸ್. ಯಡಿಯೂರಪ್ಪ ಸನ್ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ಕಾರ್ಯದ ಮುಖ್ಯ ಅಥಿತಿಯಾಗಿ ಬಂದರೆ ಪರಮಪೂಜ್ಯ ಫಿಲಿಪ್ ನೆರಿ ಫೆರಾವ್ ಗೋವಾ/ ದಾಮನ್ ಮಹಾಧರ್ಮಧ್ಯಕ್ಷರು. ಡಾ ಶ್ರೀ ಶಿವಮೂರ್ತಿ ಮುರುಘ ಶರಣರು ಶ್ರೀ ಮುರುಘ ಮಠ, ಚಿತ್ರದುರ್ಗ, ಹರಿಹರಮೌಲಾನಾ ಬಿ.ಎ. ಇಬ್ರಾಹಿಂ ಸಖಾಫಿ, ಇಸ್ಲಾಮಿಕ್ ಪ್ರವಚಕರು ದಾವಣಗೆರೆ ಮತ್ತು ಕರ್ನಾಟಕದ ಎಲ್ಲಾ ಧರ್ಮಧ್ಯಕ್ಷರುಗಳು ಬರೆಲಿ ಧರ್ಮಧ್ಯಕ್ಷರು ಮತ್ತು ವೇದಿಕೆಯಲ್ಲಿ ಆಸಿನರಾಗಿದ್ದರು.

ಸನ್ಮಾನ್ಯ ಶ್ರೀ ಜಿ.ಎಮ್. ಸಿದ್ದೇಶ್ ಸಂಸತ್ ಸದಸ್ಯರು ದಾವಣಗೆರೆ ಮತ್ತುಸನ್ಮಾನ್ಯ ಶ್ರೀ ಬಿ. ವೈ. ರಾಘವೇಂದ್ರ ಸಂಸತ್ ಸದಸ್ಯರು ಶಿವಮೊಗ್ಗ ಸನ್ಮಾನ್ಯ ಶ್ರೀ ಎಸ್ ರಾಮಪ್ಪ ಶಾಸಕರು ಇನ್ನೀತಿರ ಗಣ್ಯರು ಸಮಯಕ್ಕೆ ಸರಿಯಾಗಿ ಬಂದು ಕಾರ್ಯಕ್ರಮಕ್ಕೆ ಆಸಿನರಾಗಿದ್ದರು ಹಾಗೆಯೇ

ಸ್ವಾಗತ ಭಾಷಣವನ್ನು ಮಾಡುತ್ತಾ ಬಂದ ಎಲ್ಲ ಗಣ್ಯರಿಗೆ ಶಿವಮೊಗ್ಗದ ಧರ್ಮಧ್ಯಕ್ಷರಾದ ಪರಮಪೂಜ್ಯ ಫ್ರಾನ್ಸಿಸ್ ಸೆರಾವೊ ರವರು ಮಾಡಿದರು

ಕಾರ್ಯಕ್ರಮವು ದೀಪ ಬೆಳಗಿಸುವಿಕೆಯ ಮೂಲಕ ಮೊದಲಿಗೆ ಮುಖ್ಯ ಅಥಿತಿಗಳು ಮಾಡಿದರೆ ವೇದಿಕೆಯಲ್ಲಿ ನೆರೆದಿದ್ದ ಉಳಿದ ಗಣ್ಯರು ಒಬ್ಬೊಬ್ಬರಾಗಿ ಮಾಡಿದರು

ಯಡಿಯೂರಪ್ಪ ಸನ್ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ, ಮುಖ್ಯ ಅಥಿತಿಗಳು ಉಘ್ಗೋಷ ಫಲಕವನ್ನು ಉದ್ಗಾಟಿಸಿದರು. ಫಾದರ್ ಲ್ಯಾನ್ಸಿ ರವರು ಈ ಫಲಕದಲ್ಲಿದ್ದ ವಿಷಯವನ್ನು ತಿಳಿಸಿದರೆ ಹರಿಹರ ಊರಿನ ಬಗ್ಗೆ ಹಾಗೂ ಧರ್ಮಕೇಂದ್ರ ಬೆಳೆದು ಬಂದ ರೀತಿಯನ್ನು ಎಳೆ ಎಳೆಯಾಗಿ ಇತಿಹಾಸದ ಪುಟಗಳನ್ನು ತೆರೆಯುತ್ತಾ ಹರಿಹರ ಮಾತೆಯ ಸ್ವರೂಪ ಹೇಗೆ ಸಿಕ್ಕಿತು ಅದನ್ನು ತದನಂತರ ದೇವಾಲಯದ ಇತಿಹಾಸವನ್ನು ಧರ್ಮಕೇಂದ್ರವಾಗಿ, ಪುಣ್ಯಕ್ಷೇತ್ರ, ಮತ್ತು ಬಸಿಲಿಕಾವಾದ ಬೆಳವಣಿಗೆಯನ್ನು ವಂ. ಡಾ ಅಂತೋನಿ ಪೀಟರ್ ಹರಿಹರ ಪುಣ್ಯಕ್ಷೇತ್ರದ ಧರ್ಮಕೇಂದ್ರದ ಗುರುಗಳು ಹಾಜರಿದ್ದ ಜನತೆಗೆ ತಿಳಿಯಪಡಿದರು.

