ಹಿಂದೂಗಳು ಕ್ರಿಶ್ಚಿಯನ್ ಮತ್ತು ಮುಸ್ಲಿಂರಿಗೆ ಶಾಂತಿಯುತವಾಗಿ ಬದುಕುವ ಅವಕಾಶ ನೀಡಿದ್ದಾರೆ; ಕಸ್ತೂರಿ ಪಂಜ
ಮಂಗಳೂರು: ಹಿಂದೂಗಳು ಕ್ರಿಶ್ಚಿಯನ್ ಮತ್ತು ಮುಸ್ಲಿಂರಿಗೆ ಶಾಂತಿಯುತವಾಗಿ ಬದುಕುವ ಅವಕಾಶವನ್ನು ಈ ದೇಶದಲ್ಲಿ ಹಿಂದೂಗಳು ಒದಗಿಸಿಕೊಟ್ಟಿದ್ದಾರೆ ಎಂದು ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಅವರು ಹಿಂದೂ ರಕ್ಷಣಾ ವೇದಿಕೆಯಿಂದ ಪರೇಶ್ ಮೇಸ್ತ ಅವರ ಸಾವಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಆಯೋಜಿಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪರೇಶ್ ಮೇಸ್ತ ಅವರ ಸಾವಿನ ಕುರಿತು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದು, ಹಿಂದೂಗಳ ಮೇಲೆ ನಡೆದ ಕೊಲೆಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಲಿ. ಪರೇಶ್ ಮೇಸ್ತರನ್ನು ಅಪಹರಿಸಿ ಅಮಾನುಷವಾಗಿ ಮುಸ್ಲಿಂ ಭಯೋತ್ಪಾದಕರು ಕೊಂದಿದ್ದಾರೆ. ಹಿಂದೂ ಸಮಾಜ ಎನ್ನುವುದು ಒಂದು ಸಾಗರವಿದ್ದಂತೆ. ಹಿಂದೂಗಳು ಕ್ರೈಸ್ತರಿಗೆ ಮತ್ತು ಮುಸ್ಲಿಂರಿಗೆ ಭಾರತದಲ್ಲಿ ಶಾಂತಿಯುತವಾಗಿ ಬದುಕಲು ಅವಕಾಶ ನೀಡಿದ್ದಾರೆ. ಹಿಂದೂಗಳ ಉದಾರತೆಯ ಪರಿಣಾಮ ಅವರು ದೇಶದಲ್ಲಿ ಶಾಂತಿಯುತವಾಗಿ ಬದುಕುತ್ತಿದ್ದಾರೆ. ಪರೇಶ ಮೇಸ್ತನ ಕೊಲೆಯ ಬಳಿಕ ಹೊನ್ನಾವರದಲ್ಲಿ ಪೋಲಿಸರು ಹಿಂದೂಗಳ ಮನೆಗಳನ್ನು ನುಗ್ಗಿ ದ್ವಂಸಗೊಳಿಸಿದ್ದಾರೆ. ಅದೇ ಮುಸ್ಲಿಂ ಯಾರದಾರೂ ಸತ್ತರೆ ಅವರ ಮನೆಯನ್ನೂ ಕೂಡ ಇದೇ ರೀತಿಯಲ್ಲಿ ನುಗ್ಗಿ ದ್ವಂಸಗೊಳಿಸುತ್ತಿದ್ದರೂ ಎಂದು ಪ್ರಶ್ನಿಸಿದರು. ಪೋಲಿಸರು ಕಾಂಗ್ರೆಸಿನ ಏಜೆಂಟರಾಗಿ ವರ್ತಿಸುವುದು ಖಂಡನೀಯ ಎಂದರು.
ಹಿಂದೂಗಳು ಎಲ್ಲಾ ಸಮಯದಲ್ಲಿ ಮೌನವಾಗಿ ಕುಳಿತುಕೊಳ್ಳುವುದಿಲ್ಲ ಯಾರಾದರೂ ಹಿಂದೂಗಳನ್ನು ಕೆಣಕುವ ಕೆಲಸ ಮಾಡಿದ್ದರೆ ನಮ್ಮ ಯುವಕರು ಕೂಡ ಅಂತಹವರನ್ನು ನಾಶಮಾಡುವ ಕೆಲಸಮಾಡಲಿದ್ದಾರೆ ಎಂದರು.
ಇತ್ತೀಚೆಗೆ ಪ್ರಿಯಾಂಕ ಎನ್ನುವ ಯುವತಿ ಮುಸ್ಲಿಂ ಯುವಕರಿಂದ ಅಪಹರಣವಾಗಿದ್ದು, ಆದರೆ ಮುಸ್ಲಿಂರು ಅವರ ಯುವತಿಯರನ್ನು ಬುರ್ಕಾದೊಂದಿಗೆ ಮುಚ್ಚಿಡುತ್ತಾರೆ. ಹಿಂದು ಮಾತೆಯರು ಕೂಡ ಮನಸ್ಸು ಮಾಡಿದರೆ ಮುಸ್ಲಿಂರಿಗೆ ಸೂಕ್ತ ಉತ್ತರ ನೀಡಲು ಶಕ್ತರಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಸಚಿವ ಯು ಟಿ ಖಾದರ್ ಅವರು ದೊಡ್ಡ ಸುಳ್ಳುಗಾರರಾಗಿದ್ದು, ರೈ ಮತ್ತು ಖಾದರ್ ಅವರು ಮುಸ್ಲಿಂರು ಹಿಂದೂಗಳಿಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಬೇಕು. ಯಾರಾದರೂ ಹಿಂದೂಗಳಿಗೆ ತೊಂದರೆಯುನ್ನು ಉಂಟುಮಾಡಿದ್ದಲ್ಲಿ ಹಿಂದೂ ಯುವಕರು ಸೂಕ್ತ ಉತ್ತರ ನೀಡಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಾಗಲಿದೆ. ಅಲ್ಲದೆ ಪೋಲಿಸರು ಕೂಡ ಹಿಂದೂಗಳ ವಿರುದ್ದ ವರ್ತಿಸುವುದನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಮುಂದೆ ಬರುವ ಬಿಜೆಪಿ ಸರಕಾರ ಕೂಡ ಅವರಿಗೂ ಸೂಕ್ತ ಉತ್ತರ ನೀಡಲಿದೆ ಎಂದರು.
ಮೋನಪ್ಪ ಭಂಡಾರಿ, ಜಗದೀಶ್ ಶೇಣವ, ಭುಜಂಗ ಕುಲಾಲ್, ಸತ್ಯಜಿತ್ ಸುರತ್ಕಲ್ ಹಾಗೂ ಇತರರು ಉಪಸ್ಥಿತರಿದ್ದರು.