Home Mangalorean News Kannada News ಹಸಿವು ಮುಕ್ತ ರಾಜ್ಯ ನನ್ನ ಕನಸು: ಸಿದ್ದರಾಮಯ್ಯ

ಹಸಿವು ಮುಕ್ತ ರಾಜ್ಯ ನನ್ನ ಕನಸು: ಸಿದ್ದರಾಮಯ್ಯ

Spread the love

ಮಂಗಳೂರು: ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವುದೇ ನನ್ನ ಗುರಿಯಾಗಿದ್ದು ಮುಂದಿನ ದಿನಗಳಲ್ಲಿ ಎಪಿಎಲ್ ಕಾರ್ಡುದಾರರಿಗೂ ಕಡಿಮೆ ದರದಲ್ಲಿ ಅಕ್ಕಿ ಹಾಗೂ ಗೋಧಿ ವಿತರಿಸಲಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅವರು ಉಳ್ಳಾಲ ಸಯ್ಯಿದ್ ಮದನಿ ದರ್ಗಾದ 423ನೇ ವಾರ್ಷಿಕ ಹಾಗೂ 20ನೇ ಪಂಚವಾರ್ಷಿಕ ಉರೂಸ್ ಪ್ರಯಕ್ತ ನಡೆದ ರಾಜಕೀಯ ಹಾಗೂ ಸಾಮಾಜಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ 1ರೂ. 30ಕೆಜಿ ಅಕ್ಕಿ ವಿತರಣೆ ನಡೆಯುತ್ತಿದೆ. ಮುಂದಿನ ಮೇ 1ರಿಂದ 1ರೂ. ಕೂಡ ಪಡೆಯಾದೇ ವಿತರಿಸಲಾಗುವುದು. ಎಪಿಎಲ್ ಕಾರ್ಡುದಾರರಿಗೂ ಕಡಿಮೆ ದರದಲ್ಲಿ ಅಕ್ಕಿ ಮತ್ತು ಗೋಧಿಯನ್ನು ಸರ್ಕಾರ ವಿತರಿಸಲಿದೆ ಎಂದು ತಿಳಿಸಿದರು.

Click Here for more Photos

ಸಮಾಜದಲ್ಲಿ ಮತಾಂಧ ಶಕ್ತಿಗಳು ಸಾಮರಸ್ಯ ಹಾಳು ಮಾಡಲು ಪ್ರಯತ್ನ ನಡೆಸುತ್ತಿದೆ. ಅವರ ಪ್ರಯತ್ನಕ್ಕೆ ಯಶಸ್ಸು ಸಿಗದಂತೆ ನೋಡಿಕೊಳ್ಳ ಬೇಕಾಗಿದೆ. ಸಂವಿಧಾನದ ಆಶಯದಂತೆ ಸರ್ಕಾರ ಆಡಳಿತ ನಡೆಸುತ್ತಿದ್ದು ಸಮಾಜದ ಎಲ್ಲಾ ಧರ್ಮದ ಉದ್ದಾರವನ್ನು ಬಯಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಖಮರುಲ್ ಇಸ್ಲಾಂ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ನಗರಾಭಿವದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕರಾದ  ಬಿ.ಎ. ಮೊಯ್ದಿನ್ ಬಾವಾ, ಜೆ.ಆರ್.ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್  ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.


Spread the love

Exit mobile version