ನಂತರದಲ್ಲಿ ಪರಮಪೂಜ್ಯ ಫ್ರಾನ್ಸಿಸ್ ಸೆರಾವೊ ಮುಖ್ಯಮಂತಿಯವರಿಗೆ ಹರಿಹರ ಬಸಿಲಿಕಾಕ್ಕೆ ಸ್ಥಳದ ಅವಕಾಶವನ್ನು ಕೋರುತ್ತಾ ಮನವಿಯನ್ನು ಸಲ್ಲಿಸಿದರು

ತದ ನಂತರ ಮುಖ್ಯ ಅಥಿತಿ ಮುಖ್ಯಮಂತ್ರಿಯವರು ಸಂಕ್ರಾತಿ ಹಬ್ಬದ ಶುಭಷಯವನ್ನು ಕೋರುತ್ತಾ ಅವರ ಮಾತನ್ನು ಪ್ರಾರಂಬಿದರು. ಎಲ್ಲ ಧರ್ಮಗಳನ್ನು ಪ್ರೀತಿಸಿ ತಮ್ಮ ಧರ್ಮದಲ್ಲಿ ಜೀವಿಸು ಎನ್ನುವ ಗಾಂಧೀಜಿಯ ಮಾತನ್ನು ಹೇಳುತ್ತಾ ಶಾಂತಿ ಸೌಹರ್ಧ್ಯಯಲ್ಲಿ ಜೀವಿಸಿ, ಕ್ರೈಸ್ತ ಧರ್ಮದ ವಿವಿಧ ಸ್ಮರಿಸುತ್ತಾ, ಶಾಂತಿಯ ಭೂಮಿ ಕರ್ನಾಟಕವನ್ನು ಕಟ್ಟಲ್ಲು ಸಹಾಕಾರ ನೀಡೋಣ ಎನ್ನುತ್ತಾ ಎಲ್ಲರಿಗೂ ವಂದಿಸುತ್ತಾ ಬೇರೆ ಕಾರ್ಯಕ್ರಮಕ್ಕೆ ಹೋಗಲಿದ್ದ ಕಾರಣ ಕಾರ್ಯಕ್ರಮಕ್ಕೆ ಸನ್ಮಾನದೊಂದಿಗೆ ನಿರ್ಗಮನ ಕೋರಿದರು.

ಪರಮಪೂಜ್ಯ ಫಿಲಿಪ್ ನೆರಿ ಫೆರಾವ್ ಗೋವಾ/ ದಾಮನ್ ಮಹಾಧರ್ಮಧ್ಯಕ್ಷರುರವರು, ಭಾಷಣವನ್ನು ಮಾಡುತ್ತಾ, ಈ ಹರಹರ ಭೂಮಿಯು ಸಕಲ ಧರ್ಮಗಳಿಗೂ ಪ್ರೀತಿಸಿ ಸೇವೆಯನ್ನು ಮಾಡುವ ತಾನವಾಗಿದ್ದು, ನಮಸ್ತೆ ಎಂಬ ಶಬ್ದವು ಸಕಲರ ಒಳ್ಳೆಯದಕಕ್ಕಾಗಿ ಉಪಯೊಗಿಸಿ ಕಾಯಕಾವೆ ಕೈಲಾಸ ಎಂಬ ಧ್ಯೇಯ ವಾಕ್ಯವನು ಬಳಸಲು ಕರೆನೀಡಿದರು.

