ಹಿಂದೂ ಜಾಗರಣ ವೇದಿಕೆ ಅಗೋಲಿ ಮಂಜಣ್ಣ ಘಟಕ ಉದ್ಘಾಟನೆ
ಸುರತ್ಕಲ್ : ಸುರತ್ಕಲ್ ನಗರ ವಾಪ್ತೀಯ ಕಟ್ಲ ಪ್ರದೇಶ ದಲ್ಲಿ ನೂತನವಾಗಿ ಹಿಂದೂ ಜಾಗರಣ ವೇದಿಕೆ ಅಗೋಲಿ ಮಂಜಣ್ಣ ಘಟಕ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಪ್ರಾಸ್ತವಿಕ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಸುರತ್ಕಲ್ ನಗರ ಸಂಚಾಲಕ ಪುಷ್ಪರಾಜ್ ಕುಳಾಯಿ, ಸೋಲು ಎಂಬುದಕ್ಕೆ ಈ ಜಗತ್ತಿನಲ್ಲಿ ಜಾಗವಿಲ್ಲದಂತೆ ವೀರತ್ವದ ಹಿಂದೂ ಸಿದ್ಧಾಂತ ವನ್ನು ಇಡೀ ಜಗತ್ತಿಗೆ ಸಾರಿದ ಏಕೈಕ ರಾಷ್ಟ್ರ ಭಾರತವಾಗಿದ್ದು, ನಮ್ಮ ದೇಶದ, ಧರ್ಮದ ಮುಂದಿರುವಂತಹ ಎಲ್ಲ ಸವಾಲು ಗಳಿಗೂ ಉತ್ತರ ಒಂದೇ ಹಿಂದೂಗಳ ಸಂಘಟನೆ ಎಂದು ತಿಳಿಸಿದರು.
ಪ್ರಧಾನ ಭಾಷಣ ಮಾಡಿದ ಹಿಂಜಾವೇ ಜಿಲ್ಲಾ ಅಧ್ಯಕ್ಷ ಕಿಶೋರ್ ಕುಮಾರ್, ಹಿಂದೂ ಜಾಗರಣ ವೇದಿಕೆ ಈ ದೇಶದ ಪ್ರತಿಯೊಬ್ಬ ಪ್ರಜೆಯನ್ನು ರಾಷ್ಟ್ರ ಭಕ್ತನಾಗಿಸುವ ಜೋತೆಗೆ, ನಮ್ಮ ಸಮಾಜದ ಮೇಲೆ ಆದ ಎಲ್ಲ ಆಕ್ರಮಣವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಕೀರ್ತಿ ಹಿಂದೂ ಜಾಗರಣದ ವೇದಿಕೆಯದು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಹಿಂಜಾವೇ ಮಹಾ ನಗರ ಸಹ ಸಂಚಾಲಕ ಬಾಲಕೃಷ್ಣ ಮೂಂಚೂರು ಮತ್ತು ವಿಶ್ವನಾಥ್ ಶೆಟ್ಟಿ ಮಾತನಾಡುತ ಈ ಭಾಗದಲ್ಲಿ ಸಂಘಟನೆ ಪರಿಣಾಮಕಾರಿಯಾಗಿ ಹಿಂದೂ ಗಳನ್ನು ಸಂಘಟಿಸುವಂತ್ಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಹಿಂಜಾವೆಯ ಸತೀಶ್ ಮುಂಚೂರು, ಬಾಲಕೃಷ್ಣ ಮುಂಚೂರು, ವಿಶ್ವನಾಥ ಶೆಟ್ಟಿ ಉಪಸ್ಧಿತರಿದ್ದರು. ಘಟಕದ ಪ್ರಮುಖರದ ನವನೀತ್,ಅಕೀಲ್, ಶ್ರೀಜಾನ್,ಕೌಶಿಕ್ ಹಾಗೂ ಪ್ರಮುಖರದ ಸತ್ಯಜೀತ್ ಸುರತ್ಕಲ್, ಕಿಶೋರ್ ಕಟ್ಲ, ಮನಪಾ ಸದಸ್ಯ ಗುಮಶೇಖರ್ ಶೆಟ್ಟಿ, ಗಿರೀಶ್ ಕಟ್ಲ, ವಿಜಯ್ ಕಟ್ಟಿಪಳ್ಲ, ಹೇಮ್ ರಾಜ್ ಇಡ್ಯ, ಭರತ್ ಅಗರಮೇಲು ಮತ್ತು ನೂರಾರು ಸಂಖ್ಯೆಯ ಕಾರ್ಯಕರ್ತರು ಹಾಜರಿದ್ದರು.