ಹಾಮದ್ ಸಾವಿಗೆ ತೇಜಸ್ವಿನಿ‌ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ: ಡಿವೈಎಫ್ಐ ಸಂತೋಷ್ ಬಜಾಲ್

Spread the love

ಹಾಮದ್ ಸಾವಿಗೆ ತೇಜಸ್ವಿನಿ‌ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ: ಡಿವೈಎಫ್ಐ ಸಂತೋಷ್ ಬಜಾಲ್

ತೇಜಸ್ವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಒಳಗಾಗಿ ಸಾವನ್ನಪ್ಪಿದ ಪಂಜಿಮೊಗರು ನಿವಾಸಿ ಹಾಮದ್ ಎಂಬವರ ಸಾವಿಗೆ ನ್ಯಾಯ ಒದಗಿಸುವ ಮತ್ತು ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಲು ಒತ್ತಾಯಿಸಿ ಡಿವೈಎಫ್ಐ ಪಂಜಿಮೊಗರು ಘಟಕ ನೇತೃತ್ವದಲ್ಲಿ ಇಂದು ಮಿನಿವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು.

ಡಿಸೆಂಬರ್ 21ರಂದು ಅಪಘಾತಗೊಳಗಾದ ಹಾಮದ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರೂ ಗಂಭೀರ ಗಾಯಗಳನ್ನು ಗುರುತಿಸಿ ಚಿಕಿತ್ಸೆ ನೀಡುವಲ್ಲಿ ತೇಜಸ್ವಿನಿ ಆಸ್ಪತ್ರೆ ಬೇಜಾವಾಬ್ದಾರಿ ವರ್ತನೆ ತೋರಿಸಿದ್ದು ಈ ಘಟನೆಗೆ ಕಾರಣ. ಸುಮಾರು ಸಂಜೆ 4.30 ದಾಖಲಾಗಿರುವ ಹಾಮದ್ ಅವರನ್ನು ಪರೀಕ್ಷಿಸಿದ ವೈದ್ಯರ ತಂಡ ಕೇವಲ ಮೂಳೆ ಮುರಿತಗೊಳಗಾಗಿರುವುದನ್ನು ಪತ್ತೆ ಹಚ್ಚಿರುತ್ತಾರೆಯೆ ಹೊರತು ತಲೆಗಾದ ಬಲವಾದ ಗಾಯವನ್ನು ಹೆಚ್ಚಿನ ಪರೀಕ್ಷೆಗೊಳಪಡಿಸಿರುವುದಿಲ್ಲ ಎಂಬುದು ಕುಟುಂಬಸ್ಥರ ಬಲವಾದ ಆರೋಪ. ಕಾಲಿನ ಸರ್ಜರಿ ನಡೆಸಲಷ್ಟೇ ಪ್ಯಾಕೇಜ್ ಮೊತ್ತದ ಬಗ್ಗೆ ಚರ್ಚೆ ನಡೆಸಿ 20000 ಮುಂಗಡ ಹಣ ಪಾವತಿಸಲು ಒತ್ತಾಯಿಸಿರುವರೇ ಹೊರತು ತಲೆಯ ಗಾಯಗಳ ಬಗ್ಗೆ ಪ್ರಸ್ತಾಪಗಳೇ ಇರಲಿಲ್ಲ. ಹಾಗಾದರೆ ಹಾಮದ್ ಅವರ ಆರೋಗ್ಯ ಏರುಪೇರಾಗುವವರೆಗೂ ತಲೆಯಲ್ಲಿದ್ದ ಗಾಯ ಪತ್ತೆ ಹಚ್ಚಿ ಹೆಚ್ಚಿನ ಪರೀಕ್ಷೆ ನಡೆಸುವಲ್ಲಿನ ವಿಳಂಬತನವು ಇವರ ನಿರ್ಲಕ್ಷ್ಯತನವನ್ನು ಮತ್ತು ಚಿಕಿತ್ಸಾ ಲೋಪವನ್ನು ಎತ್ತಿತೋರಿಸುತ್ತಿದೆ. ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿದರೂ ಕೇವಲ ಖಾಸಗೀ ಆಸ್ಪತ್ರೆ ಪರವಾದ ವರದಿಗಳನ್ನು ನೀಡುತ್ತಿರುವುದು ಖೇದಕರ. ತೇಜಸ್ವಿನಿ ಆಸ್ಪತ್ರೆ ತಪ್ಪಾದ ಚಿಕಿತ್ಸಾ ಕ್ರಮಕ್ಕೆ ಹಾಮದ್ ಜೀವ ಬಲಿಯಾಗಿದೆ ಈ ಬಗ್ಗೆ ಸಮಗ್ರ ತನಿಖೆಗೊಳಪಡಿಸಿ ನ್ಯಾಯಯುತ ಪರಿಹಾರ ಒದಗಿಸಿಕೊಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಮಂಗಳೂರು ನಗರ ಅದ್ಯಕ್ಷ ಜಗದೀಶ್ ಬಜಾಲ್, ಜಿಲ್ಲಾ ಮುಖಂಡ ರಿಜ್ವಾನ್ ಹರೇಕಳ, ಡಿವೈಎಫ್ಐ ಪಂಜಿಮೊಗರು ಘಟಕ ಅಧ್ಯಕ್ಷರು Adv ಚರಣ್ ಶೆಟ್ಟಿ, ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಶ್ರೀಮತಿ ಪ್ರಮೀಳಾ, ಮೃತ ಹಾಮದ್ ರವರ ಮಗ ಹನೀಫ್ , ಕಲಂದರ್, ಡಿವೈಎಫ್ಐ ಮುಖಂಡರಾದ ನೌಶಾದ್, ಬಶೀರ್, ಅಝರ್ , ಹನುಮಂತ, ಖಲೀಲ್, , ಅಸುಂತಾ ಡಿಸೋಜ, ಸೋಮೇಶ, ನವೀನ್ ಡಿಸೋಜ, ಖಾದರ್, ಮುಸ್ತಾಫ , ಹಕೀಂ ಮಾಹಿಲಾ, ಅಬೂಬಕರ್, ಕಲಂದರ್, ಶೆರೀಫ್, ಸಿದ್ದಿಕ್, ಅನೀಸ್, ಹಮೀದ್ , ಶೇರು ಬಾನು, ತ್ರಿಶಾ, ಸೋಮನಾಥ್ ಮುಂತಾದವರು ಉಪಸ್ಥಿತಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments