‘ಹಲಾಲ್ ಪ್ರಮಾಣಿಕೃತ ಉತ್ಪಾದನೆಗಳನ್ನು ಬಹಿಷ್ಕರಿಸಿ ! – ಹಿಂದೂ ಜನಜಾಗೃತಿ ಸಮಿತಿ
‘ಹಲಾಲ್’ ಈ ಅರಬೀ ಪದದ ಅರ್ಥ ಇಸ್ಲಾಮ್‌ಗನುಸಾರ ಮಾನ್ಯತೆ ಪಡೆದ ಎಂದಿದೆ ! ಮೂಲತಃ ಮಾಂಸದ ವಿಷಯದಲ್ಲಿದ್ದ ‘ಹಲಾಲ್’ನ ಬೇಡಿಕೆ ಈಗ ಶಾಕಾಹಾರಿ ಆಹಾರಪದಾರ್ಥಗಳೊಂದಿಗೆ, ಸೌಂದರ್ಯವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ಗೃಹನಿರ್ಮಾಣಸಂಸ್ಥೆಗಳು, ಮಾಲ್ ಹೀಗೆ ಅನೇಕ ಅಂಶಗಳಲ್ಲಿ ಕೇಳಿಬರುತ್ತಿದೆ. ಅದಕ್ಕಾಗಿ ಖಾಸಗಿ ಇಸ್ಲಾಮಿ ಸಂಸ್ಥೆಗಳಿಂದ ‘ಹಲಾಲ್ ಪ್ರಾಮಾಣಪತ್ರ’ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಜಾತ್ಯತೀತ ಭಾರತದಲ್ಲಿ ಸರಕಾರದ ‘ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ’ದಿಂದ ಅಂದರೆ (FSSAI) ನಿಂದ ಪ್ರಮಾಣಪತ್ರವನ್ನು ಪಡೆದ ನಂತರ ಈ ಖಾಸಗೀ ಇಸ್ಲಾಮೀ ಪ್ರಮಾಣಪತ್ರ ಪಡೆಯಲು ಕಡ್ಡಾಯವೇಕೆ ? ಭಾರತದಲ್ಲಿ ಕೇವಲ ಶೇ. ೧೫ ರಷ್ಟು ಮುಸಲ್ಮಾನರ ಜನಸಂಖ್ಯೆ ಇರುವಾಗ ಉಳಿದ ಶೇ. ೮೫ ರಷ್ಟು ಹಿಂದೂಗಳ ಮೇಲೆ ‘ಹಲಾಲ್ ಪ್ರಮಾಣಪತ್ರ’ ಏಕೆ ಹೇರಲಾಗುತ್ತದೆ ? ಎಲ್ಲಕ್ಕಿಂತ ಮಹತ್ವದ ಅಂಶವೆಂದರೆ ‘ಹಲಾಲ್ ಪ್ರಮಾಣೀಕೃತ’ದಿಂದ ಸಿಗುವ ಕೋಟಿಗಟ್ಟಲೆ ಹಣದ ಉತ್ಪನ್ನವು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಗೆ ಸಿಗದೇ ಅದು ಕೆಲವು ಇಸ್ಲಾಮೀ ಸಂಘಟನೆಗಳಿಗೆ ಸಿಗುತ್ತಿದೆ. ಈ ಪ್ರಮಾಣಪತ್ರವನ್ನು ನೀಡುವ ಸಂಘಟನೆಗಳ ಪೈಕಿ ಕೆಲವು ಸಂಘಟನೆಗಳು ಭಯೋತ್ಪಾದಕ ಕೃತ್ಯಗಳಲ್ಲಿ ಸಿಲುಕಿದ ಮತಾಂಧರನ್ನು ಬಿಡುಗಡೆ ಮಾಡಲು ಕಾನೂನಿನ ನೆರವು ನೀಡುತ್ತಿದೆ. ಅದೇ ರೀತಿ ಕೇಂದ್ರ ಸರಕಾರವು ಮಾಡಿದ ‘ಪೌರತ್ವ ತಿದ್ದುಪಡಿ ಕಾನೂನು’ನನ್ನು (CAA) ವಿರೋಧಿಸುತ್ತಿವೆ. ಜಾತ್ಯತೀತ ಭಾರತದಲ್ಲಿ ಈ ರೀತಿಯ ಧರ್ಮಾಧಾರದಲ್ಲಿ ಸಮಾನಾಂತರ ಅರ್ಥವ್ಯವಸ್ಥೆ ನಿರ್ಮಿಸುವುದು ದೇಶದ ಸುರಕ್ಷೆಯ ದೃಷ್ಟಿಯಿಂದ ಅತ್ಯಂತ ಗಂಭೀರವಾಗಿದ್ದು ಸರಕಾರವು ‘ಹಲಾಲ್ ಪ್ರಾಮಾಣೀಕರಣ’ ಪದ್ದತಿಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ನಾಗರಿಕರು ‘ಹಲಾಲ್ ಪ್ರಾಮಾಣಿಕೃತ’ ಉತ್ಪಾದನೆಗಳನ್ನು ಬಹಿಷ್ಕರಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.
