Home Mangalorean News Kannada News ಹರೀಶ್ ಶೆಟ್ಟಿ ಕೊಲೆ ಯತ್ನ ಪ್ರಕರಣ- ಮೂವರ ಬಂಧನ

ಹರೀಶ್ ಶೆಟ್ಟಿ ಕೊಲೆ ಯತ್ನ ಪ್ರಕರಣ- ಮೂವರ ಬಂಧನ

Spread the love

ಹರೀಶ್ ಶೆಟ್ಟಿ ಕೊಲೆ ಯತ್ನ ಪ್ರಕರಣ- ಮೂವರ ಬಂಧನ

ಮಂಗಳೂರು: ಹಿಂದೂ ಸಂಘಟನೆ ನಾಯಕ ಬಜಪೆ ಕೈಕಂಬ ನಿವಾಸಿ ಹರೀಶ್ ಶೆಟ್ಟಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹದಳದ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ಅಮ್ಮುಂಜೆ ನಿವಾಸಿ ಮೊಹಮ್ಮದ್ ಶರೀಫ್ ಯಾನೆ ಶರೀಫ್ (24), ಬಜಪೆ ಕಂದಾವರ ನಿವಾಸಿ ಶಿಫಾಜ್ (21) ಮತ್ತು ಮೊಹಮ್ಮದ್ ಆರಿಫ್ (28) ಎಂದು ಗುರುತಿಸಲಾಗಿದೆ.

ದಿನಾಂಕ 24.09.2018 ರಂದು ಮಂಗಳೂರು ಹೊರವಲಯದ ಬಜಪೆ ಕೈಕಂಬ ನಿವಾಸಿ ಹರೀಶ್ ಶೆಟ್ಟಿ  ಎಂಬವರು ಕೈಕಂಬದಿಂದ ತನ್ನ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳುತಿದ್ದ ವೇಳೆ ಸೂರಲ್ಪಾಡಿ ಬಳಿಯಲ್ಲಿ ಮೋಟಾರ್ ಸೈಕಲ್ ನಲ್ಲಿ ಮಾರಾಕಾಯುಧಗಳಿಂದ ಬಂದ ವ್ಯಕ್ತಿಗಳು ಹರೀಶ್ ಶೆಟ್ಟಿಯವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದು, ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಈ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಕ್ಕೆ ಮೂರು ತಂಡಗಳನ್ನು ರಚಿಸಿದ್ದು ಇದರಲ್ಲಿ ಬಜಪೆ ಪೊಲೀಸರು, ಮಂಗಳೂರು ಸಿಸಿಬಿ ಮತ್ತು ಮಂಗಳೂರು ನಗರ ಉತ್ತರ ಉಪವಿಭಾಗ ಪಣಂಬೂರು ರೌಡಿ ನಿಗ್ರಹ ದಳದವರು ಆರೋಪಿಗಳ ಪತ್ತೆಗೆ ಶ್ರಮಿಸಿರುತ್ತಾರೆ. ಪ್ರಕರಣದಲ್ಲಿ ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.

ಪ್ರಕರಣದ ತನಿಖೆಯ ವೇಳೆ ಇನ್ನೂ ಹೆಚ್ಚಿನ ಆರೋಪಿಗಳು ಇನ್ನೂ ಹೆಚ್ಚಿ ಆರೋಪಿಗಳು ಭಾಗಿಯಾಗಿರುವುದು ಕಂಡು ಬಂದಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಲು ಬಾಕಿಯಿರುತ್ತದೆ.

 ಈ ಪ್ರಕರಣದಲ್ಲಿ ಮಂಗಳೂರು ನಗರದ  ಪೊಲೀಸ್ ಆಯುಕ್ತರಾದ ಟಿ.ಆರ್ ಸುರೇಶ್‌ ರವರ ಆದೇಶದಂತೆ ಉಪಪೊಲೀಸ್‌ ಆಯುಕ್ತರಾದ ಉಮಾ ಪ್ರಶಾಂತ ರವರ ನಿರ್ದೇಶನದಂತೆ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ.ಎಸ್‌‌. ರವರ ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ರಫೀಕ್.ಕೆ.ಎಂ, ಸಿಸಿಬಿ ಘಟಕದ ಪೊಲಿಸ್ ನಿರೀಕ್ಷಕರಾದ ಶಾಂತರಾಮ ಮತ್ತು ಅವರ ಸಿಬ್ಬಂದಿಗಳು, ಹಾಗೂ  ರೌಡಿ ನಿಗ್ರಹ ದಳದ ಅಧಿಕಾರಿ /ಸಿಬ್ಬಂಧಿಗಳಾದ ಎ.ಎಸ್. ಐ. ಮೊಹಮ್ಮದ್ ಬಜಪೆ, ಕುಶಲ ಮಣಿಯಾಣಿ, ಸತೀಶ್ ಎಂ., ವಿಜಯಕಾಂಚನ್, ಇಸಾಕ್ , ರಾಧಾಕೃಷ್ಣ, ಶರಣ್ ಕಾಳಿ ಇವರುಗಳು ಆರೋಪಿಗಳ  ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.


Spread the love

Exit mobile version