ಡಾ ಶ್ರೀ ಶಿವಮೂರ್ತಿ ಮುರುಘ ಶರಣರು ಶ್ರೀ ಮುರುಘ ಮಠ, ಚಿತ್ರದುರ್ಗ,ರವರು ಭಾಷಣವನ್ನು ಮಾಡುತ್ತಾ ಆಧುನಿಕ ಜಗತ್ತಿನಲ್ಲಿ ಪ್ರೀತಿ ದುಬಾರಿಯಾಗುತ್ತದೆ, 3 ರೀತಿಯ ಪ್ರೀತಿಯನ್ನು ತಿಳಿಸಿ, (1)ಜಾತಿಯ ಪ್ರೀತಿಯ (2) ಮಾನವ ಪ್ರೀತಿ – ಇದು ವಿಶಾಲ, ವಿಶ್ವಪ್ರೀತಿ, ಎಂದು ಹೇಳಬಹುದು. ಇದು ತುಂಬಾ ಸವಾಲಿನಿಂದ ಕೂಡಿದೆ. ಯೇಸುವಿನ ಅಚಲ ಮತ್ತು ಅಖಾಂಡವಾದ ಪ್ರೀತಿ ಯಾಕೆಂದರೆ ತಮ್ಮ ವೀರೋದಿಯನ್ನು ಪ್ರೀತಿಸಿ ಎಂದು ಹೇಳಿದ ಮೊದಲ ದೈವತ್ತ ವ್ಯಕ್ತಿ (3) ಜೀವಪ್ರೀತಿ ನೀನು ಬದುಕಲು ಇದು ಅತ್ಯಗತ್ಯ. ಎಲ್ಲ ಧರ್ಮಗಳು ಜೀವಪ್ರೀತಿಯನ್ನು ಬೆಳೆಸಿಕೊಳ್ಳಲು ಅಗತ್ಯವಾಗಿದೆ. ಯೇಸುವಿನ ವಿಶ್ವಮಾನವ ಪ್ರೀತಿಯನ್ನು ನಮ್ಮಲ್ಲಿ ಸಕಲರ ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಜೆರುಜಲೆಮಿಗೆ, ವ್ಯಾಟಿಕನ್ ನಗರಕ್ಕೆ ಮತ್ತು ಪೆÇೀಪ್ ರವರಿಗೆ ತಮ್ಮ ಬೇಟಿಯ ಬಗ್ಗೆ ಹೇಳಿದರು.

ಹರಿಹರಮೌಲಾನಾ ಬಿ.ಎ. ಇಬ್ರಾಹಿಂ ಸಖಾಫಿ, ಇಸ್ಲಾಮಿಕ್ ಪ್ರವಚಕರು ದಾವಣಗೆರೆ ರವರು ಭಾಷಣವನ್ನು ಮಾಡುತ್ತಾ ದೇಶಕ್ಕೆ ಕೋಡುವ ಸಂದೇಶ ಪೀತಿಯ ಶಾಂತಿಯ ಸಂದೇಶ. ಪೈಗಂಬರ ರವರ ಮಾತನ್ನು ಹಾಗೂ ಯೇಸುವಿನ ಪ್ರೀತಿಯ ವಚನವನ್ನು ಮತ್ತು ಎಲ್ಲ ಧರ್ಮಗಳಲ್ಲಿ ಮಾನವಧರ್ಮ ಶ್ರೇಷ್ಟ ಎಂದು ಅವರು ಘೋಸಿದರು. ಪೀತಿಸಿ, ಪೀತಿಯನ್ನು ಪಡೆಯುವರಾಗೋಣ ಎಂಬ ವಿಷಯವನ್ನು ಹೇಳುತ್ತಾ ಕ್ರೈಸ್ತರು ವಿದ್ಯಾಭ್ಯಾಸದಲ್ಲಿ ಮುಸ್ಲಿಮ್ ಭಾಂದವರರಿಗೆ ಬಹಳಷ್ಟು ಉಪಯೋಗವಾಗಿದೆ. ಎನ್ನು ಹೇಳುತ್ತಾ ಅವರ ಮಾತು ಮುಗಿಸಿದರು

ಕೊನೆಯಾದಾಗಿ ಸಭಾ ಅಧ್ಯಕ್ಷರು ಪೀಟರ್ ಮಾಚಾದೋ ರವರು, ನಾವು ಬೇಟಿಯಾಗುವಾಗುವಾಗ ನಿಮ್ಮ ಆರೋಗ್ಯ ಹೇಗೆ ಇದೆ ಎಂದು ಕೇಳುತ್ತೇವೆ. ಇದು ಕೇವಲ ದೈಹಿಕ ಮಾತ್ರವಲ್ಲ ಮಾನಸಿಕ ಹಾಗೂ ಅಧ್ಯಾತ್ಮಿಕ ಆರೋಗ್ಯ ವಾಗಿದೆ. ನಮ್ಮೆಲ್ಲರಿಗೂ ಬೇಕಾದ ಆರೋಗ್ಯ ಭಾಗ್ಯವನ್ನು ಮಾತೆ ನೀಡಲಿ. ನಾವು ಅಲ್ಪ ಸಂಖ್ಯಾಂತರಾದರೂ ಬಹು ಸಂಖ್ಯಾಂತರಿಗೆ ಸೇವೇಯನು ಸಲ್ಲಿಸುತ್ತಿದ್ದೇವೆ ಎಂದು ಹೇಳುತ್ತಾ ಮನವಿಯನ್ನು ಸಲ್ಲಿಸಿದ ಬಗ್ಗೆ ತಿಳಿ ಹೇಳಿದರು

ಮೈಸೂರು ಧರ್ಮಕ್ಷೇತ್ರದ ಹೊಸ ಸಿಡಿ ಸುತ್ಯಾಂಜಲಿಯನ್ನು ಬಿಡುಗಡೆಯನ್ನು ಮಾಡಲಾಯಿತು.

