ಹಿಂದೂಗಳ ಕಾರ್ಯಕ್ರಮಕ್ಕೆ ತಲವಾರು ಹಿಡಿದ 50 ಮಂದಿ ಶ್ರೀರಾಮಸೇನೆ ಕಾರ್ಯಕರ್ತರಿಂದ ರಕ್ಷಣೆ – ಗಂಗಾಧರ ಕುಲಕರ್ಣಿ
ಮಂಗಳೂರು: ಇನ್ನು ಮುಂದೆ ಹಿಂದೂ ಧಾರ್ಮಿಕ ಕಾರ್ಯಕ್ರಮ ಮೆರವಣಿಗೆಗೆ ಶಸ್ತ್ರಸಜ್ಜಿತ ತಲವಾರು ಹಿಡಿದ 50 ಮಂದಿ ಶ್ರೀರಾಮಸೇನೆ ಕಾರ್ಯಕರ್ತರು ಇನ್ನುಮುಂದೆ ರಕ್ಷಣೆ ನೀಡಲಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲ್ಕರ್ಣಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಇಂದು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದಲ್ಲಿ ಜಿಹಾದಿ ಶಕ್ತಿಗಳು ಹದ್ದು ಮೀರುತ್ತಿವೆ. ಮುಸಲ್ಮಾನ ಪುಂಡರು ನಾಗಮಂಗಲ , ದಾವಣಗೆರೆಯಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಪೆಟ್ರೋಲ್ ಬಾಂಬ್ ಹಾಕುವಂತ ಮಟ್ಟಕ್ಕೆ ಬಂದು ನಿಂತಿದ್ದು, ಇದಕ್ಕೇ ನೇರ ಕಾಂಗ್ರೆಸ್ ಸರಕಾರವೇ ಕಾರಣ ಎಂದರು.
ಮುಸ್ಲಿಂ ಗೂಂಡಾಗಳು ಬಹಿರಂಗವಾಗಿ ಈಗ ಇರುವುದು ನಮ್ಮ ಸರಕಾರ ಎಂದು ಹೇಳುತ್ತಿದ್ದು ಇವರ ಉದ್ಘಾಟತನಕ್ಕೆ ರಾಜ್ಯ ಸರಕಾರ ಕಾರಣ. ರಾಜ್ಯ ಸರಕಾರ ಸಂಪೂರ್ಣವಾಗಿ ಅವರ ಜೊತೆಗೆ ನಿಂತಿದೆ. ಗೃಹ ಮಂತ್ರಿಗಳಿಗೆ ನಾಚಿಕೆ ಮಾನ ಮರ್ಯಾದೆ ಇದೆಯೋ ಗೊತ್ತಿಲ್ಲ ಅವರು ನಾಗಮಂಗಲ ಘಟನೆ ಆಕಸ್ಮಿಕ ಘಟನೆ ಎನ್ನುತ್ತಿದ್ದು ಅವರೊಬ್ಬ ಅಯೋಗ್ಯ ಗೃಹಮಂತ್ರಿ ಎಂದರು ಹೇಳಿದರು.
ವ್ಯವಸ್ಥಿತಿವಾಗಿ ನಡೆಸಲಾದ ಗಲಭೆ ಆಕಸ್ಮಿಕ ಅಂತ ತೋರುತ್ತಿದೆಯಾ: ಇದೇ ಮುಸ್ಲಿಂ ಗೂಂಡಾಗಳಿಗೆ ಪ್ರೇರಣೆ ಆಗುತ್ತಿದ್ದು, ಇದರ ಹಿಂದೆ ಪಿ ಎಫ್ ಐ ಯವರಿದ್ದಾರೆ. ಮೂರು ನಾಲ್ಕು ದಿನದ ಮುಂಚಿತವಾಗಿ ಅವರು ಬಂದು ನಾಗಮಂಗಲದಲ್ಲಿ ಇದ್ದರು. ಈ ಕೂಡಲೇ ಗೃಹಸಚಿವರು ರಾಜೀನಾಮೆ ನೀಡಬೇಕು ಎಂದರು
ನಾನು ಮುಸ್ಮಿಂ ಗುಂಡಾಗಳಿಗೆ ಹೇಳುತ್ತಿದ್ದೇನೆ ಕೈಯಲ್ಲಿ ಕಲ್ಲು ಹಿಡಿಯಲು ತಲವಾರು ಹಿಡಿಯಲು ಹಿಂದೂ ಸಮಾಜಕ್ಕೆ ಗೊತ್ತಿಲ್ಲ ಅಂದುಕೊಳ್ಳಬೇಡಿ. ಮುಂಬರುವ ಗಣೇಶನ ಮೆರವಣಿಗೆ ಸೇರಿದಂತೆ ಇನ್ನಿತರ ಹಿಂದೂ ಧಾರ್ಮಿಕ ಕಾರ್ಯಕ್ರಮ ಮೆರವಣಿಗೆ ನಾವು ರಕ್ಷಣೆ ನೀಡುತ್ತೇವೆ. ತಲವಾರು ಸಮೇತ 50 ಮಂದಿ ಶ್ರೀರಾಮಸೇನೆಯ ಕಾರ್ಯಕರ್ತರು ರಕ್ಷಣೆ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ನಿರ್ದಾರ ಕೈಗೊಳ್ಳಲಾಗಿದೆ. ಈ ರಾಜ್ಯ ಸರಕಾರದಿಂದ ನಮಗೆ ರಕ್ಷಣೆ ಇಲ್ಲ ಅನ್ನೋದು ಸಾಬೀತಾಗಿದ್ದು ಅದಕ್ಕೆ ನಾವೇ ರಕ್ಷಣೆಗೆ ಶಸ್ತ್ರ ಹಿಡಿಯುತ್ತೇವೆ ಎಂದರು.