Home Mangalorean News Kannada News ಹಾಸನ ಲೈಂಗಿಕ ದೌರ್ಜನ್ಯ ವಿಡಿಯೊ ಹಂಚಿಕೊಳ್ಳುವವರ ವಿರುದ್ದವೂ ಪ್ರಕರಣ ; ಎಸ್ ಐ ಟಿ ಎಚ್ಚರಿಕೆ

ಹಾಸನ ಲೈಂಗಿಕ ದೌರ್ಜನ್ಯ ವಿಡಿಯೊ ಹಂಚಿಕೊಳ್ಳುವವರ ವಿರುದ್ದವೂ ಪ್ರಕರಣ ; ಎಸ್ ಐ ಟಿ ಎಚ್ಚರಿಕೆ

Spread the love

ಹಾಸನ ಲೈಂಗಿಕ ದೌರ್ಜನ್ಯ ವಿಡಿಯೊ ಹಂಚಿಕೊಳ್ಳುವವರ ವಿರುದ್ದವೂ ಪ್ರಕರಣ ; ಎಸ್ ಐ ಟಿ ಎಚ್ಚರಿಕೆ

ಹಲವು ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಆ್ಯಪ್ ಗಳಲ್ಲಿ ಹಂಚಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಯಾರಾದರೂ ಹಂಚಿಕೊಳ್ಳುವುದು ಪತ್ತೆಯಾದರೆ ಅಂಥವರ ವಿರುದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಎಎಸ್ ಐ ಟಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಎಸ್ ಐ ಟಿ ಮುಖ್ಯಸ್ಥ ಬಿ ಕೆ ಸಿಂಗ್ ವಿಡಿಯೊ ಹಂಚಿಕೊಳ್ಳುವವವರನ್ನು ತಂತ್ರಜ್ಞಾನ ಸಹಾಯದಿಂದ ಪತ್ತೆ ಹಚ್ಚಲು ಸಾಧ್ಯವಿದೆ. ಸಂತ್ರಸ್ಥೆಯ ಘನತೆ ಹಾಗೂ ಗೌಪ್ಯತೆಗೆ ಕುಂದುಂಟು ಮಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದಿದ್ದಾರೆ.

ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರು ಎಸ್ ಐ ಟಿ ಕಚೇರಿಗೆ ಬರುವ ಅಗತ್ಯವಿಲ್ಲ. ಸಹಾಯವಾಣಿ 6360938947 ಮೂಲಕ ಸಂಪರ್ಕಿಸಿ ದೂರು ನೀಡಬಹುದು. ದೂರು ಕೊಟ್ಟವರ ವೈಯುಕ್ತಿಕ ವಿವರವನ್ನು ಗೌಪ್ಯವಾಗಿರಿಸಲಾಗುವುದು. ವೈದ್ಯರು ಹಾಗೂ ವೃತ್ತಿಪರರಿಂದ ಕೌನ್ಸೆಲಿಂಗ್ ಮಾಡಿಸಲಾಗುವುದು. ಸಂತ್ರಸ್ತೆಯರು ಹೆದರಿಕೊಳ್ಳುವು ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮ ಸಂಸ್ಥೆಗಳು, ವ್ಯಕ್ತಿಗಳು, ಸಂಘಸಂಸ್ಥೆಗಳು ಅಥವಾ ಇತರರು ಸಂತ್ರಸ್ತೆಯರ ಗುರುತು ಬಹಿರಂಗಪಡಿಸಬಾರದು. ಈ ವಿಚಾರದಲ್ಲಿ ನಿಯಮ ಮೀರಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ.


Spread the love

Exit mobile version