ಪರಮಪೂಜ್ಯ ಪೀಟರ ಮಚಾದೊ ಬೆಂಗಳೂರು ಮಹಧರ್ಮಧ್ಯಕ್ಷರು, ಪರಮಪೂಜ್ಯ ಫಿಲಿಪ್ ನೆರಿ ಫೆರಾವ್ ಗೋವಾ/ ದಾಮನ್ ಮಹಾಧರ್ಮಧ್ಯಕ್ಷರು, ಡಾ ಶ್ರೀ ಶಿವಮೂರ್ತಿ ಮುರುಘ ಶರಣರು ಶ್ರೀ ಮುರುಘ ಮಠ, ಚಿತ್ರದುರ್ಗ, ಮೌಲಾನಾ ಬಿ.ಎ. ಇಬ್ರಾಹಿಂ ಸಖಾಫಿ,ಇಸ್ಲಾಮಿಕ್ ಪ್ರವಚಕರು ದಾವಣಗೆರೆ, ಸನ್ಮಾನ್ಯ ಶ್ರೀ ಎಸ್ ರಾಮಪ್ಪ ಶಾಸಕರು ಹರಿಹರ ಮತ್ತು ಎಲ್ಲ ಕರ್ನಾಟಕದ ಸಕಲ ಧರ್ಮಧ್ಯಕ್ಷರುಗಳಿಗೆ ಸನ್ಮಾನವನ್ನು ಶಿವಮೊಗ್ಗದ ಧರ್ಮಕ್ಷೇತ್ರದ ಧರ್ಮಧ್ಯಕ್ಷರು ಸನ್ಮಾನಿಸಿದರು.

ತದನಂತರ ಸಕಲ ಧಾರ್ಮಿಕ ಸಭೆಗಳಿಗೆ ಸೇರಿದ ಪ್ರಾಂತ್ಯಧಿಕಾರಿಗಳಿಗೆ ಧಾರ್ಮಿಕ ಗುರುಗಳಿಗೂ ಹಾಗೂ ಧರ್ಮಸಹೋದರಿಯರಿಗೂ ಸನ್ಮಾನವನ್ನು ನೀಡಲಾಯಿತು.

ಕೊನೆಯದಾಗಿ ಧರ್ಮಕ್ಷೇತ್ರದ ಶ್ರೇಷ್ಟರು ಫೆಲಿಕ್ಸ್ ನೊರೋನ್ಹಾ ಬಂದಿದ ಸಕಲ ಗಣ್ಯರಿಗೆ, ಸಕಲ ಧರ್ಮಧ್ಯಕ್ಷರುಗಳಿಗೆ ವಿಶೇಷವಾಗಿ ಶಿವಮೊಗ್ಗದ ಧರ್ಮಕ್ಷೇತ್ರದ ಧರ್ಮಧ್ಯಕ್ಷರಿಗೆ ಮತ್ತು ವಂ. ಡಾ ಅಂತೋನಿ ಪೀಟರ್ ಹರಿಹರ ಪುಣ್ಯಕ್ಷೇತ್ರದ ಧರ್ಮಕೇಂದ್ರದ ಗುರುಗಳಿಗೆ ಹಾಗೂ ಸಕಲ ಜನತೆಗೆ ವಂದಾರ್ಪಣೆಯನ್ನು ಸಲ್ಲಿಸಿದರು

ಕೊನೆಗೆ ಹರಿಹರ ಮಾತೆಯ ಉಪಕಾರಗಳಿಗೆ ಅವರನ್ನು ಸ್ಮರಿಸುತ್ತಾ ಗೀತೆಯೊಂದಿಗೆ ಅಂದಿನ ಕಾರ್ಯಕರ್ಮಕ್ಕೆ ಪೂರ್ಣ ವಿರಾಮವನ್ನು ನೀಡಲಾಯಿತು

ಇಡೀ ಸಭಾ ಕಾರ್ಯ ಕ್ರಮದ ನಿರೂಪಣೆಯನ್ನು ಫಾದರ್ ವಿನ್ನಿಫ್ರೆಡ್ರವರು ಮಾಡಿದ್ದರು.


Spread the love

Exit mobile version