ಎಲ್ಲಕ್ಕಿಂತ ಆಘಾತಕಾರಿ ವಿಷಯವೆಂದರೆ ತನ್ನನ್ನು ಜಾತ್ಯತೀತ ಎಂದು ಹೇಳಿಕೊಳ್ಳುವ ಹಿಂದಿನ ಸರಕಾರವು ‘ಭಾರತೀಯ ರೈಲ್ವೆ’, ಏರ್ ಇಂಡಿಯಾ’ ಹಾಗೂ ‘ಪ್ರವಾಸೋದ್ಯಮ ಮಂಡಳಿಯಂತಹ ಸರಕಾರಿ ಸಂಸ್ಥೆಗಳಲ್ಲಿಯೂ ‘ಹಲಾಲ್’ ಅನ್ನು ಕಡ್ಡಾಯ ಮಾಡಲು ಸ್ವಾತಂತ್ರ್ಯ ನೀಡಿದೆ, ಅದೂ ಇನ್ನೂ ಜಾರಿಯಲ್ಲಿದೆ. ಪ್ರಸಿದ್ಧ ‘ಹಲ್ದಿರಾಮ್’ನ ಶುದ್ಧ ಶಾಕಾಹಾರಿ ಆಹಾರವೂ ‘ಹಲಾಲ್ ಪ್ರಾಮಾಣಿಕೃತ’ ಆಗಿದೆ. ಒಣ ಹಣ್ಣು, ಸಿಹಿ ಪದಾರ್ಥ, ಚಾಕಲೇಟ್, ಧಾನ್ಯ, ಎಣ್ಣೆಯಿಂದ ಹಿಡಿದು ಸೋಪು, ಶ್ಯಾಂಪೂ, ಟೂಥಪೇಸ್ಟ್, ಕಾಡಿಗೆ, ಲಿಪ್‌ಸ್ಟಿಕ್ ಇತ್ಯಾದಿ ಸೌಂದರ್ಯವರ್ಧಕಗಳು; ಮ್ಯಾಕ್‌ಡೊನಾಲ್ಡ್‌ನ ಬರ್ಗರ್ ಹಾಗೂ ಡಾಮಿನೋಸ್‌ನ ಪಿಝ್ಝಾ ಇದೂ ಕೂಡಾ ‘ಹಲಾಲ್ ಪ್ರಾಮಾಣಿಕೃತವಾಗಿದೆ. ಇಸ್ಲಾಮೀ ದೇಶಗಳಿಗೆ ರಫ್ತು ಮಾಡುವ ಉತ್ಪಾದನೆಗಳಿಗೆ ‘ಹಲಾಲ್ ಪ್ರಮಾಣಪತ್ರ’ವನ್ನು ಕಡ್ಡಾಯ ಮಾಡಲಾಗಿದೆ; ಆದರೆ ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಈ ಕಡ್ಡಾಯ ಏಕೆ ? ಇದು ಹೀಗೆ ಮುಂದುವರಿದರೆ, ಇದು ಭಾರತವು ‘ಇಸ್ಲಾಮಿಕರಣ’ದತ್ತ ಹೆಜ್ಜೆ ಇಡುತ್ತಿದೆ, ಎಂದು ಹೇಳಿದರೆ ತಪ್ಪಾಗಲಾರದು.
ಭಾರತ ಸರಕಾರದ ‘ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ’ ಹಾಗೂ ಅನೇಕ ರಾಜ್ಯಗಳಲ್ಲಿ ‘ಆಹಾರ ಮತ್ತು ಔಷಧಿ ಪ್ರಾಧಿಕರಣ’ ಈ ವಿಭಾಗಗಳು ಇರುವಾಗ ‘ಹಲಾಲ್ ಪ್ರಮಾಣಪತ್ರ’ ನೀಡುವ ಅನೇಕ ಇಸ್ಲಾಮೀ ಸಂಸ್ಥೆಗಳ ಆವಶ್ಯಕತೆ ಏನಿದೆ ? ಪ್ರತಿಯೊಬ್ಬ ವ್ಯಾಪಾರಿಯಿಂದ ಈ ಹಲಾಲ್ ಪ್ರಮಾಣಪತ್ರಕ್ಕಾಗಿ ಮೊದಲು ೨೧,೫೦೦ ರೂಪಾಯಿ ಹಾಗೂ ಪ್ರತೀವರ್ಷ ನವೀಕರಣಕ್ಕಾಗಿ ೧೫,೦೦೦ ರೂಪಾಯಿ ಪಡೆಯಲಾಗುತ್ತಿದೆ. ಇದರಿಂದ ನಿರ್ಮಾಣವಾದ ಸಮಾನಾಂತರ ಆರ್ಥಿಕತೆಯನ್ನು ನಿಲ್ಲಿಸುವುದು ಅಗತ್ಯವಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ನಿಲುವಾಗಿದೆ. ಅದಕ್ಕಾಗಿ ‘ಭಾರತದಲ್ಲಿ ‘ಹಲಾಲ್’ನ ಅನಾವಶ್ಯಕತೆ’, ‘ಭಾರತದ ಜಾತ್ಯತೀತಕ್ಕೆ ಹಾಕಿದ ಸುರಂಗ’, ಅದೇ ರೀತಿ ‘ಸರಕಾರಕ್ಕೆ ಆಗುತ್ತಿರುವ ಹಾನಿ’ ಇತ್ಯಾದಿ ವಿಷಯಗಳ ಬಗ್ಗೆ ಸಮಿತಿಯು ದೇಶದಾದ್ಯಂತ ಉದ್ಯಮಿಗಳ ಸಭೆ, ಜಾಗೃತಿಪರ ವ್ಯಾಖ್ಯಾನಗಳು, ಅದೇ ರೀತಿ ಸಾಮಾಜಿಕ ಜಾಲತಾಣಗಳಿಂದ ಜಾಗೃತಿಯನ್ನು ಮಾಡುತ್ತಿದೆ.