ಹಸಿರು ಅಭಿಯಾನ, ಡಿ.29 ರಂದು ಚಾಲನೆ
ಉಡುಪಿ: ಸ್ವಚ್ಚ, ಸುಂದರ ಪರಿಸರಕ್ಕಾಗಿ ಶುದ್ದಗಾಳಿ, ನೀರಿನ ಉಳುವಿಗಾಗಿ, ವಿನೂತನ ಪರಿಕಲ್ಪನೆಯ ಹಸಿರು ಅಭಿಯಾನವನ್ನು ಸಾಸ್ತಾನ ಮಿತ್ರರು, ಗೀತಾನಂದ ಫೌಂಡೇಶನ್ ಕೋಟ, ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ (ರಿ) ಸಂಕಲ್ಪಿಸಿದ್ದಾರೆ.
ಹಸಿರು ಅಭಿಯಾನವನ್ನು ಡಿ.29 ಶುಕ್ರವಾರ ಬೆಳಿಗ್ಗೆ 9-30 ಕ್ಕೆ ಉಡುಪಿ ಮಾರುತಿ ವಿಥಿಕಾದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಕಛೇರಿಯ ಮುಂಭಾಗದಲ್ಲಿ ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಪ್ರೀಯಾಂಕ ಮೇರಿ ಪ್ರಾನ್ಸಿಸ್ ಚಾಲನೆ ನೀಡಲಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ಎಸ್.ಜೆ ಕುಮಾರಸ್ವಾಮಿ ಪೊಲೀಸ್ ಉಪ ಅಧಿಕ್ಷಕರು ಉಡುಪಿ ವಿಭಾಗ, ಕ್ಲಿಪ್ಪರ್ಡ್ ಲೋಬೊ, ವಲಯ ಅರಣ್ಯ ಅಧಿಕಾರಿ, ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು, ಅಭಿಯಾನದ ಆಯೋಜಕಾರದ ಸಾಸ್ತಾನ ಮಿತ್ರರು. ಹ.ರಾ.ವಿನಯಚಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.